ಸಿರುಗುಪ್ಪ: ತಾಲೂಕಿನ ಟಿ. ರಾಂಪುರ ಗ್ರಾಮದಲ್ಲಿ ಗ್ರಾಮದೇವತೆ ಶಾಂಭವಿ ದೇವಸ್ಥಾನದಲ್ಲಿ ಪುರಾಣ ಪ್ರವಚನ ಕಾರ್ಯಕ್ರಮದ ಅಂಗವಾಗಿ ಸುಮಂಗಲೆಯರಿಗೆ ಉಡಿತುಂಬುವ ಕಾರ್ಯಕ್ರಮನಡೆಯಿತು. ಮಹಿಳೆಯರಿಂದ ರಥೋತ್ಸವ ಕಾರ್ಯ ನೆರವೇರಿಸಲಾಗಿತ್ತು ಆ ಕಾರ್ಯಕ್ರಮದ ಸಾನಿಧ್ಯವನ್ನು ವಹಿಸಿಆಶೀರ್ವಚನ ನೀಡಿದ ಶ್ರೀ ಅಭಿನವ ಮಹಾಂತ ಶ್ರೀಗಳು ಪುರಾತನ ಕಾಲದಿಂದಲೂ ನಮ್ಮಹಿಂದೂ ಧರ್ಮದಲ್ಲಿ ಪುರಾಣ, ಪ್ರವಚನ, ಆದ್ಯಾತ್ಮಿಕ ಚಿಂತನೆಗಳಿಗೆ ರಾಜ ಮಹರಾಜರ ಕಾಲದಿಂದಲೂ ಐತಿಹಾಸಿಕ ಹಿನ್ನಲೆಯಿದ್ದು, ತಮ್ಮ ಇಷ್ಟರ‍್ಥಗಳ ಈಡೇರಿಕೆಗಾಗಿ, ಪ್ರಜೆಗಳ ಹಿತಕ್ಕಾಗಿ, ಕೋಟೆಕೊತ್ತಲುಗಳಲ್ಲಿ ಶ್ರೀದೇವಿಯನ್ನು ಶರನ್ನವರಾತ್ರಿಯಲ್ಲಿ ವಿಶೇಷವಾಗಿ ಪೂಜೆ ಸಲ್ಲಿಸುವುದರೊಂದಿಗೆ ಇಷ್ಟಾರ್ಥಗಳನ್ನು ಫಲಿಸಿಕೊಂಡ ಅನೇಕ ಉದಾಹರಣೆಗಳಿವೆ.ನವರಾತ್ರಿಗಳಲ್ಲಿ ಶ್ರೀದೇವಿಯು ೯ ದಿನಗಳಲ್ಲಿ ವಿವಿಧ ರೀತಿಯಲ್ಲಿ ಅವತಾರಗಳಿಂದ ದುಷ್ಟರ ನಿಗ್ರಹ ಮಾಡಿ ಭಕ್ತರ ಇಷ್ಟಾರ್ಥಗಳನ್ನು ನೆರವೇರಿಸಿದ್ದಾಳೆ ಗ್ರಾಮದ ಒಳಿತಿಗಾಗಿ ಪಲ್ಲಕ್ಕಿ ಉತ್ಸವ ಮನೆಮನೆಗೆ ತೆರಳಿ ದಿವ್ಯದರ್ಶನ ನೀಡಲಾಯಿತು.ನಂದಿಕೋಲು ಡೊಳ್ಳು ಕುಣಿತ ಭಜನೆ ಬಹಳ ಅದ್ದೂರಿ ಮೆರವಣಿಗೆ.ವಿಜ್ರಂಭಣೆಯಿಂದ ನಡೆಯಿತು ಹಾಗೆ ದಸರಾ ವಿಶೇಷತೆಯಾಗಿ ಮಹಿಳೆಯರಿಗೆ 3ನೇ ವರ್ಷದರ ಥೋತ್ಸವ ಕಾರ್ಯಕ್ರಮ ಅದ್ದೂರಿಯಿಂದ ಯಶಸ್ವಿಯಾಗಿ ನೆರವೇರಿಸಲಾಯಿತು.