ಇಂದು ನಾವು ರಾಷ್ಟ್ರೀಯ ಅಡಿಕೆ ದಿನವನ್ನು ಆಚರಣೆ ಮಾಡುತ್ತಿರುವುದು ನಮಗೆಲ್ಲ ತಿಳಿದಿರುವ ವಿಚಾರ.ಇದರ ಬಗ್ಗೆ ಮತ್ತಷ್ಟು ವಿಚಾರಗಳನ್ನು ತಿಳಿಯೋಣ. ಅಡಿಕೆ ಒಂದು ತೋಟಗಾರಿಕಾ ಬೆಳೆ. ಇದನ್ನು ಸಂಸ್ಕೃತದಲ್ಲಿ ಪೂಗ ಎಂದು ಮರಾಠಿ ಮತ್ತು ಗುಜರಾತಿಯಲ್ಲಿ ಸುಪಾರಿಎಂದು ಕರೆಯಲಾಗುತ್ತದೆ. ಇದನ್ನು ಮೊದಲು ಬೆಳೆದ ಮೂಲ ದೇಶ ಮಲೇಶಿಯಾ ಆಗಿದೆ. ದಕ್ಷಿಣ ಏಷ್ಯಾ ಮತ್ತು ಆಫ್ರಿಕಾದ ಕೆಲವು ಪ್ರದೇಶಗಳಲ್ಲಿ ಹೆಚ್ಚು ಬೆಳೆಯಲಾಗುತ್ತದೆ. ಕರ್ನಾಟಕದಲ್ಲಿ ಮಲೆನಾಡು ಮತ್ತು ಕರಾವಳಿಯಲ್ಲಿ ವ್ಯಾಪಕವಾಗಿ ಬೆಳೆಯುತ್ತಾರೆ. ಗುಜರಾತ್ರಾಜ್ಯವುಅಡಿಕೆಯ ಮುಖ್ಯ ಮಾರುಕಟ್ಟೆಯ ರಾಜ್ಯವಾಗಿದೆ.
ಅಡಿಕೆಯು ಅರಕಾಸಿಯೆಸಿಎನ್ನುವ ಕುಟುಂಬಕ್ಕೆ ಸೇರಿದಸಸ್ಯ ಮತ್ತು ತಾಳೆ ಜಾತಿಗೆ ಸೇರಿದೆ. ಅಡಿಕೆಯನ್ನು ತಾಂಬೂಲದಲ್ಲಿ ವೀಳ್ಯದೆಲೆಯೊಂದಿಗೆ ತಿನ್ನಲು ಉಪಯೋಗಿಸುತ್ತಾರೆ. ದಿನದಿಂದ ದಿನಕ್ಕೆ ಅಡಿಕೆಯಲ್ಲಿಹೆಚ್ಚಿನ ಆವಿಷ್ಕಾರಗಳು ನಡೆದು ಗುಟ್ಕಾ, ಸಿಹಿ ಅಡಿಕೆ, ಬೀಡಾಮುಂತಾದವುಗಳಲ್ಲಿ ಬಳಸುತ್ತಾರೆ. ಅಷ್ಟೇ ಅಲ್ಲದೆ ಇತ್ತೀಚಿಗೆ ಟೀ ಕೂಡ ಮಾಡಲಾಗುತ್ತಿದ್ದು ಅರೇಕಾ ಟೀ ಎಂದು ಪ್ರಸಿದ್ಧಿ ಪಡೆದಿದೆ. ಧಾರ್ಮಿಕ ವಿಧಿ ವಿಧಾನಗಳಲ್ಲಿಯೂ ಕೂಡ ಅಡಿಕೆಯು ತುಂಬಾ ಪ್ರಾಧ್ಯಾನತೆ ಪಡೆದಿದೆ. ಭಾರತದಲ್ಲಿ ಮೊಟ್ಟ ಮೊದಲು ಶಿವಮೊಗ್ಗ ಜಿಲ್ಲೆಯ ಸೊರಬ ತಾಲ್ಲೂಕಿನ ಕ್ಯಾಸನೂರು ಗ್ರಾಮದಲ್ಲಿ ಅಡಿಕೆಯನ್ನು ಕಾಳುಮೆಣಸು ಬೆಳೆಯಲು ಬೆಳೆಸಲಾಯಿತು. ಈ ಊರಿನಲ್ಲಿ ಉತ್ತಮ ತಳಿ ಹಾಗೂ ಇಳುವರಿ ಬರುವ ಅಡಿಕೆ ಮರಗಳು ಸಿಗುವುದನ್ನು ಈಗಲೂ ಕಾಣಬಹುದು.
ಅಡಿಕೆಯ ಮೂರು ಅಥವಾ ನಾಲ್ಕು ಅಡಿಎತ್ತರದ ಎರಡು ವರ್ಷದ ಸಸಿಯನ್ನು೧. ೫×೧. ೫×೧. ೫ಗುಂಡಿ ತೆಗೆದು ಎಂಟು ಅಡಿಗಳ ದೂರದಲ್ಲಿ 14, 16 ಅಡಿ ಅಗಲದ ಪಾತಿಗಳಲ್ಲಿ ಎರಡು ಸಾಲಿನಲ್ಲಿ ನೆಡಲಾಗುವುದು . ಅಡಿಕೆ ಮರವು ತುಂಬಾ ಗಟ್ಟಿಯಾಗಿದ್ದು ಹಲವು ಉಪಯೋಗಗಳಿಗೆ ಬರುವುದು. ಮನೆ ಕಟ್ಟಲು ಎರಡು ಹೋಳು ಮಾಡಿದ ತುಂಡನ್ನು ಮನೆಯ ಮಾಡಿಗೆ (ರೂಫ್ )ಪಕಶಿಯಾಬದಲಿಗೆ ಬಳಸುವರು. ಅದರ ಎರಡು ಇಂಚು ಸಿಗಿದ ಪಟ್ಟಿಯನ್ನು ಹಂಚು ಹಾಕುವ ಅಥವಾ ಉಲ್ಲುಹೊದೆಸುವ ರೀತಿ ಬಳಸುವರು . ಬೇಲಿಗೆ ಅಡ್ಡಪಟ್ಟಿಗೆ ಬಳಸುವರು. ಚಪ್ಪರ ಹಾಕಲು ಬಾಡಿಗೆ ಒಣಗಿಸುವ ಪಟ್ಟಿಗಳನ್ನು ಹತ್ತಿರ ಹತ್ತಿರ ಜೋಡಿಸಿದ ಚಪ್ಪರ ಹಾಕಲು ಉಪಯೋಗಿಸುವರು. ಒಣಗಿಲಡ್ದಾದರೆ ಸೌದೆಯಾಗುವುದು.
ಅಡಿಕೆ ತಳಿಗಳು.
ಕ್ಯಾಸನೂರು ಸೀಮೆ ನಾಟಿ ಅಡಿಕೆ
ಸುಮಂಗಲ ಅಡಿಕೆ
ಸ್ವರ್ಣ ಮಂಗಳ ಅಡಿಕೆ
ಪಾಂಡವರ ಅಡಿಕೆ
ಇಂಟರ್ ಮಂಗಳ ಅಡಿಕೆ
ಮೋಹಿತ್ ನಗರ ಅಡಿಕೆ
ಅಡಿಕೆ ಮರದ ಪ್ರಯೋಜನಗಳು :
೧. ಪೌಷ್ಟಿಕಾಂಶ – ಅಡಿಕೆ ಮರವು ಪ್ರೋಟಿನ್ ಮತ್ತು ಇತರ ಪೌಷ್ಟಿಕ ಖನಿಜಗಳ ಅದ್ಭುತ ಮೂಲವಾಗಿದೆ.
೨. ಪರಿಸರ- ಸಸ್ಯವು ಭೂಮಿ ಪುನರ್ವಸತಿ ಮತ್ತು ಮರು ಅರಣಿಕರಣ ಉಪಕ್ರಮಗಳಲ್ಲಿ ಸಹಾಯ ಮಾಡುತ್ತದೆ.
೩. ಆರೋಗ್ಯ- ಬಾಯಿಯ ಬ್ಯಾಕ್ಟೀರಿಯವನ್ನು ಕಡಿಮೆ ಮಾಡುವ ಮೂಲಕ ಹಲ್ಲುಗಳನ್ನು ಆರೋಗ್ಯಕರವಾಗಿಡಲು ಸಹಾಯ ಮಾಡುತ್ತದೆ.
೪. ಆರ್ಥಿಕ –ಆರ್ಥಿಕವಾಗಿ ಸದೃಢಗೊಳಿಸುತ್ತದೆ.
ಇಷ್ಟೇ ಅಲ್ಲದೆ ಅಡಿಕೆಯು ತುಂಬಾ ಉಪಯುಕ್ತವಾಗಿದೆಎಂದು ಹೆಚ್ಚು ಬಳಸುವಂತಿಲ್ಲ, ಅತಿ ಹೆಚ್ಚು ಸೇವಿಸಿದರೆ ಅನಾರೋಗ್ಯದ ದಾರಿಗೆ ಹೋಗಬೇಕಾಗುತ್ತದೆ ಆದ್ದರಿಂದ ಅಡಿಕೆ ಬಳಕೆ ಹಿತಮಿತವಾಗಿರಬೇಕು.
ಒಟ್ಟಾರೆಯಾಗಿ ಅಡಿಕೆ ಪ್ರಿಯರಿಗೆ ವಿಶೇಷ ಅವಕಾಶವನ್ನು ಒದಗಿಸುವ ಸಲುವಾಗಿ ಪ್ರತಿ ವರ್ಷ ಅಕ್ಟೋಬರ್ 22ರಂದು ರಾಷ್ಟ್ರೀಯ ಅಡಿಕೆ ದಿನವನ್ನು ಆಚರಿಸಲಾಗುತ್ತದೆ. ರಾಷ್ಟ್ರೀಯ ಅಡಿಕೆ ದಿನವು ಬೀಜಗಳ ರುಚಿಕರತೆ ಮತ್ತು ಆರೋಗ್ಯ ಪ್ರಯೋಜನಗಳನ್ನು ಪ್ರಶಂಸಿಸಲು ಒಂದು ಅದ್ಭುತ ಅವಕಾಶವಾಗಿದೆ. ಒಟ್ಟಿನಲ್ಲಿ ಪ್ರೀತಿ ಪಾತ್ರವನ್ನು ಒಟ್ಟುಗೂಡಿಸಲು 2023 ರಿಂದ ರಾಷ್ಟ್ರೀಯ ಅಡಿಕೆ ದಿನವನ್ನು ಆಚರಿಸುತ್ತಾ ಬರಲಾಗಿದೆ.
ಸಿ.ಆರ್. ಸುರೇಶ್ (ಚೌಡ್ಲಾಪುರ ಸೂರಿ ).
ಶಿಕ್ಷಕರು.