ವಿಜಯನಗರ ವಾಣಿ ಸುದ್ದಿ ಕೊಟ್ಟೂರು : ಏಕಾಏಕಿ ನೋಂದಣಿ ಕಾರ್ಯ ಚಟುವಟಿಕೆಗಳನ್ನು ಸ್ಥಗಿತಗೊಳಿಸಿದ ಅಧಿಕಾರಿಗಳ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ ಘಟನೆ ಕೂಡ್ಲಿಗಿ ಉಪ ನೋಂದಣಾಧಿಕಾರಿಗಳ ಕಚೇರಿಯಲ್ಲಿ ಜರುಗಿದೆ. ಇಲ್ಲಿನ ನೋಂದಣಿ ಮತ್ತು ಮುದ್ರಾಂಕ ಕಚೇರಿಗೆ ಎಂದಿನಂತೆ ಸೋಮವಾರದಂದು ನಾಗರೀಕರು ತಮ್ಮ ಕೆಲಸಗಳಿಗಾಗಿ ಆಗಮಿಸಿದ್ದರು. ಆದರೆ 12 ಗಂಟೆಯ ನಂತರ ಏಕಾಏಕಿ ಮೂರು ದಿವಸ ಯಾವುದೇ ನೋಂದಣಿ ಕಾರ್ಯಗಳು ಮುಷ್ಕರದ ಹಿನ್ನೆಲೆ ಇರುವುದಿಲ್ಲ ಎಂದು ತಿಳಿಸಿದ ಕೂಡಲೇ ಸಾರ್ವಜನಿಕರು ಕಂಗಾಲಾಗಿ ಯಾವುದೇ ಸರ್ಕಾರಿ ಆದೇಶವಿಲ್ಲದೆ ನೀವು ಮುಷ್ಕರ ನಡೆಸಿದರೆ ನಮ್ಮ ಪಾಡೇನು ಎಂದು ಪ್ರಶ್ನಿಸಿದಾಗ ಯಾವುದೇ ಲಿಖಿತ ಉತ್ತರ ನೀಡದೇ ಇರುವುದು ಕಂಡುಬಂದಿತು. ನಂತರ ರೈತ ಸಂಘದ ಜಯಪ್ರಕಾಶ್ ನಾಯಕ್ ವಿಜಯನಗರ ವಾಣಿ ಪತ್ರಿಕೆಗೆ ಸಂಪರ್ಕ ಮಾಡಿ ಜನರ ಸಮಸ್ಯೆಗಳಿಗೆ ಪಟ್ಟು ಹಿಡಿದು ನಿಂತಾಗ ಉಪನೋ oದನಾಧಿಕಾರಿ ವೈಶಾಲಿ ಯವರು ಪತ್ರಿಕೆಗೆ ಮಾಹಿತಿ ನೀಡಿ ಇತ್ತೀಚೆಗೆ ದಾಖಲಾತಿಗಳು ಫೋರ್ಜರಿ ಆಗುತ್ತಿರುವ ಹಿನ್ನೆಲೆ, ಹಾಗೂ ಇ. ಖಾತ ತಂತ್ರಾಂಶದಲ್ಲಿ ಬದಲಾವಣೆ ಮಾಡಬೇಕಾಗಿರುವುದರಿಂದ ಮತ್ತು ರಾಜ್ಯದ ಎಲ್ಲಾ ಉಪನೋ oದನಾಧಿಕಾರಿ ಕಚೇರಿ ಅಧಿಕಾರಿಗಳಿಗೆ ಯಾವುದೇ ಆಸ್ತಿಗಳು ನೋಂದಣಿಯಾದರು ಅಧಿಕಾರಿಗಳು ನೇರ ಹೊಣೆ ಎಂಬ ಆದೇಶದ ಹಿನ್ನೆಲೆಯಲ್ಲಿ ಎಲ್ಲಾ ಕಚೇರಿಗಳಲ್ಲಿ ಮುಷ್ಕರ ದ ನೋಟಿಸ್ ನೀಡಿದ್ದಾರೆ. ಎಂಬ ಉತ್ತರ ಸಿಕ್ಕಿತು. ಆದರೆ ಏಕಾಏಕಿ ಕಾರ್ಯ ಸ್ಥಗಿತಕ್ಕೆ ಜನರು ಪರದಾಡಬೇಕಾಯಿತು. ಬಂದ ಜನರು ಬಂದ ದಾರಿಗೆ ಸುಂಕವಿಲ್ಲ ಎಂದು ಹೊರಟರು
ಕೂಡ್ಲಿಗಿ ಉಪನೊಂದಣಾದಿಕಾರಿ ಕಾರ್ಯಾಲಯದಲ್ಲಿ ನೋಂದಣಿ ಕಾರ್ಯ ಸ್ಥಗಿತಗೊಂಡಿರುವುದು ಸಂಬಂದ ಪಟ್ಟ ಅಧಿಕಾರಿಗಳಿಗೆ ಕೇಳಿದರೆ ೩ ದಿನ ಸ್ಟ್ರೈಕ್ ಇದೆ ಎಂದು ಹೇಳುತ್ತಿದ್ದಾರೆ ಬೆಳಗಿನಿಂದಲೇ ರಿಜಿಸ್ಟ್ರೇಷನ್ ಗೆ ಬಂದು ಜನ ಕಾಯುತ್ತಿದ್ದಾರೆ ಸರಿಯಾದ ಮಾಹಿತಿ ಕೊಡದೆ ಜನಗಳು ಅಲೆದಾಡುವ ಸ್ಥಿತಿಯಲ್ಲಿದೆ ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಸ್ಟ್ರೈಕ್ ಮಾಡ್ಲಿಕ್ಕೆ ಕಾರಣ ತಿಳಿಸಿ ನೋಟಿಸ್ ಬೋರ್ಡ್ ಗೆ ಹಾಕಿ ಮುಂದಿನ ದಿನಾಂಕ ಪ್ರಕಟಿಸಬೇಕು.
KS ಜಯಪ್ರಕಾಶ ನಾಯ್ಕ,
ರೈತ ಸಂಘ