ಚಿತ್ರದುರ್ಗ
ಚಿತ್ರದುರ್ಗ ನಗರದ ಬಿಆರ್ಸಿ ಸಭಾಂಗಣದಲ್ಲಿ ಈಚೆಗೆ ವಿಕಲಚೇತನರ ಹಾಗೂ ಹಿರಿಯ ನಾಗರೀಕರ ಸಬಲೀಕರಣ ಇಲಾಖೆ, ದಿ ಅಸೋಸಿಯೇಷನ್ ಆಫ್ ಪೀಪಲ್ ವಿತ್ ಡಿಸಬಿಲಿಟಿ ಹಾಗೂ ತಾಲ್ಲೂಕು ಪಂಚಾಯಿತಿ ಸಹಯೋದಲ್ಲಿ ಆರೈಕೆದಾರರು ಮತ್ತು ವಿಶೇಷ ಚೇತನ ಮಕ್ಕಳೊಂದಿಗೆ “ವಿಶ್ವ ಆರೈಕೆದಾರ ದಿನ” ಅಚರಿಸಲಾಯಿತು.
ಚಿತ್ರದುರ್ಗ ತಾಲ್ಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿಗಳಾದ ವೈ.ರವಿ ಕುಮಾರ್ ಅವರು ಸಸಿಗೆ ನೀರು ಎರೆಯುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿ, ಆರೈಕೆದಾರರು ಎಂದರೆ ಯಾರು, ಆರೈಕೆದಾರರ ಸಮಸ್ಯೆಗಳು ಮತ್ತು ಆರೈಕೆದಾರರ ದಿನಾಚರಣೆಯ ಉದ್ದೇಶ ತಿಳಿಸಿದ ಅವರು, ವಿಶೇಷ ಚೇತನ ಮಕ್ಕಳ ಅಭಿವೃದ್ಧಿಗಾಗಿ ಶ್ರಮಿಸುತ್ತಾ, ಲಾಲನೆ ಪೋಷಣೆ ಮಾಡುವ ಆರೈಕೆದಾರರ ಕೆಲಸ ಶ್ಲಾಘನೀಯ ಎಂದರು.
ಇದೇ ಸಂದರ್ಭದಲ್ಲಿ 61 ವಿಶೇಷ ಚೇತನ ಮಕ್ಕಳಿಗೆ ಪೌಷ್ಠಿಕಾಂಶಯುಕ್ತ ಆಹಾರ ಕಿಟ್ ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಎಪಿಡಿ ಸಂಸ್ಥೆಯ ನಂದಿನಿ, ಐಆರ್ಟಿ ಟೀಚರ್ ರಾಜಣ್ಣ ಹಾಗೂ ಎಂಆರ್ಡಬ್ಲ್ಯೂ ಮೈಲಾರಪ್ಪ ಇದ್ದರು.