Ad image

ದೂರದರ್ಶನದ ಅಂತದರ್ಶನ

Vijayanagara Vani
ದೂರದರ್ಶನದ ಅಂತದರ್ಶನ

ದೂರದರ್ಶನ ಎಂಬುದು ಇಂದಿನ ದಿನಗಳಲ್ಲಿ ಮಾನವ ಬದುಕಿನ
ಅವಿಭಾಜ್ಯ ಅಂಗವಾಗಿದೆ.ದೂರದರ್ಶನ ಇಲ್ಲದ ಮನೆಗಳೇ
ಅಪರೂಪವೆಂಬಂತಾಗಿದೆ.ಮನೆ ಮನೆಗಳಲ್ಲಿ ಈ ವಿದ್ಯುನ್ಮಾನ
ಯಂತ್ರವು ಮನೆಯ ಒಬ್ಬ ಸದಸ್ಯನಂತಾಗಿದೆ.ಜ್ಞಾನ-ಶಿಕ್ಷಣ-
ಮಾಹಿತಿ-ಮನರಂಜನೆಗೆಂದು ಅರಂಭವಾದ ಇದು ಇಂದು ಜನರಿಗೆ
ಸಮಯ ಕಳೆಯಲು ಅನುಕೂಲವಾದ ಸಾಧನವಾಗಿದೆ.ಹೊರ
ಜಗತ್ತಿನ ಜ್ಞಾನ ಪಡೆಯಲು ದೂರದರ್ಶನ
ಸಹಕಾರಿಯಾಗುತ್ತಿದೆ.

ಇತ್ತೀಚಗೆ ಸರ್ಕಾರದ ತೀರ್ಮಾನಗಳ
ಬಗ್ಗೆ ಚರ್ಚೆ ನಡೆಸುವ ವೇದಿಕೆಯಾಗಿದೆ.ದೂರದರ್ಶನ
ಚಲಿಸುವ ಚಿತ್ರಗಳನ್ನು ಶಬ್ಧದೊಂದಿಗೆ ಸಮನಾಂತರವಾಗಿ
ಪ್ರಸಾರವಾದದ್ದನ್ನು ಪ್ರದರ್ಶಿಸುವ ವಿದ್ಯುನ್ಮಾನಯಂತ್ರ.
ರೇಡಿಯೋದ ನಂತರ ಬಂದ ಅತೀ ಜನಪ್ರಿಯವಾದ
ಉಪಕರಣ.ಏಕಕಾ¯ದಲ್ಲಿ ದೃಶ್ಯ ಮತ್ತು ಧ್ವನಿಯನ್ನು
ಜಂಟಿಯಾಗಿ ಪ್ರಸಾರ ಮಾಡುವ ದೂರದರ್ಶನ
ಆವಿಷ್ಕಾರವಾದದ್ದು ೨೦ ನೇ ಶತಮಾನದ ಆರಂಭ
ವರ್ಷಗಳಲ್ಲಿ.೧೯೨೪ ರಲ್ಲಿ ಸ್ಕಟ್‌ಲ್ಯಾಂಡ್‌ನ ಜಾನ್ ಲೋಗಿ ಬೆಯಾರ್ಡ
ಎಂಬ ಯುವ ತಂತ್ರಜ್ಞಾನಿ ಶಬ್ದ ಕೊಂಡೊಯ್ಯುವ ರೆಡಿಯೋ
ತರಂಗಗಳ ಮೂಲಕ ಚಿತ್ರಗಳನ್ನುಕಳುಹಿಸುವ
ಸಾಧ್ಯತೆಯ ಬಗ್ಗೆ ಪ್ರಯೋಗಗಳನ್ನು
ಆರಂಭಿಸಿದನು.ತಿರುಗುವ ತೂತುಗಳಿರುವ
ತಟ್ಟೆಯೊಂದನ್ನು ಬಳಸಿಕೊಂಡು ಈತ ಪ್ರಯೋಗ
ಆರಂಭಿಸಿದ.ಇದರಲ್ಲಿ ಚಿತ್ರ ಧಾಖಲಿಸಿ ಪ್ರಸಾರ ಮಾಡಬಹುದೆಂದು
ಕಂಡುಕೊಂಡ.ನಂತರದ ದಿನಗಳಲ್ಲಿ ೧೯೨೫ ರಲ್ಲಿ ಟೆಲಿವಿಷನ್
ಲಿಮಿಟೆಡ್ ಸಂಸ್ಥೆ ಆರಂಭಿಸಿದ.ಬಿಬಿಸಿ ಈತನ ತಂತ್ರಜ್ಞಾನವನ್ನು
ಒಪ್ಪಿಕೊಂಡಿತು,ಪರಿಣಾಮವಾಗಿ ೧೯೨೬ ರಲ್ಲಿಸಂಬಧಬಿಸಿ ಮೂಲಕ
ದೂರದರ್ಶನ ಪ್ರಸಾರ ಮಾಡಲು ಸಿದ್ದವಾದರು. ಇದು ಮೊದಲ
ತಂತಿ ರಹಿತ ದೂರದರ್ಶನ ಪ್ರಸಾರ.೧೯೨೯ ರಲ್ಲಿ ಲಂಡನ್ ನಿಂದ
ನ್ಯುಯಾರ್ಕಿಗೆ ಪ್ರಪ್ರಥಮ ದೂರದರ್ಶನ
ಪ್ರಸಾರವಾಯಿತು.


೧೯೨೦ ಆರಂಭದಿಂದ ಚಲಿಸುವ ಚಿತ್ರಗಳಿಗೆ ಧ್ವನಿ ಸೇರಿಸಿ
ಪ್ರಸಾರಮಡುವ ಪ್ರಯೋಗಗಳು ನಡೆದಿದ್ದವು.೧೯೨೩
ರಲ್ಲಿ ಡಾ|| ವ್ಲಾಡಿಮಿರ್ ಜ್ವೋರಿಕಿನ್ ಎಂಬ ವಿಜ್ಞಾನಿ ಐಕನೋಸ್ಕೋಪ್
ಎನ್ನುವ ಎನ್ನುವ ವಿದ್ಯುತ್ ಟೆಲಿವಿಷನ್ ಟ್ಯೂಬ್
ಕಂಡುಹಿಡಿದಿದ್ದ.ಇದರಿಂದ ಟೆಲಿವಿಷನ್ ಸೆಟ್ ತಯಾರಿಸುವುದು
ಸುಲಭವಾಯಿತು.೧೯೨೮ ರ ಸುಮಾರಿಗೆ ಅಮೇರಿಕಾದಲ್ಲಿ ಜನ್ ಕಿನ್ ಸ್ ನೀಸ್

ಎಂಬಾತ ದೂರದರ್ಶನ ಪೆಟ್ಟಿಗೆ ತಯಾರಿಸುವ ವ್ಯವಸ್ಥೆ
ಆರಂಭಿಸಿದ. ನಂತರದ ದಿನಗಳಲ್ಲಿ ೧೯೩೦ ರಲ್ಲಿ ನ್ಯೂಯಾರ್ಕಿನಲ್ಲಿ
ನ್ಯಾಷನಲ್ ಬ್ರಾಡ್‌ಕಾಷ್ಟಿಂಗ್ ಕಾರ್ಪೊರೇಷನ್ ದೂರದರ್ಶನ
ಪ್ರಯೋಗ ಮಾಡುತ್ತಿತ್ತು. ಬಿಬಿಸಿ ೧೯೩೬ ರಲ್ಲಿ ಸಾರ್ವಜನಿಕರಿಗೆ
ದೂರದರ್ಶನ ಪ್ರಸಾರ ಆರಂಭ ಮಾಡಿತು. ಎರಡನೇ
ಪ್ರಪಂಚ ಯುದ್ಧ ಆರಂಭದಲ್ಲಿ ನಾಜಿ ಪಕ್ಷದ
ಸಮ್ಮೆಳನಗಳು ಟಿವಿ ಯಲ್ಲಿ ಪ್ರಸಾರವಾದವು ಮಾತ್ರವಲ್ಲ
ಅದೇ ವರ್ಷ ಬರ್ಲಿನಲ್ಲಿ ನಡೆದ ಒಲಂಪಿಕ್ಸ್ ಪಂಧ್ಯಗಳನ್ನು
ಟಿವಿಯಲ್ಲಿ ಪ್ರಸಾರ ಮಡಲಾಯಿತು. ೧೯೪೪ ರಲ್ಲಿ ಬಿಬಿಸಿ ತನ್ನ
ಎರಡನೇ ಚಾನಲ್ ಆರಂಭಿಸಿತು.
ಈ ತಂತ್ರಜ್ಞಾನವು ಭಾರತಕ್ಕೂ ಬಂತು,ನವದೆಹಲಿ ಯಲ್ಲಿ ೧೯೫೯
ರಲ್ಲಿ ಸೆಪ್ಟಂಬರ್ ೧೫ ರಂದು ಪ್ರಥಮ ಟಿವಿ ಕೆಂದ್ರ
ಆರಂಭವಾಯಿತು.ಈಗ ನಮ್ಮ ದೇಶದಲ್ಲಿ ನೂರಾರು
ವಾಹಿನಿಗಳಿವೆ.ನಿಯಮಿತವಾಗಿ ಕಡಿಮೆ ವಿಸ್ತೀರ್ಣದಲ್ಲಿ ಮತ್ರ
ಪ್ರಸಾರವಿತ್ತು ೧೯೬೫ ರಲ್ಲಿ ದೂರದರ್ಶನದಲ್ಲಿ ವಾರ್ತೆಗಳು
ಮತ್ತು ಮನರಂಜನೆ ಪ್ರಸಾರವಾಯಿತು. ೧೯೬೭ ರಲ್ಲಿ ರೈತರಿಗಾಗಿ
ಕೃಷಿದರ್ಶನ ವಿಶೇಷ ಕಾರ್ಯಕ್ರಮ ಪ್ರಸಾರವಾಯಿತು. ೧೯೭೦
ರ ಹೊತ್ತಿಗೆ ದಿನಕ್ಕೆ ಒಂದು ಗಂಟೆ ಮಾತ್ರ ಪ್ರಸಾರದ
ಅವಧಿಯು ೩ ತಾಸಿಗೆ ಹೆಚ್ಚಿಸಲಾಯಿತು.ಆ ಸಮಯದಲ್ಲಿ
ದೇಶದಲ್ಲಿ ಲಕ್ಷಗಳ ಸಂಖ್ಯೆಯಲ್ಲಿ ಟಿವಿಗಳು ಭಾರತದಲ್ಲಿ
ಬಂದವು. ಕಾಲಾನುಕ್ರಮದಲ್ಲಿ
ಮುಂಬಯಿ,ಶ್ರೀನಗರ,ಅಮೃತಸರ, ಪುಣೆ,ಕಲ್ಕತ್ತ ಮದ್ರಾಸ್
ಮೊದಲಾದ ನಗರಗಳಲ್ಲಿ ಕೇಂದ್ರಗಳು ಆರಂಭವಾದವು.
೧೯೭೬ ರ ಜನವರಿ ಒಂದರಿಂದ ಭಾರತದ ದೂರದರ್ಶನದಲ್ಲಿ ವಾಣಿಜ್ಯ
ಜಾಹಿರಾತುಗಳು ಬರಲಾರಂಭಿಸಿದವು. ೧೯೭೬ ರವರಗೆ ಆಲ್
ಇಂಡಿಯಾ ರೇಡಿಯೋ ಆಡಳಿತದಲ್ಲಿದ್ದ ಟಿವಿ ಸ್ವತಂತ್ರ
ಇಲಾಖೆಯಯಿತು. ೧೯೭೫-೭೮ ರಲ್ಲಿ ಸ್ಯಟಿಲೈಟ್ ಎಡುಕೇಷನ್ ಟಿವಿ ಎಂಬ
ಹೆಸರಿನ ಮೂಲಕ ಶಿಕ್ಷಣದ ಪ್ರಕ್ರಿಯೆ ಪ್ರಸಾರ
ಆರಂಭವಾಯಿತು. ಕರ್ನಾಟಕವೂ ಸೇರಿದಂತೆ ದೇಶದ ೨೪೦೦
ಗ್ರಾಮಗಳಿಗೆ ಪ್ರಸಾರ ತಲುಪಿತು. ೧೯೭೭ ರಲ್ಲಿ ನಮ್ಮ
ಗುಲ್ಬರ್ಗಾ ಸೇರಿದಂತೆ ಹೈದರಬಾದ್ ಜಯಪುರ ಹೀಗೆ ಕೆಲವು
ನಗರಗಳಲ್ಲಿ ದೂರದರ್ಶನ ಕೆಂದ್ರಗಳು
ಅರಂಭವಾದವು.ಈ ಮುಖೇನ ಭಾರತದ ೧೦೦ ದಶ ಲಕ್ಷ
ಜನರನ್ನು ದೂರದರ್ಶನ ತಲುಪಿತು. ೧೯೮೨ ರ ಭಾರತದಲ್ಲೇ
ನಡೆದ ಏಷಿಯನ್ ಗೇಮ್ಸ್ ನೇರ ಪ್ರಸಾರವನ್ನು ಬಣ್ಣದ
ಟಿವಿಯಲ್ಲಿ ನಾನು ಬಳ್ಳಾರಿಯ ಪ್ರತಿಷ್ಟಿತ ವಾರ್ಡ್ಲ ಕಾಲೇಜಿನಲ್ಲಿ
ಪಿ.ಯು.ಸಿ ಓದುವಾಗ ನೋಡಿದೆ, ಅದೂ ಪಿ.ಟಿ ಉಷಾ ರ ಓಟದ

ದೃಶ್ಯ.ಅದೇ ನನ್ನ ಮೊದಲ ಟಿವಿ ವೀಕ್ಷಣೆ.ನಂತರ ೧೯೮೪ ರಲ್ಲಿ
ನಮ್ಮ ದೇಶದ ಪ್ರಧಾನಿಯಾಗಿದ್ದ ಶ್ರೀಮತಿ ಇಂದಿರಾ
ಗಾಂಧಿಯವರ ಹತ್ತೆಯನಂತರದ ಶೋಕಾಚರಣೆಯ
ನೇರ ದೃಶ್ಯಾವಳಿಗಳು. ನಂತರದ ದಿನಗಳಲ್ಲಿ ಕ್ರಿಕೆಟ್
ನೋಡುವುದು ತುಂಬಾ ಇಷ್ಟವಾದ ಕೆಲಸವಾಯಿತು ನಮ್ಮ
ತಲೆಮಾರಿಗೆ.ದಿಗಳೆದಂತೆಲ್ಲಾ ಟಿವಿ ಯಲ್ಲಿ ವಾರ್ತೆಗಳು ಶಿಕ್ಷಣ,
ಕೃಷಿರಂಗ, ಕ್ರೀಡೆಜೊತೆಗೆ ಸಿನೆಮಾ, ಚಿತ್ರಗೀತೆ
ಆರಂಭವಾದವು.ನಂತರದ ದಿನಗಳಲ್ಲಿ ಸೀರಿಯಲ್ ಗಳು
ಅರಂಭವಾಗಿ ಟಿವಿ ಮನೆ ಮನೆ ಮಾತಾಯಿತು.ಹಮ್‌ಲೋಗ್,
ಬುನಿಯಾದ್,ರಾಮಾಯಣ, ಮಹಾಭಾರತ ದಂತಹ ದಾರವಾಹಿಗಳು
ಜನಪ್ರಿಯವಾದವು.ದಿನಗಳೆದಂತೆ ವಿಜ್ಞಾನ ಬೆಳೆದಂತೆ
ಪ್ರಸಾರದ ವಿಷಯವು ಸುಲಭವಾಯಿತು, ಉಪಗ್ರಹಗಳ
ಉಡಾವಣೆಯಲ್ಲು ನಮ್ಮ ಭಾರತ ಸ್ವಾವಲಂಭಿಯಯಿತು.
ಇದರಿಂದ ಎಲ್ಲಾ ಮುಂದುವರೆದ ದೇಶಗಳಂತೆ ನಮ್ಮ
ದೇಶದಲ್ಲೂ ಖಾಸಗಿ ಚಾನಲ್ ಗಳು, ದೇಶಿಯ ಭಾಷೆಗಳಲ್ಲಿ
ವಾಹಿನಿಗಳ ಪ್ರಸಾರ ಜೋರಾಯಿತು.ದೂರದರ್ಶನ ಬಂದ
ಮೇಲೆ ಮನುಷ್ಯರ ಮನೋಭಾವ, ಸಮಾಜದ
ಧೋರಣೆಯಲ್ಲಿ ಗಮನಾರ್ಹ ಬದಲಾವಣೆಗಳಾದವು.
ಮಾನವೀಯ ಸಂಬಂಧಗಳಲ್ಲಿ ರಿಪೇರಿ ಆಗದಷ್ಟು
ಪರಿವರ್ತನೆಗಳು ನಡೆಯುತ್ತಿವೆ ಅದಕ್ಕಾಗಿ ಅನೇಕ
ಸಮಾಜಶಾಸ್ತçಜ್ಞರು ಅನೇಕ ರೀತಿಯಾಗಿ ಅಭಿಪ್ರಾಯಿಸಿದ್ದಾರೆ.
ಅಂಥೋನಿ ಗಿಡ್ಡಿಂಗ್ಸ್ ರವರ ಪ್ರಕಾರ :ದೈನಂದಿನ ಜೀವನದ
ವಿಭಿನ್ನ ಅನುಭವ ನೀಡುವ ಮೂಲಕ ದೂರದರ್ಶನವು
ಪ್ರಮುಖ ಪಾತ್ರವಹಿಸುತ್ತದೆ-ಎನ್ನುತ್ತಾನೆ.ಈ ಮಾಧ್ಯಮ
ಏಕಕಾಲದಲ್ಲಿ ಲಕ್ಷಾಂತರ ಜನರನ್ನು ತಲುಪುತ್ತದೆ,ಅದಕ್ಕಾಗಿ
ಮಾರ್ಷಲ್ ಮ್ಯಾಕ್ ಲುಹಾನ್ ಹೇಳುತ್ತಾರೆ: ನಮ್ಮ ಸಮಾಜವು
ಮಾಧ್ಯಮ ನೀಡುವ ಮಾಹಿತಿಗಿಂತ ಮಾಧ್ಯಮದ ಪ್ರಕಾರದಿಂದ
ಪ್ರಭಾವಿತವಾಗುತ್ತವೆ.ವಿಶೇಷವಾಗಿ ವಿದ್ಯುನ್ಮಾನ ಮಾಧ್ಯಮ
ವಿಶ್ವವನ್ನು ಜಾಗತಿಕ ಗ್ರಾಮವಾಗಿಸಿದೆ,ಪ್ರಯುಕ್ತ ನಾವು
ಪರಸ್ಪರ ಸಂಬಂಧಿತ ಪ್ರಪಂಚದಲ್ಲಿ ಬದುಕುತ್ತಿದ್ದೇವೆ
ಎನ್ನುತ್ತಾರೆ.ನೆಯ್ಲ್ ಪೋಸ್ಟ್ ಮ್ಯಾನ್ :ದೂರದರ್ಶನವು
ಗಂಭಿರ ವಿಷಯಗಳನ್ನು ಮನರಂಜನೆಯ
ಸರಕನ್ನಾಗಿಸುತ್ತದೆ, ಆದರೆ ಮುಂದುವರೆದು ಆತ
ಹೇಳುತ್ತಾನೆ ಮುದ್ರಣ ಮಾಧ್ಯಮವು ಜನರಲ್ಲಿ ತಾರ್ಕಿಕ
ಆಲೋಚನೆ ಬೇಳೆಸುತ್ತದೆ ಎನ್ನತ್ತಾನೆ,ಮಾತ್ರವಲ್ಲ ಆತ
ಮತ್ತೆ ಹೇಳುತ್ತಾನೆ ದೂರದರ್ಶನ ಪ್ರಭಾವ ವಿರುವ
ಸಮಾಜದಲ್ಲಿ ಶಿಕ್ಷಣ, ರಾಜಕೀಯವನ್ನು ಕೇವಲ ರಂಜನೆಯ

ಮಟ್ಟಕ್ಕೆ ಇಳಿಸಿ, ನಮಗೇನು ಸಿಗದೆ ಸಾವಿನ ಸಮ್ಮೋಹಿನಿ ಮಾತ್ರ
ದೊರಯುತ್ತದೆ ಎನ್ನತ್ತಾನೆ.ರಾಬರ್ಟ ಪುಟ್ನಂ
ಹೇಳುತ್ತಾರೆ:ಜನರ ನಡುವೆ ಅಂತರ್ ಸಂಬಂಧ,ಪರಸ್ಪರ
ಹೊಣೆಗಾರಿಕೆ,ನಂಬಿಕೆ, ನಿಯಮಗಳ ಗ್ರಹಿಕೆ ಮತ್ತು
ವರ್ತನೆಯ ನಿಯಂತ್ರಣ ತರುವ ನಿಯೋಗಿಗಳಾಗಿ ಕೆಲಸ
ಮಾಡುವುದರಿಂದ ದೂರದರ್ಶನದ ಕಾರ್ಯವನ್ನು ಸಾಮಾಜಿಕ
ಬಂಡವಾಳ ಎಂದು ಕರೆಯುತ್ತಾನೆ.ಹಾರ್ಕಿಹೈಮರ್
ಹೇಳುತ್ತಾರೆ:ಕಲೆಯು ಕ್ಷೀಣಿಸಿ ವಾಣಿಜ್ಯೀಕರಣಗೊಂಡರೆ
ಸಂಸ್ಕೃತಿಯು ಮನರಂಜನೆಯಾಗಿ ಮಾರ್ಪಡುತ್ತದೆ
ಎನ್ನುತ್ತಾನೆ.ಜೀನ್ ಬುಡ್ರಿಯಾಲ್ ಸಮೂಹ ಮಧ್ಯಮಗಳು
ಕೃತಕ ನಯಜತೆ ಸೃಷ್ಟಿಸುತ್ತವೆ
ಎನ್ನತ್ತಾನೆ.ದೂರದರ್ಶನವು ನಮ್ಮ ಜೀವನವನ್ನು
ಪ್ರತಿನಿಧಿಸುವ ಬದಲು ನಾವು ಹೇಗಿರ ಬೇಕು ಎಂದು
ನಿರ್ದೇಶಿಸುತ್ತದೆ-ಎನ್ನತ್ತಾನೆ.
ಇಂದು ನಾವು ಟಿವಿ ಆಗಲಿ ಸಮೂಹ ಮಾಧ್ಯಮಗಳಾಗಲಿ
ಬಳಸುವ ವಿಧಾನ ಮಕ್ಕಳಿಗೆ ತಿಳಿಸ ಬೇಕಿದೆ.ಅದಕ್ಕಾಗಿ ಮೀಡಿಯಾ
ಲಿಟ್ರಸಿ ಎಂಬ ಹೊಸ ವಿಚಾರ ನಮ್ಮ ನಡುವೆ ಚಾಲ್ತಿಗೆ
ಬರಬೇಕಿದೆ,ಯವುದನ್ನು ಎಷ್ಟು, ಯಾವಾಗ ನೋಡಬೇಕು
ಮಕ್ಕಳಿಗೆ ತಿಳಿಸ ಬೇಕಿದೆ.ಇಂದು ವಿಶ್ವ ದೂರದರ್ಶನ
ದಿನ,ಪ್ರಯುಕ್ತ ಯೋಚಿಸೋಣ..ಒಮ್ಮೆ ಮತ್ತೊಮ್ಮೆ.


ಡಾ|| ಯು.ಶ್ರೀನಿವಾಸ ಮೂರ್ತಿ
ವಿಜ್ಞಾನ ಬರಹಗಾರರು, ಉಪನ್ಯಾಸಕರು ಬಳ್ಳಾರಿ
ಫೋ ೯೭೩೧೦೬೩೯೫೦

Share This Article
error: Content is protected !!
";