ಬಳ್ಳಾರಿ,ನ.28
ಜಿಲ್ಲೆಯಲ್ಲಿ ಕಳೆದ ವರ್ಷದಂತೆ ಈ ವರ್ಷವೂ ಮೆಣಸಿನಕಾಯಿ ಬೆಳೆಯನ್ನು ಬಾಧಿಸಿದ್ದ ಥ್ರಿಪ್ಸ್ ನುಸಿ (ಥ್ರಿಪ್ಸ್ ಪಾರ್ವಿಸ್ಪಿನಸ್) ಕೀಟ ಮತ್ತು ಬಳ್ಳಾರಿ, ಕುರುಗೋಡು, ಕಂಪ್ಲಿ ತಾಲ್ಲೂಕುಗಳಲ್ಲಿ ಬೂದಿ ರೋಗ, ಹಣ್ಣು ಕೋಳೆ ರೋಗ ಹಾಗೂ ಎಲೆ ಮುಟುರು ರೋಗ ಲಕ್ಷಣಗಳು ಕಂಡು ಬಂದಿರುವ ಹಿನ್ನಲೆಯಲ್ಲಿ ಬೆಂಗಳೂರಿನ ಪ್ರಾದೇಶಿಕ ಕೇಂದ್ರಿಯ ಸಮಗ್ರ ಸಸ್ಯಪೀಡೆ ನಿರ್ವಹಣಾ ಕೇಂದ್ರದ ಸಹಾಯಕ ಸಸ್ಯ ಸಂರಕ್ಷಣಾಧಿಕಾರಿಗಳಾದ ಡಾ.ಜಯಸಿಂಹ.ಜಿ.ಟಿ ಮತ್ತು ಡಾ.ವಿನಯ್ ಜೆ.ಯು ಅವರು ಬಳ್ಳಾರಿ ತಾಲ್ಲೂಕಿನ ಸುತ್ತಮುತ್ತಲಿನ ಗ್ರಾಮಗಳ ರೈತರ ಮೆಣಸಿನಕಾಯಿ ಬೆಳೆಗಳ ತಾಕನ್ನು ಬುಧವಾರ ಪರಿಶೀಲಿಸಿದರು.
ಬಳಿಕ ಮಾತನಾಡಿದ ಡಾ.ಜಯಸಿಂಹ.ಜಿ.ಟಿ ಅವರು ಬಳ್ಳಾರಿ ತಾಲ್ಲೂಕಿನಲ್ಲಿ 16,038 ಹೆಕ್ಟರ್, ಕುರುಗೋಡು ತಾಲ್ಲೂಕಿನಲ್ಲಿ 15,847 ಹೆಕ್ಟರ್ ಮತ್ತು ಕಂಪ್ಲಿ ತಾಲ್ಲೂಕಿನಲ್ಲಿ 1,720 ಹೆಕ್ಟರ್ ಪ್ರದೇಶದಲ್ಲಿ ಮೆಣಸಿನಕಾಯಿ ಬಿತ್ತನೆಯಾಗಿದ್ದು, ಒಟ್ಟು 33,605 ಹೆಕ್ಟರ್ ಪ್ರದೇಶದಲ್ಲಿ ಮೆಣಸಿನಕಾಯಿ ಬೆಳೆ ಬೆಳೆಯಲಾಗಿದೆ. ರೈತರು ರೋಗ ಮತ್ತು ಕೀಟ ಹತೋಟಿಗೆ ತೋಟಗಾರಿಕೆ ಇಲಾಖೆಯಿಂದ ನೀಡಲಾಗುತ್ತಿರುವ ಸೂಕ್ತ ಕ್ರಮ ಅನುಸರಿಸಬೇಕು ಎಂದು ಅವರು ಹೇಳಿದರು.
ಹಾಲಿ ಥಿಪ್ಸ್ ನುಸಿಯ ಹಾವಳಿ ಶೇ.50 ಕ್ಕಿಂತ ಅಧಿಕ ಪ್ರದೇಶದಲ್ಲಿ ಕಂಡುಬಂದಿದ್ದು, ಕೀಟದ ಹಾವಳಿಯನ್ನು ಸೂಕ್ತ ರೀತಿಯಲ್ಲಿ ನಿರ್ವಹಿಸಬೇಕು. ಎಲೆಗಳಲ್ಲಿ ಬೂದು ಬಣ್ಣದ ಮಚ್ಚೆ ರೋಗ ಕಂಡುಬದಲ್ಲಿ 1 ಗ್ರಾಂ ಕಾರ್ಬಂಡೈಜಿಮ್ ಅಥವಾ 3 ಗ್ರಾಂ ನೀರಿನಲ್ಲಿ ಕರಗುವ ಗಂಧಕ ಒಂದು ಲೀಟರ್ ನೀರಿನಲ್ಲಿ ಬೆರಸಿ ಸಿಂಪಡಿಸಬೇಕು. ರೋಗ ಲಕ್ಷಣಗಳು ಕಡಿಮೆಯಾಗದ್ದಿದಲ್ಲಿ ಇದೆ ಸಿಂಪರಣೆಯನ್ನು 15 ದಿನಗಳ ಅಂತರದಲ್ಲಿ ಎರಡು ಬಾರಿ ಕೈಗೊಳ್ಳಬೇಕು ಎಂದು ಅವರು ತಿಳಿಸಿದರು.
ಇಲ್ಲವೇ 1 ಗ್ರಾಂ ಂzoxಥಿsಣಡಿobiಟಿ 23% Sಖಿ ರೋಗ ನಾಶಕವನ್ನು ಪ್ರತಿ ಲೀಟರ್ ನೀರಿಗೆ ಬೇರಸಿ ಸಿಂಪಡಿಸಬಹುದು. ಊexಚಿಛಿoಟಿಚಿzoಟe 2% Sಅ ರೋಗ ನಾಶಕವನ್ನು ಪ್ರತಿ ಲೀಟರ್ ನೀರಿಗೆ ಬೇರಸಿ ಸಿಂಪಡಿಸಬಹುದು ಎಂದು ವಿವರಿಸಿದರು.
ಡಾ.ವಿನಯ್ ಜೆ.ಯು ಅವರು ಮಾತನಾಡಿ, ಹಣ್ಣುಗಳ ಮೇಲೆ ವೃತ್ತಾಕಾರದ ತಗ್ಗಾದ ಕಪ್ಪನೆಯ ಚುಕ್ಕೆಗಳು ಕಾಣಿಸಿಕೊಳ್ಳುತ್ತಿದ್ದು, ಒಳಗಿನ ಬಣ್ಣವು ಗುಲಾಬಿ ವರ್ಣದಿಂದ ಕೂಡಿರುತ್ತದೆ. ಆ ಮೇಲೆ ಕಪ್ಪಾಗುತ್ತವೆ. ಮೆಣಸಿನಕಾಯಿ ಬೆಳೆಗೆ ತುದಿ ಸಾಯುವ ರೋಗ, ಹಣ್ಣು ಕೋಳೆಯುವ ರೋಗ ಹಾಗೂ ಬೂದಿ ರೋಗಗಳು ಕಂಡು ಬಂದಾಗ 1 ಗ್ರಾಂ ಕಾರ್ಬಂಡೈಜಿಮ್ ಪ್ರತಿ ಲೀಟರ್ ನೀರಿನಲ್ಲಿ ಬೆರಸಿ 15 ದಿನಗಳ ಅಂತರದಲ್ಲಿ ನಾಲ್ಕು ಸಾರಿ ಸಿಂಪಡಿಸಬೇಕು ಎಂದು ತಿಳಿಸಿದರು.
*ಎಲೆ ಮುಟುರು ರೋಗ:*
ಹಳದಿ ಮಿಶ್ರಿತ ಹಸಿರು ಭಾಗವನ್ನು ಎಲೆಯಲ್ಲಿ ಕಾಣಬಹುದು. ಎಲೆಗಳು ವಕ್ರಾಕಾರದ ಅಥವಾ ಮುಟುರು ಎಲೆಗಳನ್ನು ಕಾಣಬಹುದು. ಆ ಮೇಲೆ ಗಿಡಗಳ ಬೆಳವಣಿಗೆ ಕುಂಠಿತಗೊಳ್ಳುತ್ತದೆ. ಮುಟುರು ರೋಗದ ಬಾಧೆ ತಡೆಗಟ್ಟಲು ಶೇ.0.5 ರ ಬೆಳ್ಳೊಳ್ಳಿ, ಹಸಿಮೆಣಿಸಿಕಾಯಿ, ಸೀಮೆ ಎಣ್ಣೆ ಕಷಾಯವನ್ನು ಬೇವು ಜನ್ಯ ಕೀಟನಾಶಕದೊಂದಿಗೆ (2.5 ಮಿ.ಲೀ ಪ್ರತಿ ಲೀಟರ್ ನೀರಿಗೆ) ಬೆರಸಿ ಅವಶ್ಯವಿದ್ದಾಗ ಸಿಂಪರಣೆ ಮಾಡಬೇಕು.
ಕೀಟನಾಶಕಗಳದ 0.3 ಮಿ.ಲೀ. ಇಮಿಡಾಕ್ಲೋಪ್ರಿಡ್ 17.8 ಎಸ್.ಎಲ್ ಅಥವಾ 0.2 ಗ್ರಾಂ. ಥಯೋಮೆಥಾಕ್ಸಾಮ್ 25 ಡಬ್ಲೂö್ಯ.ಜಿ ಅಥವಾ 1.0 ಮಿ.ಲೀ ಫಿಪ್ರೋನಿಲ್ 5 ಎಸ್.ಸಿ ಅಥವಾ 1.0 ಗ್ರಾಂ. ಡಯಾಫೆನ್ಥಯೂರಾನ್ 50 ಡಬ್ಲೂö್ಯ. ಪಿ. ಪ್ರತಿ ಲೀಟರ್ ನೀರಿಗೆ ಬೆರೆಸಿ ಸಿಂಪಡಿಸಬೇಕು.
ಎಲ್ಲಾ ಅಥವಾ ಅಗತ್ಯವಿರುವ ನಿರ್ವಹಣಾ ಕ್ರಮಗಳನ್ನು ಪಾಲಿಸಿಕೊಂಡು ರೈತರು ಸಕಾಲದಲ್ಲಿ ಮೆಣಸಿನಕಾಯಿ ಬೆಳೆಗೆ ಔಷಧಿಗಳನ್ನು ಸೂಕ್ತ ರೀತಿಯಲ್ಲಿ ಸಿಂಪಡಿಸಿ ಉತ್ತಮ ಗುಣಮಟ್ಟದ ಇಳುವರಿ ಪಡೆಯಬಹುದು ಎಂದು ಅವರು ಹೇಳಿದರು
ಈ ವೇಳೆ ತೋಟಗಾರಿಕೆ ಇಲಾಖೆಯ ಅಧಿಕಾರಿಗಳು ಹಾಗೂ ರೈತರು, ಮತ್ತೀತರರು ಇದ್ದರು.