ಕಕರಸಾ ನಿಗಮ: ಡಿ.02 ರಂದು ‘ಫೋನ್ ಇನ್ ಕಾರ್ಯಕ್ರಮ’

Vijayanagara Vani
ಕಕರಸಾ ನಿಗಮ: ಡಿ.02 ರಂದು ‘ಫೋನ್ ಇನ್ ಕಾರ್ಯಕ್ರಮ’

ಬಳ್ಳಾರಿ,ನ.29

- Advertisement -
Ad imageAd image

ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ ಬಳ್ಳಾರಿ ವಿಭಾಗದ ವತಿಯಿಂದ ಬಳ್ಳಾರಿ ಭಾಗದ ಸಾರ್ವಜನಿಕ ಪ್ರಯಾಣಿಕರ ಕುಂದು ಕೊರತೆಗಳನ್ನು ಆಲಿಸಲು ಡಿ.02 ರಂದು ಮಧ್ಯಾಹ್ನ 3.30 ಗಂಟೆಯಿಂದ ಸಂಜೆ 4.30 ಗಂಟೆಯವರೆಗೆ “ಪೋನ್ ಇನ್ ಕಾರ್ಯಕ್ರಮ” ಏರ್ಪಡಿಸಲಾಗಿದೆ ಎಂದು ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ ಬಳ್ಳಾರಿ ವಿಭಾಗದ ವಿಭಾಗೀಯ ನಿಯಂತ್ರಣಾಧಿಕಾರಿ ಇನಾಯತ್ ಬಾಗ್‌ಬಾನ್ ಅವರು ತಿಳಿಸಿದ್ದಾರೆ.
ಬಳ್ಳಾರಿ ಭಾಗದ ಸಾರ್ವಜನಿಕ ಪ್ರಯಾಣಿಕರ ಬಸ್ ಸೌಕರ್ಯದ ಕುರಿತು ಕುಂದುಕೊರತೆ, ಸಮಸ್ಯೆಗಳಿದ್ದಲ್ಲಿ ಮೊ.7760992152, 6366423885 ಗೆ ಕರೆ ಮಾಡಿ ತಿಳಿಸಬಹುದು.
ಬಳ್ಳಾರಿ ವಿಭಾಗದ ವ್ಯಾಪ್ತಿಯಲ್ಲಿ ಪ್ರತಿ ತಿಂಗಳ ಒಂದನೇ ಸೋಮವಾರದಂದು ಬಳ್ಳಾರಿ, ಸಿರುಗುಪ್ಪ, ಕುರುಗೋಡು, ಕಂಪ್ಲಿ ಮತ್ತು ಸಂಡೂರು ತಾಲ್ಲೂಕುಗಳಿಗೆ ಸಂಬಂಧಿಸಿದ ಸಾರ್ವಜನಿಕ ಪ್ರಯಾಣಿಕರ ಬಸ್ ಸೌಕರ್ಯದ ಕುರಿತು ಕುಂದು-ಕೊರತೆಗಳನ್ನು ಆಲಿಸಲು ‘ಪೋನ್ ಇನ್ ಕಾರ್ಯಕ್ರಮ’ ಆಯೋಜಿಸಲಾಗುತ್ತಿದೆ.
ಸಾರ್ವಜನಿಕ ಪ್ರಯಾಣಿಕರ ಬಸ್ ಸೌಕರ್ಯದ ಕುರಿತು ಕುಂದು ಕೊರತೆಗಳಿದ್ದಲ್ಲಿ ಆಲಿಸಿ, ಅಗತ್ಯ ಕ್ರಮ ಕೈಗೊಳ್ಳಲಾಗುವುದು. ಸಾರ್ವಜನಿಕ ಪ್ರಯಾಣಿಕರು “ಪೋನ್ ಇನ್ ಕಾರ್ಯಕ್ರಮ”ವನ್ನು ಸದುಪಯೋಗಪಡೆದುಕೊಳ್ಳಬೇಕು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Share This Article
error: Content is protected !!
";