Ad image

ಡಿ.03 ರಂದು ವಿಶ್ವ ಏಡ್ಸ್ ದಿನಾಚರಣೆ ಕಾರ್ಯಕ್ರಮ

Vijayanagara Vani
ಡಿ.03 ರಂದು ವಿಶ್ವ ಏಡ್ಸ್ ದಿನಾಚರಣೆ ಕಾರ್ಯಕ್ರಮ
ಬಳ್ಳಾರಿ,ಡಿ.02
ರಾಜ್ಯ ಏಡ್ಸ್ ಪ್ರಿವೆನ್‌ಷನ್ ಸೊಸೈಟಿ ಬೆಂಗಳೂರು, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಇವರ ಸಂಯುಕ್ತಾಶ್ರಯದಲ್ಲಿ “ಹಕ್ಕುಗಳನ್ನು ಪಡೆಯಲು ಸರಿಯಾದ ಮಾರ್ಗ ಅನಿಸರಿಸೋಣ: ನನ್ನ ಆರೋಗ್ಯ ನನ್ನ ಹಕ್ಕು” ಎಂಬ ಘೋಷವಾಕ್ಯದಡಿ ಡಿ.03 ರಂದು ಬೆಳಿಗ್ಗೆ 10.30 ಗಂಟೆಗೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಸಭಾಂಗಣದಲ್ಲಿ ವಿಶ್ವ ಏಡ್ಸ್ ದಿನಾಚರಣೆ ಕಾರ್ಯಕ್ರಮ ಏರ್ಪಡಿಸಲಾಗಿದೆ.
ಅಂದು ಬೆಳಿಗ್ಗೆ 09.30 ಜಾಗೃತಿ ಜಾಥಾ ಹಮ್ಮಿಕೊಳ್ಳಲಾಗಿದ್ದು, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶರಾದ ರಾಜೇಶ್.ಎನ್ ಹೊಸಮನಿ ಅವರು ಚಾಲನೆ ನೀಡುವರು.
ಬಳಿಕ ಬೆಳಿಗ್ಗೆ 10.30 ಗಂಟೆಗೆ ವೇದಿಕೆ ಕಾರ್ಯಕ್ರಮ ಉದ್ಘಾಟಿಸುವರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಯಲ್ಲಾ ರಮೇಶ ಬಾಬು ಅವರು ಅಧ್ಯಕ್ಷತೆ ವಹಿಸುವರು.
ಜಿಲ್ಲಾ ಶಸ್ತçಚಿಕಿತ್ಸಕ ಡಾ.ಎನ್.ಬಸರೆಡ್ಡಿ, ಜಿಲ್ಲಾ ಆರ್‌ಸಿಹೆಚ್ ಅಧಿಕಾರಿ ಡಾ.ಹನುಮಂತಪ್ಪ, ಜಿಲ್ಲಾ ಎನ್‌ವಿಡಿಸಿಪಿ ಡಾ.ಅಬ್ದುಲ್ಲಾ.ಆರ್., ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಾ.ಪೂರ್ಣಿಮಾ ಕಟ್ಟಿಮನಿ, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಮರಿಯಂಬಿ.ವಿ.ಕೆ., ಜಿಲ್ಲಾ ಕುಷ್ಟರೋಗ ನಿಯಂತ್ರಣಾಧಿಕಾರಿ ಡಾ.ವಿರೇಂದ್ರ ಕುಮಾರ್, ಎಫ್‌ಪಿಎಐ ವ್ಯವಸ್ಥಾಪರಾದ ವಿಜಯಲಕ್ಷಿö್ಮ, ನಿತ್ಯಜೀವನ ಸಂಸ್ಥೆಯ ಅಧ್ಯಕ್ಷರಾದ ಹೇಮಲತ ಸೇರಿದಂತೆ ಇತರರು ಮುಖ್ಯ ಅತಿಥಿಗಳಾಗಿ ಭಾಗವಹಿಸುವರು.
ಜಿಲ್ಲೆಯಲ್ಲಿ ಏಡ್ಸ್ ನಿರ್ಮೂಲನೆಗಾಗಿ ಆಪ್ತಸಮಾಲೋಚನೆ ಹಾಗೂ ಜಾಗೃತಿ ಮೂಡಿಸುವ, ಮುಖ್ಯ ವಾಹಿನಿಗೆ ತರಲು, ಸೋಂಕು ಪರೀಕ್ಷೆ ಕೈಗೊಂಡ, ಉತ್ತಮ ಮೇಲ್ವಿಚಾರಣೆ, ಹೆಚ್‌ಐವಿ ಸಮುದಾಯಕ್ಕೆ ಬೆಂಬಲ ನೀಡಿದ ಸೇವೆ ಪರಿಗಣಿಸಿ ಗಣ್ಯರಿಗೆ ಸನ್ಮಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ಏಡ್ಸ್ ನಿಯಂತ್ರಣ ಮತ್ತು ನಿರ್ವಾಹಕ ಘಟಕದ ಜಿಲ್ಲಾ ಏಡ್ಸ್ ನಿಯಂತ್ರಣಾಧಿಕಾರಿ ಡಾ.ಇಂದ್ರಾಣಿ ಅವರು ತಿಳಿಸಿದ್ದಾರೆ.
ಹೆಚ್‌ಐವಿ ನಿಂದ ಉಂಟಾಗುತ್ತಿರುವ ಸಾವನ್ನು ಸೊನ್ನೆಗೆ ತರಲು ಹಾಗೂ ಹೆಚ್‌ಐವಿನಿಂದ ಉಂಟಾಗುತ್ತಿರುವ ಕಳಂಕ ಹಾಗೂ ತಾರತಮ್ಯಗಳನ್ನು ಸೊನ್ನೆಗೆ ತರಲು, ಈ ವರ್ಷದ ‘ಹಕ್ಕುಗಳನ್ನು ಪಡೆಯಲು ಸರಿಯಾದ ಮಾರ್ಗ ಅನುಸರಿಸೋಣ: ನನ್ನ ಆರೋಗ್ಯ ನನ್ನ ಹಕ್ಕು’ ಎಂಬ ಧೈಯ ವಾಕ್ಯವನ್ನಿಟ್ಟುಕೊಂಡು ಆರೋಗ್ಯ ಇಲಾಖೆಯಿಂದ ಹಲವಾರು ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದಿದ್ದಾರೆ.
ಜಿಲ್ಲೆಯಲ್ಲಿ 2017 ರಿಂದ ಅಕ್ಟೋಬರ್ 2024 ರವರೆಗೆ ಒಟ್ಟಾರೆ 816395 ಜನರು ಐ.ಸಿ.ಟಿ.ಸಿ ಕೇಂದ್ರಗಳಲ್ಲಿ ಆಪ್ತಸಮಾಲೋಚನೆ ಪಡೆದು ರಕ್ತ ಪರೀಕ್ಷೆಗೆ ಒಳಪಟ್ಟಿದ್ದು, ಅವರಲ್ಲಿ 2638 ಜನರಿಗೆ ಹೆಚ್.ಐ.ವಿ ಸೋಂಕು ಇರುವುದು ದೃಢಪಟ್ಟಿದೆ.
ಜಿಲ್ಲೆಯಲ್ಲಿ 9 ಐಸಿಟಿಸಿ ಕೇಂದ್ರ, 1 ಮೊಬೈಲ್ ಕೇಂದ್ರ ಕಾರ್ಯನಿರ್ವಹಿಸುತ್ತಿದ್ದು, ಪ್ರಸ್ತುತ 28 ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ 24*7 (ನಗರ-8 ಮತ್ತು 6-ಪಿಪಿಪಿ ಕೇಂದ್ರಗಳು) ಸಾಮಾನ್ಯ ಜನರಿಗೆ ಹಾಗೂ ಗರ್ಭಿಣಿ ಸ್ತ್ರೀಯರಿಗೆ ಉಚಿತವಾಗಿ ಸಮಾಲೋಚನೆ ನೀಡಿ ಹೆಚ್‌ಐವಿ ಪರೀಕ್ಷೆ ಮಾಡಲಾಗುತ್ತಿದೆ.
ವಿಶ್ವ ಆರೋಗ್ಯ ಸಂಸ್ಥೆಯು 1988 ರಿಂದ ಡಿಸೆಂಬರ್ 1 ಅನ್ನು ವಿಶ್ವ ಏಡ್ಸ್ ದಿನವನ್ನಾಗಿ ಆಯೋಜಿಸುತ್ತಾ ಬಂದಿದೆ. ಹೆಚ್‌ಐವಿ, ಏಡ್ಸ್ ಸೊಂಕನ್ನು ಸೊನ್ನೆಗೆ ತರಲು ಸರ್ಕಾರವು ಉದ್ದೇಶಿಸಿದೆ. ಬಳ್ಳಾರಿ ಜಿಲ್ಲೆಯು ಹೆಚ್‌ಐವಿ ಏಡ್ಸ್ ನಿಯಂತ್ರಣಾ ಮತ್ತು ನಿರ್ವಾಹಕ ಘಟಕವು ರಾಜ್ಯದಲ್ಲಿಯೇ ಮಾದರಿಯಾಗಿದ್ದು, 2022ರಲ್ಲಿ ಅತ್ಯುತ್ತಮ ಡ್ಯಾಪ್‌ಕು ಎಂದು ರಾಜ್ಯ ಮಟ್ಟದ ಪ್ರಶಸ್ತಿ ಲಭಿಸಿದೆ.
ಇಐಡಿ ಕೇಂದ್ರಗಳಲ್ಲಿ 2010 ರಿಂದ 2024 ಅಕ್ಟೋಬರ್ ವರೆಗೆ 605 ಮಕ್ಕಳಿಗೆ 6 ವಾರದ ಡಿಬಿಎಸ್ ಪರೀಕ್ಷೆ ಮಾಡಿಸಲಾಗಿದೆ. ಇವರಲ್ಲಿ 10 ಮಕ್ಕಳಿಗೆ ಹೆಚ್‌ಐವಿ ಸೋಂಕು ಇರುವುದು ಕಂಡುಬoದಿದೆ. ಇಲ್ಲಿಯವರೆಗೆ 985 ಮಕ್ಕಳನ್ನು 18 ತಿಂಗಳ ನಂತರ ಹೆಚ್‌ಐವಿ ಪರೀಕ್ಷೆಗೆ ಒಳಪಡಿಸಲಾಗಿದ್ದು, ಇವರಲ್ಲಿ 23 ಮಕ್ಕಳಿಗೆ ಹೆಚ್‌ಐವಿ ಇರುವುದು ದೃಢಪಟ್ಟಿದ್ದು, ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿಸಿದ್ದಾರೆ.
ಹೆಚ್.ಐ.ವಿ ಸೋಂಕಿತ ಗರ್ಭೀಣಿ ಸ್ತ್ರೀಗೆ ಜನಿಸಿದ ಮಕ್ಕಳಿಗೆ 6 ವಾರ, 6 ತಿಂಗಳು, 12 ತಿಂಗಳು ಮತ್ತು 18 ತಿಂಗಳ ಅನುಸರಣೆ ಮಾಡಿ ಡಿ.ಬಿ.ಎಸ್ ಪರೀಕ್ಷೆಯನ್ನು ಐಸಿಟಿಸಿ ಕೇಂದ್ರಗಳಲ್ಲಿ ಮಾಡಲಾಗುತ್ತದೆ. ಈ ಡಿ.ಬಿ.ಎಸ್ ಪರೀಕ್ಷೆಯಿಂದ ಮಕ್ಕಳಲ್ಲಿ ಸೋಂಕು ಇದೆಯೋ ಅಥವಾ ಇಲ್ಲವೋ ಎಂಬುವುದನ್ನು ಪತ್ತೆಹಚ್ಚಬಹುದಾಗಿದೆ. ಇಂತಹ ಕೇಂದ್ರಗಳನ್ನು ಇ.ಐ.ಡಿ ಕೇಂದ್ರಗಳೆoದು ಕರೆಯಲಿದ್ದು, ಜಿಲ್ಲೆಯಲ್ಲಿ 09 ಇಐಡಿ ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ.
ಜಿಲ್ಲೆಯಲ್ಲಿ ಪ್ರಸ್ತುತ ನಗರ ಕೇಂದ್ರಗಳಲ್ಲಿ 2970, ಗ್ರಾಮೀಣ ಭಾಗದಲ್ಲಿ 1342 ಮಹಿಳಾ ಲೈಂಗಿಕ ಕಾರ್ಯಕರ್ತರು ಹಾಗು 1070 ಎಮ್‌ಎಸ್‌ಎಮ್ ಜನರನ್ನು ಹೊಂದಿರುತ್ತಾರೆ. 2024-25 (ಸೆಪ್ಟೆಂಬರ್ 2024 ರವರೆಗೆ) ಸಾಲಿನಲ್ಲಿ 3237 ನಗರ ಕೇಂದ್ರಗಳಲ್ಲಿನ ಲೈಂಗಿಕ ಕಾರ್ಯಕರ್ತರಿಗೆ ಹೆಚ್‌ಐವಿ ಪರೀಕ್ಷೆ ಮಾಡಿಸಿದ್ದು, 07 ಜನರಿಗೆ ಹೆಚ್‌ಐವಿ ಸೋಂಕು ತಗಲಿರುತ್ತದೆ ಎಂದಿದ್ದಾರೆ.
ಜಿಲ್ಲೆಯಲ್ಲಿ ಒಟ್ಟು 2 ಲೈಂಗಿಕ ರೋಗ ಪತ್ತೆ ಕೇಂದ್ರಗಳಿದ್ದು, 2024-25 (ಅಕ್ಟೋಬರ್ 2024 ರವರೆಗೆ) ಸಾಲಿನಲ್ಲಿ ಇವುಗಳ ಅಡಿಯಲ್ಲಿ 6880 ರ ಗುರಿಗೆ ಅನುಗುಣವಾಗಿ 4948 ಪರೀಕ್ಷೆ ಮಾಡಲಾಗಿದ್ದು, ಶೇ.42 ರಷ್ಟು ಪ್ರಗತಿ ಸಾಧಿಸಲಾಗಿದೆ ಎಂದು ಡಾ.ವಿ.ಇಂದ್ರಾಣಿ ಅವರು ತಿಳಿಸಿದ್ದಾರೆ.
ಹೆಚ್‌ಐವಿ/ಏಡ್ಸ್, ಲೈಂಗಿಕ ಸೋಂಕು ಮತ್ತು ಕಾಂಡೋಮ್-ನಿರೋದ್ ಬಳಕೆಯ ಬಗ್ಗೆ ಅರಿವು ಮೂಡಿಸುವುದು. ಲೈಂಗಿಕ ಸೋಂಕುಗಳ ಚಿಕಿತ್ಸೆಗಾಗಿ ಸರ್ಕಾರದ ಆರೋಗ್ಯ ವ್ಯವಸ್ಥೆಯ ಸಹಯೋಗದೊಡನೆ ತಪಾಸಣೆ ಹಾಗೂ ಚಿಕಿತ್ಸಾ ಶಿಬಿರಗಳನ್ನು ಏರ್ಪಡಿಸುವುದು. ಪ್ರತಿ ಮೂರು ತಿಂಗಳಿಗೊಮ್ಮೆ ಲೈಂಗಿಕ ಸೋಂಕಿಗೆ ನಿರಂತರ ತಪಾಸಣೆ ಮತ್ತು ಪ್ರತಿ ಆರು ತಿಂಗಳಿಗೊಮ್ಮೆ “ಹೆಚ್‌ಐವಿ ರಕ್ತಪರೀಕ್ಷೆ ಮಾಡಿಸಿಕೊಳ್ಳುವಂತೆ ಮನವೊಲಿಸುವುದು. ಹೆಚ್‌ಐವಿ ಪಾಸಿಟಿವ್ ಆದ ವ್ಯಕ್ತಿಗಳು, ಅವರ ಕುಟುಂಬದವರು ಮತ್ತು ಮಕ್ಕಳಿಗೆ ಮಾನಸಿಕ, ಸಾಮಾಜಿಕ ಮತ್ತು ಆರ್ಥಿಕ ಬೆಂಬಲ ಸಿಗುವಂತೆ ಮಾಡುವುದು ಸೇರಿದಂತೆ ಇತರೆ ಕಾರ್ಯ ಚಟುವಟಿಕೆ ನಡೆಯುತ್ತಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Share This Article
error: Content is protected !!
";