Ad image

ಎಲ್ಲ ವರ್ಗದವರ ಏಳಿಗೆಗೆ ಸಂವಿಧಾನದಲ್ಲಿ ಅವಕಾಶ ಕಲ್ಪಿಸಿದ ಮಹಾನ್ ಚೇತನ ಡಾ.ಬಿ.ಆರ್.ಅಂಬೇಡ್ಕರ್

Vijayanagara Vani
ಎಲ್ಲ ವರ್ಗದವರ ಏಳಿಗೆಗೆ ಸಂವಿಧಾನದಲ್ಲಿ ಅವಕಾಶ ಕಲ್ಪಿಸಿದ ಮಹಾನ್ ಚೇತನ ಡಾ.ಬಿ.ಆರ್.ಅಂಬೇಡ್ಕರ್

ಬಳ್ಳಾರಿ,ಡಿ.06

- Advertisement -
Ad imageAd image

ಸಂವಿಧಾನದ ಆಶಯಗಳನ್ನು ಪಾಲಿಸಲು ಎಲ್ಲ ವರ್ಗಕ್ಕೂ ಅವಕಾಶ ಕಲ್ಪಿಸಿದ ಮಹಾನ್ ಚೇತನ ಬಾಬಾ ಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್ ಅವರು ಎಂದು ವಿಜಯಪುರದ ಸಾಮಾಜಿಕ ಹೋರಾಟಗಾರ್ತಿ ಅಕ್ಷತಾ.ಕೆ.ಸಿ ಅವರು ಹೇಳಿದರು.
ಇಲ್ಲಿಯ ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ ಅಂಬೇಡ್ಕರ್ ಸಭಾಭವನದಲ್ಲಿ ಶುಕ್ರವಾರ ಆಯೋಜಿಸಿದ್ದ ಡಾ.ಬಿ.ಆರ್.ಅಂಬೇಡ್ಕರ್ ಅವರ 68ನೇ ಮಹಾಪರಿನಿರ್ವಾಣ ದಿನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು.


ನಿರ್ಲಕ್ಷö್ಯ ಹಾಗೂ ತಾತ್ಸಾರಕ್ಕೆ ಒಳಗಾಗಿದ್ದ ಮಹಿಳೆಯರ ಪರವಾಗಿ ಧ್ವನಿ ಎತ್ತಿದವರು ಅಂಬೇಡ್ಕರ್ ಅವರು. ಶೋಷಿತ ವರ್ಗದ ಏಳ್ಗೆಗಾಗಿ ಜೀವನ ಮುಡಿಪಾಗಿಟ್ಟ ಬಾಬಾ ಸಾಹೇಬರು, ಸಂವಿಧಾನದ ಪ್ರತಿ ಪುಟದಲ್ಲೂ ಇಂದಿಗೂ ಜೀವಿಸುತ್ತಿದ್ದಾರೆ ಎಂದರು.
ಇತಿಹಾಸ ಎಂಬುದು ತಾಯಿಗರ್ಭದಷ್ಟೆ ಪವಿತ್ರವಾದದ್ದು, ಹಾಗಾಗಿ ಪ್ರತಿ ಸಂಗತಿಗಳನ್ನು ವೈಜ್ಞಾನಿಕ ನೆಲೆಗಟ್ಟಿನಲ್ಲಿ ಚಿಂತಿಸುವುದು ಯೋಗ್ಯ ಎಂದು ತಿಳಿಸಿದರು.
ಮೌಢ್ಯ ಆಚರಣೆ, ಧರ್ಮದ ಅಮಲು ಬದಿಗೊತ್ತಿ ಸಂವಿಧಾನದ ಚೌಕಟ್ಟಿನಲ್ಲಿ ಜಾತ್ಯತೀತ ರಾಷ್ಟçದಲ್ಲಿ ನಾವೆಲ್ಲ ಸಹಬಾಳ್ವೆಯಿಂದಜೀವನ ನಡೆಸಬೇಕು ಎಂದು ಕರೆ ನೀಡಿದರು.
ಶೋಷಣೆ ರಹಿತ ಸಮಾಜ, ಗೌರವಯುತ ಸಹಬಾಳ್ವೆ, ಸಮಾನತೆ, ಏಕತೆ ಪರಿಕಲ್ಪನೆಗೆ ನಾಂದಿ ಹಾಡಿದ ಅಂಬೇಡ್ಕರ್ ಅವರು ಎಂದೆಂದಿಗೂ ಅಮರ ಎಂದು ಹೇಳಿದರು.
ವಿವಿಯ ಸಿಂಡಿಕೇಟ್ ಸದಸ್ಯರಾದ ಜಯಲಕ್ಷಿö್ಮ ನಾಯಕ್ ಅವರು ಮಾತನಾಡಿ, ಕೇವಲ ನಿಯಮಗಳನ್ನು ರೂಪಿಸುವುದು, ನಿಯಮಗಳನ್ನು ಪಾಲಿಸುವುದು ವಿಶ್ವವಿದ್ಯಾಲಯದ ಕೆಲಸವಾಗದೇ ಮಾನವೀಯ ಮೌಲ್ಯಗಳನ್ನು ರೂಪಿಸುವ ಕೇಂದ್ರವಾಗಬೇಕು ಎಂಬುದು ಬಾಬಾಸಾಹೇಬರ ಕನಸಾಗಿತ್ತು. ಇದನ್ನು ನಾವೆಲ್ಲರೂ ಪಾಲಿಸಿ ಸಮಾಜಕ್ಕೆ ತಮ್ಮ ಹಕ್ಕುಗಳ ಬದ್ಧತೆ ಪ್ರದರ್ಶಿಸಲು ನೆರವಾಗಬೇಕು ಎಂದರು.
ಕುಲಪತಿ ಪ್ರೊ.ಎಂ.ಮುನಿರಾಜು ಅವರು ಮಾತನಾಡಿ, ಹಿಂದುಳಿದ ವರ್ಗದವರೇ ಹೆಚ್ಚಿನ ಸಂಖ್ಯೆಯಲ್ಲಿರುವ ಜಿಲ್ಲೆಯ ಮಕ್ಕಳಿಗೆ ಅನುಕೂಲವಾಗುವಂತೆ ವಿಶ್ವವಿದ್ಯಾಲಯದ ಆವರಣದಲ್ಲಿ ಸ್ಫರ್ಧಾತ್ಮಕ ಪರೀಕ್ಷೆಗಳ ತರಬೇತಿ ಕೇಂದ್ರ ಆರಂಭಿಸಲಾಗುವುದು ಎಂದು ಘೋಷಿಸಿದರು.
ಅಂಬೇಡ್ಕರ್ ಅವರು ಕೇವಲ ದಲಿತ ನಾಯಕರಲ್ಲ, ಅವರೊಬ್ಬ ವಿಶ್ವ ನಾಯಕ ಎಂದು ಬಣ್ಣಿಸಿದರು.
ಕುಲಸಚಿವ ರುದ್ರೇಶ್.ಎಸ್.ಎನ್., ಮೌಲ್ಯಮಾಪನ ಕುಲಸಚಿವ ಪ್ರೊ.ರಮೇಶ್ ಓಲೇಕಾರ್, ಕಾರ್ಯಕ್ರಮ ಸಂಯೋಜಕರಾದ ಪ್ರೊ.ಗೌರಿ ಮಾಣಿಕ್ ಮಾನಸ ವೇದಿಕೆಯಲ್ಲಿದ್ದರು.
ಡಾ.ಕವಿತಾ ಸಾಗರ್ ನಿರೂಪಿಸಿ, ವಂದಿಸಿದರು.
ವಿವಿಧ ನಿಕಾಯಗಳ ಡೀನರು, ವಿಭಾಗಗಳ ಮುಖ್ಯಸ್ಥರು, ಬೋಧಕ-ಬೋಧಕೇತರ ಸಿಬ್ಬಂದಿ, ಸಂಶೋಧನಾರ್ಥಿಗಳು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Share This Article
error: Content is protected !!
";