Ad image

ಡಿ.09 ರಂದು ಬಳ್ಳಾರಿ ನಗರ ವ್ಯಾಪ್ತಿಯಲ್ಲಿ ವಿದ್ಯುತ್ ವ್ಯತ್ಯಯ

Vijayanagara Vani
ಡಿ.09 ರಂದು ಬಳ್ಳಾರಿ ನಗರ ವ್ಯಾಪ್ತಿಯಲ್ಲಿ ವಿದ್ಯುತ್ ವ್ಯತ್ಯಯ
ಬಳ್ಳಾರಿ,ಡಿ.07
ನಗರ ಜೆಸ್ಕಾಂ ಉಪವಿಭಾಗ-2 ರ ವ್ಯಾಪ್ತಿಯಲ್ಲಿ ರಸ್ತೆ ಅಗಲೀಕರಣ ಕೆಲಸದ ನಿಮಿತ್ತ ಕಂಬಗಳ ಸ್ಥಳಾಂತರ ಹಾಗು ಮುರಿದು ಹೋದ ಕಂಬಗಳ ಬದಲಾಯಿಸುವ ಕಾರ್ಯ ಕೈಗೊಳ್ಳುತ್ತಿರುವುದರಿಂದ ಡಿ.09 ರಂದು ಬೆಳಿಗ್ಗೆ 09 ಗಂಟೆಯಿoದ ಮಧ್ಯಾಹ್ನ 03 ಗಂಟೆಯವರೆಗೆ ನಗರದ ವಿವಿಧೆಡೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ.
ವಿದ್ಯುತ್ ವ್ಯತ್ಯಯವಾಗುವ ಪ್ರದೇಶಗಳು:
ಎಫ್-7 ವ್ಯಾಪ್ತಿಯ ರಾಘವ ಕಲಾ ಮಂದಿರ, ಅನಂತಪುರ ರಸ್ತೆ, ವಡ್ಡರ ಬಂಡೆ, ಅಗಡಿ ಮಾರೆಪ್ಪ ಕಾಂಪೌoಡ್, ರೂಪನಗುಡಿ ರಸ್ತೆ, ಮುಬರಕ್ ಟಾಕೀಸ್, ಬಾಲಾಜಿರಾವ್ ರಸ್ತೆ, ಕೆ.ಸಿ.ರೋಡ್, ಮೀನಾಕ್ಷಿ ಸರ್ಕಲ್, ಬೆಂಗಳೂರು ರಸ್ತೆ, ದುಗ್ಗಪ್ಪ ಬೀದಿ, ರೆಡ್ಡಿ ಬೀದಿ, ಅಲ್ಲಂ ಬೀದಿ, ಮುಲ್ಲಂಗಿ ಸಂಜೀವಪ್ಪ ಬೀದಿ, ರೂಪನಗುಡಿ ನರಪ್ಪ ಬೀದಿ, ತಾಯಮ್ಮ ಕಟ್ಟೆ.
ಎಫ್-63 ವ್ಯಾಪ್ತಿಯ ವರಬಸಪ್ಪ ದೇವಸ್ಥಾನ ರಸ್ತೆ, ರೂಪನಗುಡಿ ರಸ್ತೆ, ನಂದಿ ಕಾಲೋನಿ, ವೆಂಕಟರಮಣ ನಗರ, ರೆಡ್ಡಿ ಬೀದಿ, ಕಮ್ಮಿಂಗ್ ರೋಡ್. ಎಫ್-64 ವ್ಯಾಪ್ತಿಯ ಎಸ್‌ಆರ್‌ಎಂ ಲೇ ಔಟ್, ಸಂಸ್ಕೃತಿ ಶಾಲೆ, ಹನುಮಾನ್ ನಗರ, ಬಿ.ಗೋನಾಳ್, ಹೌಸಿಂಗ್ ಬೋರ್ಡ್, ವೆಂಕಟಲಕ್ಷಿö್ಮ ನಗರ, ಅಂಜಿನಪ್ಪ ನಗರ, ಎಸ್‌ಆರ್‌ಪಿ ಕಾಲೋನಿ, ಎಮ್‌ಜಿ ಅನಂತಪುರ ರಸ್ತೆ, ಆಗಡಿ ಮಾರೆಪ್ಪ ಕಾಂಪೌoಡ್, ಆಶ್ರಯ ಕಾಲೋನಿ.
ವಿದ್ಯುತ್ ಗ್ರಾಹಕರು ಹಾಗೂ ಸಾರ್ವಜನಿಕರು ಸಹಕರಿಸಬೇಕು ಎಂದು ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Share This Article
error: Content is protected !!
";