Ad image

ನೊಂದವರ ಬಾಳಿನ ಆಶಾಕಿರಣ ಶ್ರೀ ಕ್ಷೇತ್ರ ಧರ್ಮಸ್ಥಳದ ವಾತ್ಸಲ್ಯ ಕಾರ್ಯಕ್ರಮ

Vijayanagara Vani
ನೊಂದವರ ಬಾಳಿನ ಆಶಾಕಿರಣ ಶ್ರೀ ಕ್ಷೇತ್ರ ಧರ್ಮಸ್ಥಳದ ವಾತ್ಸಲ್ಯ ಕಾರ್ಯಕ್ರಮ

ಸಿರುಗುಪ್ಪ ತಾಲೂಕು ವ್ಯಾಪ್ತಿಯಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮಾತೃಶ್ರೀ ಡಾ|| ಹೇಮಾವತಿ ವಿ ಹೆಗ್ಗಡೆಯವರು “ವಾತ್ಸಲ್ಯ” ಕಾರ್ಯಕ್ರಮದ ಮೂಲಕ ತೀವ್ರ ಆರ್ಥಿಕ ಸಂಕಷ್ಠದಲ್ಲಿರುವ ನಿರ್ಗತಿಕರು, ಅಸಹಾಯಕರು, ಗಂಭೀರ ಅನಾರೋಗ್ಯ ಪೀಡಿತರು ಮುಂತಾದವರಿಗೆ ಪ್ರತಿ ತಿಂಗಳು ತಲಾ ರೂ. 1,000/- ದಂತೆ 66 ಜನ ಅಶಕ್ತರಿಗೆ ರೂ. 66,000/- ಮೊತ್ತವನ್ನು ಮಾಸಾಶನವಾಗಿ ನೀಡುತ್ತಿದ್ದು, ಇದಕ್ಕಾಗಿ ವಾರ್ಷಿಕವಾಗಿ ರೂ. 7,98,000/- ಮೊತ್ತವನ್ನು ಮಂಜೂರುಗೊಳಿಸಿರುತ್ತಾರೆ.
ಇದರೊoದಿಗೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ದಿನನಿತ್ಯ ಜೀವನ ನಿರ್ವಹಣೆಗೆ ಅಗತ್ಯವಿರುವ ಪಾತ್ರೆ, ಚಾಪೆ, ಬಟ್ಟೆ ಒಳಗೊಂಡಿರುವ ರೂ. 3500/- ಮೌಲ್ಯದ ವಾತ್ಸಲ್ಯಕಿಟ್‌ನ್ನು ತಾಲೂಕಿನಲ್ಲಿ ಮಾಸಾಶನ ಪಡೆಯುತ್ತಿರುವ ತೀರ ಅವಶ್ಯಕತೆ ಇರುವ 66 ಜನರಿಗೆ ಒಟ್ಟು ರೂ. 2,31,000/- ಮೌಲ್ಯದ ಕಿಟ್‌ನ್ನು ಮಂಜೂರಾತಿ ನೀಡಿದ್ದು, ಈ ದಿನ ಸಾಂಕೇತಿಕವಾಗಿ ಖೈರುನ್‌ ಬೀ ಹಾಗೂ ಕೃಷ್ಣರವರಿಗೆ ನಗರ ಸಭೆಯ ಸದಸ್ಯರಾದ ನಟರಾಜ ಹಾಗೂ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ತಾಲೂಕು ಯೋಜನಾಧಿಕಾರಿಗಳಾದ ಸುಧೀರ್‌ ಹಂಗಳೂರುರವರು ವಿತರಿಸಿದರು.

- Advertisement -
Ad imageAd image


ನಂತರ ಮಾತನಾಡಿದ ಅವರು ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ನೀಡಿರುವ ವಾತ್ಸಲ್ಯ ಕಿಟ್‌ನ್ನು ಉತ್ತಮ ರೀತಿಯಲ್ಲಿ ಬಳಕೆ ಮಾಡಿಕೊಂಡು ಜೀವನ ನಿರ್ವಹಣೆ ಸುಧಾರಣೆ ಕಾಣಲಿ ಎಂದು ಶುಭ ಹಾರೈಸಿದರು. ವಿಶೇಷವಾಗಿ ಅಪೌಷ್ಠಿಕತೆಯಿಂದ ಬಳಲುತ್ತಿರುವ 09 ಜನ ವಾತ್ಸಲ್ಯ ಫಲಾನುಭವಿಗಳಿಗೆ ಆಹಾರ ಜೀರ್ಣಶಕ್ತಿ ಕಡಿಮೆಯಾಗಿರುವುದನ್ನು ಗಮನಿಸಿ ಪ್ರತಿ ತಿಂಗಳು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವಾತ್ಸಲ್ಯ ಕಾರ್ಯಕ್ರಮದಡಿಯಲ್ಲಿ ಪೌಷ್ಠಿಕ ಧಾನ್ಯಗಳಾದ ಅಕ್ಕಿ, ಗೋಧಿ, ರಾಗಿ ಮತ್ತು ಹೆಸರು ಕಾಳು ಮಿಶ್ರಿತ ” ಸಿರಿ ವಾತ್ಸಲ್ಯ ಮಿಕ್ಸ್‌”ನ್ನು ವಿತರಿಸಿ ಪ್ರತಿನಿತ್ಯ ಪೌಷ್ಠಿಕಯುಕ್ತ ಆಹಾರವನ್ನು ಸೇವನೆ ಮಾಡಲು ಸಲಹೆ ನೀಡಿದರು.
ನಗರ ಸಭೆಯ ಸದಸ್ಯರಾದ ನಟರಾಜರವರು ಮಾತನಾಡಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸಾಮಾಜಿಕ ಕಾರ್ಯಕ್ರಮಗಳು ತಾಲೂಕಿನಲ್ಲಿ ಮಹಿಳೆಯರು ಮುಖ್ಯವಾಹಿನಿಗೆ ಬರಲು ಸ್ವಾವಲಂಬಿ ಜೀವನ ನಡೆಸಲು ಸಹಕಾರಿಯಾಗಿದೆ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ತಾಲೂಕಿನ ಜ್ಞಾನವಿಕಾಸ ಸಮನ್ವಯಾಧಿಕಾರಿಯವರಾದ ಪ್ರಿಯಾ, ಕೃಷಿ ಮೇಲ್ವಿಚಾರಕರಾದ ಪ್ರಭು ಹಿರೇಮಠ್‌, ಮೇಲ್ವಿಚಾರಕರಾದ ಚಂದ್ರಕಲಾ, ಶಿವಪ್ಪ, ಸೇವಾಪ್ರತಿನಿಧಿಗಳಾದ ಶಾಹಿದಾ, ನಂದಿನಿ, ನೇತ್ರಾವತಿ ಹಾಗೂ ಸ್ವ-ಸಹಾಯ ಸಂಘದ ಸದಸ್ಯರು ಉಪಸ್ಥಿತರಿದ್ದ

Share This Article
error: Content is protected !!
";