ಪರಿಶಿಷ್ಟ ಜಾತಿ ಉಪ ಯೋಜನೆಯಡಿ ಕೌಶಲ್ಯಾಭಿವೃದ್ಧಿ ತರಬೇತಿ ಕಾರ್ಯಕ್ರಮ ಅಣಬೆ ಬೆಳೆ ತಾಂತ್ರಿಕತೆ ತಿಳಿದು ಸ್ವ-ಉದ್ಯೋಗ ಪ್ರಾರಂಭಿಸಿ : ಡಾ.ಆರ್.ಸಿ.ಜಗದೀಶ್

Vijayanagara Vani
ಪರಿಶಿಷ್ಟ ಜಾತಿ ಉಪ ಯೋಜನೆಯಡಿ ಕೌಶಲ್ಯಾಭಿವೃದ್ಧಿ ತರಬೇತಿ ಕಾರ್ಯಕ್ರಮ ಅಣಬೆ ಬೆಳೆ ತಾಂತ್ರಿಕತೆ ತಿಳಿದು ಸ್ವ-ಉದ್ಯೋಗ ಪ್ರಾರಂಭಿಸಿ : ಡಾ.ಆರ್.ಸಿ.ಜಗದೀಶ್
ಶಿವಮೊಗ್ಗ, ಡಿಸೆಂಬರ್ 17 
ಅಣಬೆ ಒಂದು ಶಿಲೀಂದ್ರವಾಗಿದ್ದು, ಇದನ್ನು ಕೃಷಿ ತ್ಯಾಜ್ಯದಿಂದ ಬೆಳೆಯಬಹುದಾಗಿದೆ. ಈ ತಾಂತ್ರಿಕತೆ ಕುರಿತು ತರಬೇತಿಯಲ್ಲಿ ಮಾಹಿತಿ ಪಡೆದುಕೊಂಡು ಸ್ವ-ಉದ್ಯೋಗವನ್ನು ಪ್ರಾರಂಭಿಸಿ ಎಂದು ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಕುಲಪತಿಗಳಾದ ಡಾ.ಆರ್. ಸಿ. ಜಗದೀಶ ಕರೆ ನೀಡಿದರು
ಕೃಷಿ ವಿಜ್ಞಾನ ಕೇಂದ್ರ, ಶಿವಮೊಗ್ಗದ ವತಿಯಿಂದ ಪರಿಶಿಷ್ಟ ಜಾತಿ ಉಪಯೋಜನೆಯಡಿ ದಿನಾಂಕ 16 ರಿಂದ 20ನೇ ಡಿಸೆಂಬರ್ 2024 ರವರೆಗೆ ಐದು ದಿನಗಳ ಕಾಲ ಏರ್ಪಡಿಸಲಾಗಿರುವ ‘ಅಣಬೆ ಬೇಸಾಯ’ ಕುರಿತ ವೃತ್ತಿ ಪರ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಅಣಬೆ ಕುರಿತು ವಿವರಗಳನ್ನು ನೀಡಿದರು.
ಹಿರಿಯ ತಾಂತ್ರಿಕ ಅಧಿಕಾರಿ ಡಾ.ನಾಗರಾಜ, ಆರ್ ಮಾತನಾಡಿ, ಇದು ಒಂದು ಸಸಾರಜನಕಯುಕ್ತ ಮತ್ತು ವಿವಿಧ ಅನ್ನಾಂಗಗಳನ್ನು ಹೊಂದಿದ ಹಾಗೂ ಕೊಬ್ಬಿನಾಂಶರಹಿತವಾದ ಆಹಾರ ಪದಾರ್ಥವಾಗಿದ್ದು, ಇದನ್ನು ಎಲ್ಲರೂ ಸೇವಿಸಬಹುದೆಂದು ತಿಳಿಸಿದರು.
ಈ ಅಣಬೆಯಲ್ಲಿ ಸಸಾರಜನಕದ ಅಂಶ ಇರುವುದರಿಂದ ಮಕ್ಕಳಲ್ಲಿ ಮತ್ತು ಮಹಿಳೆಯರಲ್ಲಿ ಕಾಣಬರುವ ಸಸಾರಜನಕ ಅಪೌಷ್ಟಿಕತೆಯನ್ನು ನೀಗಿಸಬಹುದು ಎಂದು ತಿಳಿಸಲಾಯಿತು. ಹೃದಯ ಸಂಬoಧಿ ಖಾಯಿಲೆಗಳಿಂದ ಬಳಲುತ್ತಿರುವವರಿಗೆ ಇದು ಉತ್ತಮ ಆಹಾರ. ಮನುಷ್ಯನಿಗೆ ಆಹಾರದಲ್ಲಿ ದಿನಕ್ಕೆ 750 ಗ್ರಾಂ ನಷ್ಟು ಸಸಾರಜನಕದ ಸೇವನೆ ಅವಶ್ಯವಾಗಿದ್ದು, ಸಸಾರಜನಕ ಅಂಶವನ್ನು ಹೊಂದಿರುವ ಬೇಳೆಕಾಳುಗಳ ಉತ್ಪಾದನೆಯೂ ಕಡಿಮೆ ಇರುವುದರಿಂದ, ಸಸಾರಜನಕ ಅಂಶವುಳ್ಳ ಆಹಾರ ಪದಾರ್ಥಗಳಿಗೆ ಪರ್ಯಾಯವಾಗಿ ಈ ಅಣಬೆಯನ್ನುಆಹಾರದಲ್ಲಿ ಬಳಸಬಹುದೆಂದುª ತಿಳಿಸಿದರು.
ಈ ಐದು ದಿನಗಳ ತರಬೇತಿಯಲ್ಲಿ ಅಣಬೆಯ ಉಪಯುಕ್ತತೆ, ವಿವಿಧ ಣಬೆ ಪ್ರಬೇಧಗಳ ಉತ್ಪಾದನಾ ತಾಂತ್ರಿಕತೆ, ಚಿಪ್ಪು ಅಣಬೆ ಬೇಸಾಯ ಪದ್ಧತಿ ಮತ್ತು ಬೀಜೋತ್ಪಾದನೆ ವಿಧಾನವನ್ನು ಪ್ರಾಯೋಗಿಕವಾಗಿ ವಿವರಿಸಲಾಗುವುದು. ಶಿಬಿರಾರ್ಥಿಗಳನ್ನು ಅಣಬೆ ಪ್ರಯೋಗಾಲಯ, ಜೈವಿಕ ಕೇಂದ್ರ, ತೋಟಗಾರಿಕೆ ಇಲಾಖೆ, ಶಿವಮೊಗ್ಗ ಇಲ್ಲಿಗೆ ಭೇಟಿ ಮಾಡಿಸಿ, ಅಣಬೆ ಬೆಳೆಯಲು ದೊರಕುವ ಸೌಲಭ್ಯಗಳ ಬಗ್ಗೆ ಇಲಾಖಾ ಸಿಬ್ಬಂದಿಗಳಿoದ ಮಾಹಿತಿ ನೀಡಿಸಲಾಗುವುದು. ಅಲ್ಲದೆ, ತರಬೇತಿಯ ನಂತರ ಪ್ರತಿ ಶಿಬಿರಾರ್ಥಿಗೂ ಕೃಷಿ ವಿಜ್ಞಾನ ಕೇಂದ್ರದ ವತಿಯಿಂದ ಅಣಬೆ ಬೀಜವನ್ನು ಕೊಟ್ಟು ಶಿಬಿರಾರ್ಥಿಗಳಿಗೆ ಪ್ರಮಾಣ ಪತ್ರವನ್ನು ಕೊಡಲಾಗುವುದು.
ಕಾರ್ಯಕ್ರಮದಲ್ಲಿ ಕುಲಸಚಿವರಾದ ಡಾ. ಕೆ.ಸಿ.ಶಶಿಧರ, ಸಹ ಸಂಶೋಧನಾ ನಿರ್ದೇಶಕರಾದ ಡಾ.ಎಸ್. ಪ್ರದೀಪ್, ಕೆ.ಶಿ.ನಾ.ಕೃ.ತೋ.ವಿ.ವಿ., ಸಹ ವಿಸ್ತರಣಾ ನಿರ್ದೇಶಕರಾದ ಡಾ. ಬಿ. ಸಿ. ಹನುಮಂತಸ್ವಾಮಿ, ಮತ್ತು ಐ.ಸಿ.ಎ.ಆರ್.-ಕೃಷಿ ವಿಜ್ಞಾನ ಕೇಂದ್ರ, ಶಿವಮೊಗ್ಗದ ಹಿರಿಯ ವಿಜ್ಞಾನಿ ಮತ್ತು ಮುಖ್ಯಸ್ಥರಾದ ಡಾ. ಸಿ. ಸುನಿಲ್ ಇವರು ಉಪಸ್ಥಿತರಿದ್ದರು. ಒಟ್ಟು 30 ಶಿಬಿರಾರ್ಥಿಗಳು ಈ ಐದು ದಿನಗಳ ತರಬೇತಿಯಲ್ಲಿ ಭಾಗವಹಿಸಿರುತ್ತಾರೆ.
Share This Article
error: Content is protected !!
";