Ad image

Vijayanagara Vani

ಆಕಾಶವಾಣಿ ಭದ್ರಾವತಿಯಲ್ಲಿ ಜಿಲ್ಲೆಯ ಪ್ರವಾಸಿ ತಾಣದ ಗೋಡೆಚಿತ್ರಣ ಉದ್ಘಾಟನೆ
ಶಿವಮೊಗ್ಗ, ಡಿಸೆಂಬರ್ 18
ಆಕಾಶವಾಣಿ ಭದ್ರಾವತಿ 60 ನೇ ವರ್ಷದ ವಜ್ರ ಮಹೋತ್ಸವ ವರ್ಷಾಚರಣೆ ಸಂದರ್ಭದಲ್ಲಿ ಆಕಾಶವಾಣಿಯಲ್ಲಿ ಸಿದ್ದಪಡಿಸಿದ ಶಿವಮೊಗ್ಗ ಜಿಲ್ಲೆಯ ಪ್ರಸಿದ್ದ ಪ್ರವಾಸಿತಾಣದ ಗೋಡೆಚಿತ್ರವನ್ನು ಶಿವಮೊಗ್ಗ ಜಿಲ್ಲೆಯ ಪ್ರಭಾರಿ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪಂಚಾಯತಿಯ ಮುಖ್ಯ ಕಾರ್ಯ ನಿರ್ಹಣಾಧಿಕಾರಿಗಳಾದ ಹೇಮಂತ್.ಎನ್ ಅವರು ರಿಬ್ಬನ್ ಕಟ್ ಮಾಡುವ ಮುಖಾಂತರ ಉದ್ಘಾಟಿಸಿದರು.
ಈ ವೇಳೆ ಅವರು ಮಾತನಾಡಿ, ಸಾರ್ವಜನಿಕ ಸ್ಥಳಗಳಲ್ಲಿ ಇಂತಹ ಚಿತ್ರಗಳನ್ನು ಹಾಕುವುದರಿಂದ ಪ್ರವಾಸೋದ್ಯಮದ ಬೆಳವಣಿಗೆ ಸಾಧ್ಯ ಎಂದರು.
ಕಾರ್ಯಕ್ರಮ ಮುಖ್ಯಸ್ಥರಾದ ಎಸ್.ಆರ್.ಭಟ್ ಮಾತನಾಡಿ, ಆಕಾಶವಾಣಿ 60 ರ ಸಂಭ್ರಮದಲ್ಲಿ ಇಂತಹ ಚಟುವಟಿಕೆ ಮಾಡುತ್ತಿರುವದರಿಂದ ಸಾರ್ವಜನಿಕರಿಗೆ ಕಚೇರಿ ಭೇಟಿಯ ಸಮಯದಲ್ಲಿ ಜಿಲ್ಲೆಯ ಪ್ರವಾಸಿತಾಣದ ಪರಿಚಯವೂ ಸಾಧ್ಯವಾಗುತ್ತದೆ ಎಂದು ತಿಳಿಸಿದರು.
ಈ ಸಮಯದಲ್ಲಿ ಆಕಾಶವಾಣಿ ಕಾರ್ಯಕಮ ಅಧಿಕಾರಿ ಎಸ್.ಎಲ್.ರಮೇಶ್ ಪ್ರಸಾದ್ ಹಾಗೂ ತಾಂತ್ರಿಕ ವಿಭಾಗ ಮತ್ತು ಆಡಳಿತ ವಿಭಾಗದ ಸಿಬ್ಬಂದಿಗಳು ಉಪಸ್ಥಿತರಿದ್ದರು.

- Advertisement -
Ad imageAd image
Share This Article
error: Content is protected !!
";