ಧಾರವಾಡ () ಡಿಸೆಂಬರ.21: ಧಾರವಾಡ ಜಿಲ್ಲಾ ಗೃಹರಕ್ಷಕ ದಳದ ಸಮಾದೇಷ್ಟರಾದ ಸುನೀಲ್ ಸರೂರ ಅವರ ಮಾರ್ಗದರ್ಶನದ ಮೇರೆಗೆ ಬಳ್ಳಾರಿ ಜಿಲ್ಲೆ ಮೀನಹಳ್ಳಿಯ ಗೃಹರಕ್ಷಕ ಮತ್ತು ಪೌರರಕ್ಷಣಾ ಪ್ರಾದೇಶಿಕ ತರಬೇತಿ ಕೇಂದ್ರದಲ್ಲಿ ಡಿಸೆಂಬರ 2 ರಿಂದ 12, 2024 ರವರೆಗೆ ನಡೆದ ಪುನರ ಮನನ ತರಬೇತಿಗೆ ಕಲಘಟಗಿ ಘಟಕದ ಕಲ್ಲಯ್ಯ. ಶಿ. ಹೆಬ್ಬಳ್ಳಿಮಠ ಎದೆ ಸಂ:779 ಅವರನ್ನು ನೇಮಿಸಲಾಗಿತ್ತು.
ಪುನರ ಮನನ ತರಬೇತಿಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿ ಚಿನ್ನದ ಪದಕ ಪಡೆದು ಧಾರವಾಡ ಜಿಲ್ಲಾ ಗೃಹರಕ್ಷಕ ದಳಕ್ಕೆ ಹೆಸರು, ಕೀರ್ತಿಯನ್ನು ತಂದಿದ್ದಾರೆ. ಇವರ ಸಾಧನೆಯನ್ನು ಮೆಚ್ಚಿ ಜಿಲ್ಲಾ ಸಮಾದೇಷ್ಟರು. ಕಛೇರಿ ಸಿಬ್ಬಂದಿ ವರ್ಗದವರು ಹಾಗೂ ಧಾರವಾಡ ಜಿಲ್ಲೆಯ ಎಲ್ಲಾ ಗೃಹರಕ್ಷಕ ಅಧಿಕಾರಿಗಳು, ಗೃಹರಕ್ಷಕರು, ಗೃಹರಕ್ಷಕಿಯರು ಅಭಿನಂದಿಸಿದ್ದಾರೆ.