ಜ.17 ರಂದು ಸಂಸದರ ನೂತನ ಕಚೇರಿ ಉದ್ಘಾಟನೆ

Vijayanagara Vani
ಜ.17 ರಂದು ಸಂಸದರ ನೂತನ ಕಚೇರಿ ಉದ್ಘಾಟನೆ

ಬಳ್ಳಾರಿ,ಜ.16

- Advertisement -
Ad imageAd image

09-ಬಳ್ಳಾರಿ ಲೋಕಸಭೆ ಕ್ಷೇತ್ರದ ಸಂಸದರಾದ ಈ.ತುಕಾರಾಂ ಅವರ ನೂತನ ಕಚೇರಿ ಉದ್ಘಾಟನೆ ಕಾರ್ಯಕ್ರಮವು ಜ.17 ರಂದು ಮಧ್ಯಾಹ್ನ 12.15 ಗಂಟೆಗೆ ನಗರದ ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿ ಹಮ್ಮಿಕೊಳ್ಳಲಾಗಿದೆ.
ಸಾರ್ವಜನಿಕರು ತಮ್ಮ ಕೆಲಸ ಕಾರ್ಯಗಳ ನಿಮಿತ್ತ ಭೇಟಿಯಾಗಲು ಹಾಗೂ ಕುಂದು-ಕೊರತೆ ಸಲ್ಲಿಸಲು ಅನುಕೂಲವಾಗುವಂತೆ ನಗರದ ರೈಲ್ವೇ ನಿಲ್ದಾಣ ರಸ್ತೆಯ ಜಿಲ್ಲಾಧಿಕಾರಿಗಳ ಕಚೇರಿಯ ಆವರಣದಲ್ಲಿ ನೂತನ ಸಂಸದರ ಕಚೇರಿ ಆರಂಭಿಸಲಾಗುತ್ತಿದೆ ಎಂದು ಸಂಸದರ ಆಪ್ತ ಸಹಾಯಕರು ತಿಳಿಸಿದ್ದಾರೆ.
———-

Share This Article
error: Content is protected !!
";