ಸಿರುಗುಪ್ಪ ಮಗಳನ್ನು ಪ್ರೀತಿ ಮಾಡಬಾರದೆಂದು ಹಲವು ಬಾರಿ ಎಚ್ಚರಿಕೆ ನೀಡಿದ್ದರೂ ಸಹಾ ಪ್ರೀತಿ ಮಾಡುವುದನ್ನು ಮುಂದುವರೆಸಿದ್ದು ಇದೇ ದ್ವೇಷವನ್ನಿಟ್ಟುಕೊಂಡು ಮಂಜುನಾಥ ಗೌಡನನ್ನು ಕೊಲೆ ಮಾಡಿರುವ ದುರ್ಘಟನೆ ಗಣಿನಾಡು ಬಳ್ಳಾರಿ ಜಿಲ್ಲೆಯ ಸಿರುಗುಪ್ಪ ತಾಲೂಕಿನ ರಾರಾವಿ ಗ್ರಾಮದಲ್ಲಿ ನಡೆದಿದ್ದು, ಕೊಲೆ ಮಾಡಿದ ಆರೋಪಿಗಳು ಪೊಲೀಸರ ಬಲೆಗೆ ಬಿದ್ದಿದ್ದಾರೆ.
ಜಿಲ್ಲೆಯ ಸಿರುಗುಪ್ಪ ತಾಲೂಕಿನ ರಾರಾವಿ ಗ್ರಾಮದ ಹಗರಿ ನದಿಯಲ್ಲಿ ಮಂಜುನಾಥಗೌಡ ತಂದೆ ಶಂಕರಗೌಡ ವ:22 ವರ್ಷ, ರಾರಾವಿ ಗ್ರಾಮದವನು ಈತನ ಅರ್ಧ ದೇಹಭಾಗವನ್ನು ಹಗರಿ ನದಿಯಲ್ಲಿ ಹೂತಿಟ್ಟಿರುವ ಸ್ಥಿತಿಯಲ್ಲಿ ಶವವು ಕಂಡು ಬಂದ ಮೇರೆಗೆ ಮೃತನ ಅಣ್ಣ ಹನುಮಂತ ಗೌಡ ತನ್ನ ತಮ್ಮನ ಸಾವಿನ ಬಗ್ಗೆ ಅನುಮಾನಾಸ್ಪದ ಸಾವಿನ ಪ್ರಕರಣ ದಾಖಲಿಸಿದ್ದಾನೆ. ಪ್ರಕರಣದ ಬೆನ್ನು ಹತ್ತಿದ ಸಿರುಗುಪ್ಪ ಪೋಲಿಸರ ತಂಡ
ಡಿ.ಮಲ್ಲಯ್ಯ ನನ್ನು ವಶಕ್ಕೆ ಪಡೆದು ವಿಚಾರಿಸಲಾಗಿ ಸಮಯದಲ್ಲಿ ಆರೋಪಿತರು ಕೊಲೆಯಾದ ಮಂಜುನಾಥಗೌಡನು ತಮ್ಮ ಮಗಳನ್ನು ಪ್ರೀತಿ ಮಾಡಬಾರದೆಂದು ಹಿಂದೆ ಹಲವು ಬಾರಿ ಎಚ್ಚರಿಕೆ ನೀಡಿದ್ದರೂ ಸಹಾ ಪ್ರೀತಿ ಮಾಡುವುದನ್ನು ಮುಂದುವರೆಸಿದ್ದು ಇದೇ ದ್ವೇಷವನ್ನಿಟ್ಟುಕೊಂಡು 2024 ಡಿಸೆಂಬರ್ 28 ರಂದು ರಾತ್ರಿ ರಾರಾವಿಯ ಗ್ರಾಮದ ಹೊರವಲಯದ ಹುಣಸೆ ಮರದ ತೋಟಕ್ಕೆ ಮಂಜುನಾಥಗೌಡನನ್ನ ಕರೆಯಿಸಿ ಕುತ್ತಿಗೆಗೆ ಟವೆಲ್ ಬಿಗಿದು, ಮುಖಕ್ಕೆ ಸಲಿಕೆಯಿಂದ ಹೊಡೆದು ಸಾಯಿಸಿ, ಹಗರಿ ನದಿಯಲ್ಲಿ ಹೂತಿ ಹಾಕಿರುವುದಾಗಿ ತಿಳಿಸಿದ್ದಾರೆ ಇಬ್ಬರು ಆರೋಪಿತರನ್ನು ಕೊಲೆ ಪ್ರಕರಣದಲ್ಲಿ ಪತ್ತೆ ಹಚ್ಚಿದ್ದಾರೆ.
ಪ್ರಕರಣದ ತನಿಖೆಗೆ ಪ್ರಾಮಾಣಿಕ ಪೊಲೀಸ್ ವರಿಷ್ಠಾಧಿಕಾರಿ ಡಾ:ಶೋಭಾರಾಣಿ ವಿ.ಜೆ ನೀಡಿದ ಮಾರ್ಗದರ್ಶನದ ಮೇರೆಗೆ ಸಿರುಗುಪ್ಪ ಉಪ-ವಿಭಾಗದ ಡಿ ಎ ಎಸ್ ಪಿ ವೆಂಕಟೇಶ ಇವರ
ನೇತೃತ್ವದಲ್ಲಿ ಸಿರುಗುಪ್ಪ ವೃತ್ತ ನಿರೀಕ್ಷಕರಾದ ಹನುಮಂತಪ್ಪ ಪಿ ಎಸ್ ಐ ಗಳಾದ ಪರಶುರಾಮ್ ಪಿಎಸ್ಐ ಸಿರುಗುಪ್ಪ, ಶಶಿಧರ ವೈ. ಹಚ್ಚೋಳ್ಳಿ, ಸಿಬ್ಬಂದಿರವರಾದ ಚಿನ್ನಪ್ಪ ಗುಡಿಕೇರಿ ಹೆಚ್, ಬಸವರಾಜ ಪಿಸಿ, ಬಾಲಚಂದ್ರ ರಾಥೋಡ್, ಈರಣ್ಣ ಪಿಸಿ, ವಿಷ್ಣುಮೋಹನ ಪಿಸಿ, ಮುದುಕಯ್ಯ ಶಿಕಾಲಿ , ಅಮರೇಶ ಪಿಸಿ,ಕುಪ್ಪಣ್ಣ ಪಿಸಿ, ಮಲ್ಲನಗೌಡ, ಗಾದಲಿಂಗಪ್ಪ ರವರನ್ನಳಗೊಂಡ ತಂಡಕಾರ್ಯಚರಣೆ ಮಾಡಿ ಪತ್ತೆ ಹಚ್ಚಿದ್ದಾರೆ.
ಆರೋಪಿಗಳ ಪತ್ತೆ ಹಚ್ಚಲು ಕಾರ್ಯ ನಿರ್ವಹಿಸಿದ್ದಕ್ಕೆ ಎಸ್ಪಿ ಶೋಭಾರಾಣಿ ಅವರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.