Ad image

ಶ್ರೀ ರಂಭಾಪುರಿ ಜಗದ್ಗುರುಗಳವರ ಫೆಬ್ರುವರಿ ಮಾಹೆಯ ಪ್ರವಾಸ ವಿವರ ಶ್ರೀ ರಂಭಾಪುರಿ ಪೀಠ(ಬಾಳೆಹೊನ್ನೂರು) ಮಾರ್ಚ-1.

Vijayanagara Vani
ಶ್ರೀ ರಂಭಾಪುರಿ ಜಗದ್ಗುರುಗಳವರ ಫೆಬ್ರುವರಿ ಮಾಹೆಯ ಪ್ರವಾಸ ವಿವರ ಶ್ರೀ ರಂಭಾಪುರಿ ಪೀಠ(ಬಾಳೆಹೊನ್ನೂರು) ಮಾರ್ಚ-1.

ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ.ವೀರಸೋಮೇಶ್ವರ ಜಗದ್ಗುರುಗಳವರ 2025ನೇ ಸಾಲಿನ ಮಾರ್ಚ ಮಾಹೆಯ ಪ್ರವಾಸ ಕಾರ್ಯಕ್ರಮ ಈ ಕೆಳಗಿನಂತಿರುತ್ತದೆ.
ಮಾರ್ಚ 2ರಂದು ಬೀದರ ಜಿಲ್ಲೆ ಚಿಟಗುಪ್ಪದಲ್ಲಿ ಶ್ರೀ ಜಗದ್ಗುರು ರೇವಣಸಿದ್ಧೇಶ್ವರ ರಥೋತ್ಸವ ಸಮಾರಂಭ, 3ರಂದು ತಾಳಿಕೋಟೆ ತಾಲೂಕ ನಾವದಗಿಯಲ್ಲಿ ಧರ್ಮ ಜಾಗೃತಿ ಸಮಾರಂಭ, 5ರಂದು ಬ್ಯಾಡಗಿ ತಾಲೂಕ ಗುಡ್ಡದಮಲ್ಲಾಪುರದಲ್ಲಿ ದಾಸೋಹ ಮಠದ ಜಾತ್ರಾ ಮಹೋತ್ಸವ ಸಮಾರಂಭದ ಸಾನ್ನಿಧ್ಯ ವಹಿಸುವರು. ಮಾರ್ಚ 10ರಿಂದ 14ರ ವರೆಗೆ ಬಾಳೆಹೊನ್ನೂರು ಶ್ರೀ ಜಗದ್ಗುರು ರಂಭಾಪುರಿ ಪೀಠದಲ್ಲಿ ಶ್ರೀ ಜಗದ್ಗುರು ರೇಣುಕಾಚಾರ್ಯ ಜಯಂತಿ ಯುಗಮಾನೋತ್ಸವ-ಕ್ಷೇತ್ರನಾಥ ಶ್ರೀ ವೀರಭದ್ರಸ್ವಾಮಿ ಮಹಾರಥೋತ್ಸವದ ಅಂಗವಾಗಿ ಜರುಗುವ ವಿವಿಧ ಸಮಾರಂಭಗಳಲ್ಲಿ ಪಾಲ್ಗೊಳ್ಳುವರು. ದಿನಾಂಕ 18ರಂದು ಅಜ್ಜಂಪುರ ತಾಲೂಕ ಗಡಿಗಿರಿಯಾಪುರ ಗ್ರಾಮದಲ್ಲಿ ಶ್ರೀ ಜಗದ್ಗುರು ರೇಣುಕಾಚಾರ್ಯ ಜಯಂತಿ ಸಮಾರಂಭ, 19ರಂದು ತಾಳಿಕೋಟೆ ತಾಲೂಕ ಕಲಕೇರಿಯಲ್ಲಿ ಧರ್ಮ ಜಾಗೃತಿ ಸಮಾರಂಭ, 20ರಂದು ಇಂಡಿ ತಾಲೂಕ ಜೇವೂರು ಗ್ರಾಮದಲ್ಲಿ ಜರುಗುವ ಸಾಮೂಹಿಕ ವಿವಾಹ ಸಮಾರಂಭದ ಸಾನ್ನಿಧ್ಯ ವಹಿಸುವರು. ದಿನಾಂಕ 21 ಮತ್ತು 22ರಂದು ಬೀದರ ನಗರದ ಶ್ರೀ ಜಗದ್ಗುರು ಪಂಚಾಚಾರ್ಯ ಪುಣ್ಯಾಶ್ರಮಕ್ಕೆ ಭೇಟಿ ನೀಡುವರು. ದಿನಾಂಕ 23ರಂದು ಆಳಂದ ತಾಲೂಕ ಚಲಗೇರಿಯಲ್ಲಿ ನೂತನ ಮಠದ ಉದ್ಘಾಟನೆ, 24ರಂದು ಸೇಡಂ ತಾಲೂಕ ಮಳಖೇಡದಲ್ಲಿ ಧರ್ಮ ಜಾಗೃತಿ ಸಮಾರಂಭ, 26ರಂದು ತರೀಕೆರೆಯಲ್ಲಿ ಇಷ್ಟಲಿಂಗ ಮಹಾಪೂಜಾ ಸಮಾರಂಭ, 27ರಂದು ಬೆಳಿಗ್ಗೆ ಸೊರಬ ತಾಲೂಕ ಶಾಂತಪುರ ಮಠದಲ್ಲಿ ಶ್ರೀ ಜಗದ್ಗುರು ರೇಣುಕಾಚಾರ್ಯ ಜಯಂತಿ ಸಮಾರಂಭದ ಸಾನ್ನಿಧ್ಯ ವಹಿಸುವರು. ಸಂಜೆ 6 ಗಂಟೆಗೆ ಮುಂಡರಗಿ ತಾಲೂಕಿನ ಕಲಕೇರಿಗೆ ಶುಭಾಗಮನಗೈಯ್ಯುವರು. ದಿನಾಂಕ 28ರಂದು ಕಲಕೇರಿಯಲ್ಲಿ ಇಷ್ಟಲಿಂಗ ಮಹಾಪೂಜಾ ಸಮಾರಂಭ, ದಿನಾಂಕ 29 ಮತ್ತು 30ರಂದು ಹುಬ್ಬಳ್ಳಿ ತಾಲೂಕ ತಿರುಮಲಕೊಪ್ಪದ (ತಡಸ್ ಕ್ರಾಸ್) ಶ್ರೀ ಜಗದ್ಗುರು ರೇಣುಕ ಧರ್ಮ ನಿವಾಸದಲ್ಲಿ ಶ್ರೀ ಜಗದ್ಗುರು ಪಂಚಾಚಾರ್ಯ ಯುಗಮಾನೋತ್ಸವ-ಶ್ರೀ ಜಗದ್ಗುರು ರೇಣುಕಾಚಾರ್ಯ ರಥೋತ್ಸವ ಸಮಾರಂಭ ಹಾಗೂ 31ರಂದು ಲಕ್ಷೆö್ಮÃಶ್ವರ ತಾಲೂಕ ಅಡರಕಟ್ಟಿ ಗ್ರಾಮದಲ್ಲಿ ಕೃಷಿ ಪ್ರಾಥಮಿಕ ಪತ್ತಿನ ಸಹಕಾರ ಸಂಘದ 75ನೇ ವರುಷದ ಅಮೃತ ಮಹೋತ್ಸವ ಸಮಾರಂಭದ ಸಾನ್ನಿಧ್ಯ ವಹಿಸುವರು. ಶ್ರೀ ರಂಭಾಪುರಿ ಜಗದ್ಗುರುಗಳವರ ಧಾರ್ಮಿಕ ಕಾರ್ಯಕ್ರಮಗಳ ಲಾಭವನ್ನು ಸಮಸ್ತ ಜನತೆ ಪಡೆದುಕೊಳ್ಳಬೇಕೆಂದು ಶ್ರೀ ಪೀಠದ ವಾರ್ತಾ ಸಂಯೋಜನಾಧಿಕಾರಿ ಸಿ.ಎಚ್.ಬಾಳನಗೌಡ್ರ ತಿಳಿಸಿದ್ದಾರೆ.
ಸಿ.ಎಚ್. ಬಾಳನಗೌಡ್ರ
ವಾರ್ತಾ ಸಂಯೋಜನಾಧಿಕಾರಿ,
ಶ್ರೀ ಜಗದ್ಗುರು ರಂಭಾಪುರಿ ವೀರಸಿಂಹಾಸನ ಮಹಾಸಂಸ್ಥಾನ ಪೀಠ,
ಬಾಳೆಹೊನ್ನೂರು

Share This Article
error: Content is protected !!
";