ಬಳ್ಳಾರಿ,ಮಾ.10
ಮಾ.11 ರಂದು ನಡೆಯುವ ಶ್ರೀ ಕನಕ ದುರ್ಗಮ್ಮ ಸಿಡಿ ಬಂಡಿ ಉತ್ಸವದ ಹಿನ್ನೆಲೆಯಲ್ಲಿ ಸಾರ್ವಜನಿಕ ಸುರಕ್ಷತೆ ಹಾಗೂ ಸುಗಮ ಸಂಚಾರ ವ್ಯವಸ್ಥೆ ಕಲ್ಪಿಸುವ ಹಿತದೃಷ್ಠಿಯಿಂದ ಕನಕ ದುರ್ಗಮ್ಮ ದೇವಸ್ಥಾನದ ಕಡೆಯಿಂದ, ಎಸ್.ಪಿ ವೃತ್ತದ ಕಡೆಯಿಂದ, ರಾಯಲ್ ವೃತ್ತದ ಕಡೆಯಿಂದ, ಕೂಲ್ ಕಾರ್ನರ್ ವೃತ್ತದ ಕಡೆಯಿಂದ, ಕಪ್ಪಗಲ್ಲು ರಸ್ತೆ ಕಡೆಯಿಂದ ಹಾಗೂ ಮೋಕ ರಸ್ತೆ ಕಡೆಯಿಂದ ದೇವಸ್ಥಾನಕ್ಕೆ ಬರುವ ವಾಹನಗಳಿಗೆ ರಸ್ತೆ ಸಂಚಾರವನ್ನು ತಾತ್ಕಾಲಿಕವಾಗಿ ನಿರ್ಬಂಧಿಸಿ ಪರ್ಯಾಯ ಮಾರ್ಗಗಳಲ್ಲಿ ರಸ್ತೆ ಸಂಚಾರ ಮಾಡಬೇಕು ಎಂದು ಜಿಲ್ಲಾ ದಂಡಾಧಿಕಾರಿಯಾಗಿರುವ ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ ಅವರು ತಿಳಿಸಿದ್ದಾರೆ.
ಮೋಟರ್ ವಾಹನ ಕಾಯ್ದೆ 1988 ರ ಅಧಿನಿಯಮ 115 ಹಾಗೂ ಕರ್ನಾಟಕ ಮೋಟರ್ ವಾಹನ ನಿಯಮಗಳು 1989 ರ ನಿಯಮ 221 ಎ (5) ರನ್ವಯ ಪ್ರದತ್ತವಾದ ಅಧಿಕಾರ ಚಲಾಯಿಸಿ ಈ ಕೆಳಗಿನಂತೆ ಮಾರ್ಗ ಬದಲಾವಣೆ ಮಾಡಿ ಆದೇಶಿಸಿದ್ದಾರೆ.
ಮಾ.11 ರಂದು ಮಧ್ಯಾಹ್ನ 02 ಗಂಟೆಯಿ0ದ ಮಾ.12 ರ ಬೆಳಿಗ್ಗೆ 06 ಗಂಟೆಯವರೆಗೆ ಬೆಂಗಳೂರು ಕಡೆಯಿಂದ ಸಿರುಗುಪ್ಪ ಕಡೆಗೆ ಹೋಗುವ ಮತ್ತು ಬರುವ ಮಧ್ಯಮ ಹಾಗೂ ಭಾರಿ ವಾಹನಗಳು ಬೆಂಗಳೂರು ರಸ್ತೆ ಬೈಪಾಸ್ ರೈಲ್ವೇಗೇಟ್, ಹೊಸಪೇಟೆ ರಸ್ತೆ ಬೈಪಾಸ್, ವಿನಾಯಕ ನಗರ, ಸುಧಾ ಕ್ರಾಸ್, ಎಸ್.ಪಿ ಸರ್ಕಲ್ ಮುಖಾಂತರ ಸಂಚರಿಸುವುದು.
ಮಾ.11 ರಂದು ಬೆಳಿಗ್ಗೆ 10 ಗಂಟೆಯಿ0ದ ಮಾ.12 ರಂದು ಬೆಳಿಗ್ಗೆ 06 ಗಂಟೆಯವರೆಗೆ ಸಿರುಗುಪ್ಪ ಕಡೆಯಿಂದ ಮೋಕ ಕಡೆಗೆ ಹೋಗುವ ಮತ್ತು ಬರುವ ದ್ವಿಚಕ್ರ, ತ್ರಿಚಕ್ರ ಹಾಗೂ ಇನ್ನಿತರ ಲಘು ವಾಹನಗಳು ಎಸ್.ಪಿ ಸರ್ಕಲ್, ಮೋತಿ ಸರ್ಕಲ್, ಡಿ.ಸಿ ಸರ್ಕಲ್, ರಾಯಲ್ ಸರ್ಕಲ್, ಇಂದಿರಾ ಸರ್ಕಲ್, ಕೂಲ್ ಕಾರ್ನರ್, ಕೆ.ಇ.ಬಿ ಮುಖಾಂತರ ಸಂಚರಿಸುವುದು.
ಮಾ.11 ರಂದು ಬೆಳಿಗ್ಗೆ 10 ಗಂಟೆಯಿ0ದ ಮಾ.12 ರಂದು ಬೆಳಿಗ್ಗೆ 06 ಗಂಟೆಯವರೆಗೆ ಬೆಂಗಳೂರು ಹಾಗೂ ಹೊಸಪೇಟೆ ಕಡೆಯಿಂದ ಮೋಕ ಕಡೆಗೆ ಹೋಗುವ ಮತ್ತು ಬರುವ ದ್ವಿಚಕ್ರ, ತ್ರಿಚಕ್ರ ಹಾಗೂ ಇನ್ನಿತರ ಲಘು ವಾಹನಗಳು ಮೋತಿ ಸರ್ಕಲ್, ಡಿ.ಸಿ ಸರ್ಕಲ್, ರಾಯಲ್ ಸರ್ಕಲ್, ಇಂದಿರಾ ಸರ್ಕಲ್, ಕೂಲ್ ಕಾರ್ನರ್, ಕೆ.ಇ.ಬಿ ಮುಖಾಂತರ ಸಂಚರಿಸುವುದು.
ಮಾ.11 ರಂದು ಬೆಳಿಗ್ಗೆ 10 ಗಂಟೆಯಿ0ದ ಮಾ.12 ರಂದು ಬೆಳಿಗ್ಗೆ 06 ಗಂಟೆಯವರೆಗೆ ಕಪ್ಪಗಲ್, ತಾಳೂರು ಕಡೆಯಿಂದ ಬಳ್ಳಾರಿ ನಗರದೊಳಗೆ ಹೋಗುವ ಮತ್ತು ಬರುವ ದ್ವಿಚಕ್ರ, ತ್ರಿಚಕ್ರ ಹಾಗೂ ಇನ್ನಿತರ ಲಘು ವಾಹನಗಳು ತಾಳೂರು-ಕಪ್ಪಗಲ್ ರಸ್ತೆಯ ಕಾಲುವೆಯ ಮೇಲೆ ಹವಂಭಾವಿ, ಎಸ್.ಪಿಸರ್ಕಲ್ ಮುಖಾಂತರ ಸಂಚರಿಸುವುದು.
ಮಾ.11 ರಂದು ಬೆಳಿಗ್ಗೆ 10 ಗಂಟೆಯಿ0ದ ಮಾ.12 ರಂದು ಬೆಳಿಗ್ಗೆ 06 ಗಂಟೆಯವರೆಗೆ ಹೊಸಪೇಟೆ, ಸಿರುಗುಪ್ಪ ಹಾಗೂ ಬೆಂಗಳೂರು ಕಡೆಯಿಂದ ಅನಂತಪುರ ಕಡೆಗೆ ಹೋಗುವ ಮತ್ತು ಬರುವ ಮಧ್ಯಮ ಹಾಗೂ ಭಾರಿ ವಾಹನಗಳು ಅನಂತಪರ ಬೈಪಾಸ್, ಇಂದಿರಾ ಸರ್ಕಲ್, ಎಸ್.ಎನ್.ಪೇಟೆ, ಫ್ಲೆöಓವರ್, ಕೆ.ಇ.ಬಿ ಸರ್ಕಲ್ ಮುಖಾಂತರ ಸಂಚರಿಸುವುದು ಎಂದು ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ ಅವರು ಆದೇಶದಲ್ಲಿ ತಿಳಿಸಿದ್ದಾರೆ.