ಬಳ್ಳಾರಿ ಜಿಲ್ಲೆ ಸಿರುಗುಪ್ಪ ತಾಲ್ಲೂಕಿನ ನಾಗರಹಾಳು ಗ್ರಾಮದಲ್ಲಿ ಪವಾಡ ಪುರುಷರಾಗಿ ನೆನೆದವರ ಮನದ ಮನೆಯಲ್ಲಿ ಕಾಮಧೇನುವಾಗಿ ಭಕ್ತರನ್ನು ಉದ್ದರಿಸಿದ ಆಂಧ್ರ ಪ್ರದೇಶದ ಗೆಂಜಳ್ಳಿ ಶ್ರೀ ಶರಣ ಬಡೇ ಸಾಹೇಬ್ ಇವರ ಶಿಷ್ಯರಾಗಿ ಸು ಕ್ಷೇತ್ರ ನಾಗರಹಾಳು ಗ್ರಾಮದಲ್ಲಿ ನೆಲೆಸಿರುವ ಶ್ರೀ ಶರಣ ಶರೀಫ್ ಸರ್ಪಣ್ಣ ತಾತನವರ 43ನೇ ವರ್ಷದ ಉರೂಸ್ ಶರೀಫ್ ಕಾರ್ಯಕ್ರಮದ ಅಂಗವಾಗಿ ಶ್ರೀ ಆಂಜಿನೇಯ ಸ್ವಾಮಿ
ಕೃಪಾಪೋಷಿತ ಕರ್ನಾಟಕ ನಾಟಕ ಮಂಡಳಿ ನಾಗರಹಾಳು ಇವರ ವತಿಯಿಂದ ಪಾಂಡು ವಿಜಯ ಅರ್ಥಾತ್ ಕೀಚಕನ ವಧೆ ಎಂಬ ಸುಂದರ ಕರ್ನಾಟಕ ಬಯಲಾಟ ನಾಟಕವನ್ನು ವಿವಿಧ ಗ್ರಾಮಗಳಿಂದ ಆಗಮಿಸಿದ ಪಾತ್ರಧಾರೀಗಳಿಂದ ಎತ್ತುಗಳ ಪೀರಣ್ಣ ಇವರ ಸಾರತ್ಯ ದಲ್ಲಿ ಕಲಾವಿಧರು ಕಲಾಭಿಮಾನಿ ಪ್ರೇಕ್ಷಕ ಬಳಗದ ಸಮ್ಮುಖದಲ್ಲಿ ಸುಂದರವಾಗಿ ಅಭಿ ನಯಿಸಿದರು, ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ವೇ, ನಾ, ಮ, ಬಸವರಾಜಯ್ಯ ಸ್ವಾಮಿಗಳು ಬೃಹನ್ಮಠ ನಾಗರಹಾಳು ಇವರು ವಹಿಸಿದ್ದರು, ಮತ್ತು ಈ ಕಾರ್ಯಕ್ರಮವನ್ನು ಶಾಸಕ ಬಿ ಎಂ ನಾಗರಾಜ ಇವರ ಅನುಪಸ್ಥಿತಿಯಲ್ಲಿ ಗ್ರಾಮದ ಹಿರಿಯರು ನಾಮ ವಾಮದೇವಯ್ಯ ಸ್ವಾಮಿಗಳು ಉದ್ಘಾಟಿಸಿದರು, ಈ ಕಾರ್ಯಕ್ರಮದ ವೇದಿಕೆಯಲ್ಲಿ ಮುಖ್ಯ ಅತಿಥಿ ಎಂ ಎಸ್ ಸೋಮಲಿಂಗಪ್ಪ ಮಾಜಿ ಶಾಸಕರ ಅನುಪ ಸ್ಥಿತಿಯಲ್ಲಿ ನಾಗರಹಾಳು ಗ್ರಾಮದ ಗುರು ಹಿರಿಯರು ಯುವಕರು ಪಿ ಹುಸೇನಪ್ಪ ನಾಯಕ, ಸಿ ಗಿರೀಶ್ ಗೌಡ, ಎ ಶೇಷಾದ್ರಿ, ಸಿ ಚನ್ನಾರೆಡ್ಡಿ, ಎಸ್, ಜಿ, ಸಿದ್ದರಾಮ ಸಾಹುಕಾರ, ಪಿ ಬಡೆಸಾಬ್, ಸಿ ಹೆಚ್ ಕೇಶಪ್ಪ ನಾಯಕ, ಪಿ ಚಿದಾನಂದಪ್ಪ ನಾಯಕ, ಕಡತಟ್ಲ ಪಿ ಹೊನ್ನೂರುಸಾಬ್, ಆಟೋ ಹೊನ್ನೂರುಸಾಬ್, ಹೊಟ್ಟೆ ಹೊನ್ನೂರುಸಾಬ್ ಗ್ರಾಮ ಪಂಚಾಯತಿಯ ಅಧ್ಯಕ್ಷರು ಲಕ್ಷ್ಮಿ ದಾಸಪ್ಪ ಮತ್ತು ಹಾಲಿ ಹಾಗೂ ಮಾಜಿ ಸದಸ್ಯರು ಈ ಕಾರ್ಯಕ್ರಮದ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಈ ಕಾರ್ಯಕ್ರಮದ ಉಪನ್ಯಾಸಕರಾಗಿ ಎಂ ಡಿ ಶೇಕ್ಷಾವಲಿ ಪತ್ರಕರ್ತರು ಇವರು ಭಾಗವಹಿಸಿದ್ದರು .