ಧಾರವಾಡ ಮಾ.13: ಹುಬ್ಬಳ್ಳಿಯ ಕೆಶ್ವಾಪೂರದ ನಿವಾಸಿಯಾದ ಮೇಘಾ ದೇಶಪಾಂಡೆಯವರು ಎದುರುದಾರ ಓಲಾ ಎಲೆಕ್ಟ್ರಿಕ್ ಕಂಪನಿಂಸುವರ ಸ್ಕೂಟರ್ನ್ನು ರೂ.1,62,010 ಪಾವತಿಸಿ ಖರೀದಿಸಿದ್ದರು. ಖರೀದಿಸಿದ ಮರು ದಿನವೇ ಅವರ ಸ್ಕೂಟರ ಮೇಲೆ ಕೆಲವೊಂದು ಮಾರ್ಕಗಳು ಮೂಡಿದ್ದವು ಅದನ್ನು ಎದುರುದಾರರಿಗೆ ತಿಳಿಸಿದಾಗ ಅವರು ಅದನ್ನು ಸರಿಪಡಿಸುವುದಾಗಿ ಹೇಳಿದರೂ ಅದನ್ನು ಸರಿಪಡಿಸಿ ಕೊಟ್ಟಿರಲಿಲ್ಲ. ಅಲ್ಲದೇ ವಾಹನ ಕೇಲವ 20-30 ಕಿ.ಮಿ. ನಂತರ ನಡು ರಸ್ತೆಯಲ್ಲಿ ಬಂದ್ ಬಿಳ್ಳುತ್ತಿತ್ತು ಮತ್ತು ವಾಹನದ ಆಯಿಲ್ ಸೋರುವಿಕೆಯೂ ಕಂಡು ಬಂದಿತು. ಈ ವಿಷಯವನ್ನು ಎದುರುದಾರರಿಗೆ ತಿಳಿಸಿದಾಗ ಅವರು ಅದರ ಸ್ಟಾಕ್ ಇರುವುದಿಲ್ಲ ಅಂತಾ ತಿಳಿಸಿರುತ್ತಾರೆ. ಜೂನ್ 2024 ರಲ್ಲಿ ವಾಹನವೂ ಪೂರ್ತಿಯಾಗಿ ಉಪಯೊಗಿಸಲು ಬಾರದೇ ಇದ್ದ ಕಾರಣ ಎದುರುದಾರರಿಗೆ ಸಾಕಷ್ಟು ಸಲ ವಿನಂತಿಸಿದರೂ ಅದನ್ನು ಸರಿಪಡಿಸಿರುವುದಿಲ್ಲ. ಅಂತಹ ಎದುರುದಾರರ ನಡಾವಳಿಕೆ ಗ್ರಾಹಕರ ರಕ್ಷಣಾ ಕಾಯದೆ ಅಡಿ ಸೇವಾ ನ್ಯೂನ್ಯತೆ ಆಗುತ್ತದೆ ಅಂತಾ ಹೇಳಿ ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ದೂರುದಾರರು ಧಾರವಾಡ ಜಿಲ್ಲಾ ಗ್ರಾಹಕರ ಆಯೋಗಕ್ಕೆ ದಿ: 31/08/2024 ರಂದು ದೂರನ್ನು ಸಲ್ಲಿಸಿದ್ದರು.
ಸದರಿ ದೂರಿನ ಬಗ್ಗೆ ಕೂಲಂಕುಷವಾಗಿ ವಿಚಾರಣೆ ನಡೆಸಿದ ಆಯೋಗದ ಅಧ್ಯಕ್ಷರಾದ ಈಶಪ್ಪ. ಭೂತೆ ಹಾಗೂ ವಿಶಾಲಾಕ್ಷಿ. ಅ. ಬೋಳಶೆಟ್ಟಿ ಸದಸ್ಯರು, ದೂರುದಾರರುರೂ. 1 ಲಕ್ಷಕ್ಕಿಂತ ಹೆಚ್ಚು ಹಣ ವಿನಿಯೋಗಿಸಿ ತಮ್ಮ ಕೆಲಸಕ್ಕೆ ಅನುಕೂಲವಾಗಲಿ ಅಂತಾ ಎದುರುದಾರ ಓಲಾ ಕಂಪನಿಯಿಂದ ಸ್ಕೂಟರ್ ಖರೀದಿಸಿದ್ದರು. ಆದರೆ ವಾಹನ ಖರೀದಿಸಿದ ಕೆಲವೇ ದಿನಗಳಲ್ಲಿ ರಸ್ತೆಯಲ್ಲಿ ಹೋಗುವಾಗ ತಕ್ಷಣವೇ ನಿಲ್ಲುವುದು ಮತ್ತು ಆಯಿಲ್ ಸೋರುವಿಕೆ ಸಮಸ್ಯೆ ತಂದೊಡ್ಡಿತ್ತು. ವಾಹನ ಖರೀದಿಸಿದ ಮರು ದಿನವೇ ಆ ರೀತಿ ಆಗುವುದು ಸರಿಯಾದ ಕ್ರಮ ಅಲ್ಲ. ಎದುರುದಾರ ಓಲಾ ಎಲೆಕ್ಟ್ರಿಕ್ ಕಂಪನಿ ಮತ್ತು ಅವರ ಸರ್ವಿಸ್ ಸ್ಟೇಷನಗೆ ಹಾಗೂ ಅವರ ಗ್ರಾಹಕರ ಸಹಾಯವಾಣಿಗೆ ದೂರು ಕೊಟ್ಟರೂ ವಾಹನ ದುರಸ್ತಿಗೆ ಅವರು ಯಾವುದೇ ಕ್ರಮ ಕೈಗೊಳ್ಳಲಿಲ್ಲ. ಇಂತಹ ಎದುರುದಾರ ನಡಾವಳಿಕೆ ಗ್ರಾಹಕರಾದ ದೂರುದಾರರಿಗೆ ಸೇವಾ ನ್ಯೂನ್ಯತೆ ಎಸಗುವುದರೊಂದಿಗೆ ಅನುಚಿತ ವ್ಯಾಪಾರ ಪದ್ಧತಿ ಮಾಡಿದ್ದಾರೆಂದು ಆಯೋಗ ಎದುರುದಾರ ವಿರುದ್ಧ ಅಭಿಪ್ರಾಯಪಟ್ಟು ತೀರ್ಪು ನೀಡಿದೆ.
ಎಲೆಕ್ಟ್ರಿಕ್ ಓಲಾ ಕಂಪನಿಯ ಉತ್ಪಾದನೆಯ ಸ್ಕೂಟರಗಳು ಇಂತಹದೇ ಸಮಸ್ಯೆಯಿಂದ ಗ್ರಾಹಕರಿಗೆ ತೊಂದರೆ ಆದ ಬಗ್ಗೆ ಕೇಂದ್ರ ಗ್ರಾಹಕರ ಸಂರಕ್ಷಣಾ ಪ್ರಾಧಿಕಾರ ಹಾಗೂ ಮಾನ್ಯ ಉಚ್ಚ ನ್ಯಾಯಾಲಯದಲ್ಲಿ ಪ್ರಕರಣಗಳು, ದೂರುಗಳು ದಾಖಲಾಗಿ ಎಲೆಕ್ಟ್ರಿಕ್ ಓಲಾ ಕಂಪನಿಯ ಉತ್ಪಾದನಾ ಗುಣಮಟ್ಟದ ಬಗ್ಗೆ ಗ್ರಾಹಕರಿಗೆ ತೊಂದರೆಯಾಗದಂತೆ ಎಚ್ಚರಿಕೆ ವಹಿಸಲು ನಿರ್ದೇಶನ ಕೊಟ್ಟಿದ್ದರು. ಈ ಎಲ್ಲ ಸಂಗತಿಗಳನ್ನು ಆಧರಿಸಿ ಎದುರುದಾರ ಎಲೆಕ್ಟ್ರಿಕ್ ಓಲಾ ಕಂಪನಿ ಆಯಾದೂರುದಾರರಿಗೆ ಅವರು ಸಂದಾಯ ಮಾಡಿದ ವಾಹನದ ಮೌಲ್ಯ, ಹಣವನ್ನು ಶೆ.8 ರಂತೆ ಬಡ್ಡಿ ಸಮೇತ ಹಿಂದಿರುಗಿಸುವಂತೆ ಆದೇಶಿಸಿದೆ. ದೂರುದಾರರಿಗೆ ಆಗಿರುವ ಅನಾನುಕೂಲ, ತೊಂದರೆ ಹಾಗೂ ಮಾನಸಿಕ ಹಿಂಸೆಗಾಗಿ ರೂ.50,000 ಪರಿಹಾರ ಮತ್ತು ರೂ.10,000 ಪ್ರಕರಣದ ಖರ್ಚು ವೆಚ್ಚ ನೀಡುವಂತೆ ಆಯೋಗ ಎಲೆಕ್ಟ್ರಿಕ್ ಓಲಾ ಕಂಪನಿಗೆ ಆಯೋಗ ನಿರ್ದೇಶಿಸಿದೆ.