Ad image

ನಾ ಕಂಡ ಕಾಶಿ..!!

Vijayanagara Vani
ನಾ ಕಂಡ ಕಾಶಿ..!!

ಅದೊಂದು ನಂಬಿಕೆ ಹಿಂದುಗಳಲ್ಲಿ ಈಗಲೂ ಇದೆ. ಸಂಪೂರ್ಣ ಜೀವಮಾನದಲ್ಲಿ ಒಂದೇ ಒಂದು ಸಾರಿಯಾದರೂ ಕಾಶಿಯನ್ನು ನೋಡಬೇಕೆನ್ನುವುದು. ಅತ್ಯಂತ ಕಿರಿಯ ವಯಸ್ಸಿನಲ್ಲಿ ಸಿಕ್ಕ ಈ ಅವಕಾಶ ನನಗೆ ಪುಣ್ಯವೇ ಸರಿ. ಅಚ್ಚರಿಗಳು ಮತ್ತು ಆಧ್ಯಾತ್ಮಿಕತೆಯ ಹೊಂದಿದ ಕಾಶಿನಗರ ಸುಮಾರು ಮೂರುವರೆ ಸಾವಿರ ವರ್ಷಗಳ ಲಿಖಿತ ಇತಿಹಾಸವಿರುವ ಏಕ ಮಾತ್ರ ಪಟ್ಟಣವಾಗಿದೆ. ಸ್ಕಂದ ಉಪನಿಷತ್ ಹಾಗೂ ತಮಿಳಿನಾ ತೇವಂನಲ್ಲಿ ಉಲ್ಲೇಖವಿರುವ ಸ್ಥಳವಿದು.ಕಾಶಿ,ಬನಾರಸ್, ವಾರಣಾಸಿವೆಂಬ ವಿವಿಧ ಹೆಸರುಗಳಲ್ಲಿ ಕರೆಯುತ್ತಾರೆ.

12 ಜ್ಯೋತಿರ್ಲಿಂಗಗಳ ಪೈಕಿ ಒಂದಾದ ಕಾಶಿ ವಿಶ್ವನಾಥ ದೇವಾಲಯ ಮೊಘಲ್ ದೊರೆ ಔರಂಗಜೇಬ್ ದ್ವಂಸ ಮಾಡಿಸಿದ, ನಂತರ ಮರಾಠಾರಾಣಿ ಅಹಲ್ಯಾಬಾಯಿ ಹೋಲ್ಕರ್ ಸಮೀಪದಲ್ಲಿ ಇದನ್ನು ಪುನಃನಿರ್ಮಿಸಿದಳು. ಮೂಲ ದೇವಸ್ಥಾನ ಅವಶೇಷಗಳ ಮೇಲೆ ಗ್ಯಾನವಾಪಿ ಮಸೀದಿಯನ್ನು ಈಗಲೂ ನೋಡಬಹುದು.
ಗಂಗಾ ನದಿಯಲ್ಲಿ ಒಟ್ಟು 84 ಘಾಟ್ ಗಳಿವೆ ಅದರ ಪೈಕಿ ಮಣಿ ಕಾರ್ಮಿಕ ಮತ್ತು ಹರಿಶ್ಚಂದ್ರ ಘಾಟ್ ಗಳು ದಹನಕ್ಕೆ ಬಳಸಲಾಗುತ್ತಿದೆ. ಮಿಕ್ಕ ಘಾಟ್ ಳಲ್ಲಿ ಕೇವಲ ಸ್ಥಾನ ಮತ್ತು ಧಾರ್ಮಿಕ ಕಾರ್ಯಗಳಿಗೆ ಬಳಸುತ್ತಿದ್ದಾರೆ.
ಗಂಗಾಸ್ನಾನ ತುಂಗಾಪಾನವೆನ್ನುವ ಆಡು ಭಾಷೆಯ ಧಾರ್ಮಿಕ ಚಿಂತನೆಗಳಲ್ಲಿ ಪಾಪಗಳನ್ನು ತೊಳೆಯಲು ಗಂಗಾ ಮತ್ತು ಸ್ವಚ್ಛ ಸಿಹಿ ನೀರನ್ನು ಸವಿಯಲು ತುಂಗಾ ಎನ್ನುವ ನನ್ನುಡಿವಿದೆ.ದಶಾಶ್ವಮೇಧ ಘಾಟ್ನಲ್ಲಿ ಪ್ರತಿದಿನ ಸಂಜೆ ಸುಮಾರು ಆರು ಮೂವತ್ತಕ್ಕೆ ನಡೆಯುವ ಗಂಗಾ ಆರತಿ ನೋಡಲು ಮನಮೋಹಕ.
ಗಂಗಾ ನದಿಯ ದಡಗಳ ಮೇಲೆ ಮಿಂತ ಸಾಧು,ಸಂತರು ಮತ್ತು ಅಘೋರಿಗಳ ವೇಷಭೂಷಣಗಳು ಅವರು ನೋಡುವ ವಿಧಾನ ಎಂತವರಲ್ಲೂ ಭಯ ಹುಟ್ಟಿಸುತ್ತದೆ. ಮಣಿಕರ್ಣಿಕ ಘಾಟ್ನಲ್ಲಿ ನಿಂತು ಬಿಡದೆ ಕೇಳುವ ಶಬ್ದವೆಂದರೆ “ರಾಮ್ ನಾಮ್ ಸತ್ಯಹೇ”,” ರಾಮ್ ನಾಮ್ ಸತ್ಯಹೇ”, ಒಂದರ ಮೇಲೊಂದು ದಹನಕ್ಕೆ ಬರುವ ದೇಹಗಳು ಕಣ್ಣ ಮುಂದೆ ಸುಟ್ಟು ಬಸ್ಮವಾಗುತ್ತಿರುತ್ತವೆ.ಇದರ ಅರ್ಥ ಮನುಷ್ಯನು ಎಷ್ಟೇ ಆಸ್ತಿ ,ಅಂತಸ್ತು,ಪದವಿಗಳು ಪಡೆದರು ಅಂತ್ಯದಲ್ಲಿ ಬರಿ “ಶೂನ್ಯ” ವೆಂದು ಸೂಚಿಸುವ ಸ್ಥಳವದು ಮತ್ತು ಕೆಲವರಿಗೆ ಸತ್ಯ,ಶಾಂತಿ ಮತ್ತು ವೈರಾಗ್ಯ ಹೊಂದುವ ಮಾರ್ಗವಾಗಲು ಬಹುದು.

“ಜೀವನದ ಕೊನೆ ಕ್ಷಣದಲ್ಲಿ ಕಾಶಿಯಾತ್ರೆ ಮಾಡಿ ಎನ್ನುವ ಯೋಚನೆಯನ್ನು ಬದಿಗಿಟ್ಟು ಒಮ್ಮೆ ಕಾಶಿಯನ್ನು ವೀಕ್ಷಿಸಿ”.

ಲೇಖಕರು
ಜಯಪ್ರಕಾಶ್ ನಾರಾಯಣ್.ಪಿ.ಎಸ್.

Share This Article
error: Content is protected !!
";