ಸಿರುಗುಪ್ಪ. ಮೇ-15: ತಾಲೂಕಿನ ಇಬ್ರಾಂಪುರದಿಂದ ಕರ್ಚಿಗನೂರಿಗೆ ತೆರಳುವ ಮಾರ್ಗದ ಬಳಿಯ ಇಬ್ರಾಂಪುರ ಗ್ರಾಮದ ರೈತರಿಗೆ ಸೇರಿದ ಕೃಷಿ ಹೊಂಡದಲ್ಲಿ 13ವರ್ಷದ ಬಾಲಕ ವೀರೇಶ ನೀರು ಕುಡಿಯಲು ಹೋದಾಗ ಆಯತಪ್ಪಿ ಜಾರಿಬಿದ್ದು ಮೃತ ಪಟ್ಟಿರುವ ದಾರುಣ ಘಟನೆ ನಡೆದಿದೆ.
ಪಕ್ಕದ ಹೊಲಗಳಲ್ಲಿ ಕುರಿಮೇಯಿಸುತ್ತಿದ್ದ ಇತರೆ ಕುರಿಗಾಹಿಗಳು ನೋಡಿ ಪೊಲೀಸ್ ಮತ್ತು ಅಗ್ನಿಶಾಮಕ ದಳದವರಿಗೆ ವಿಷಯ ತಿಳಿಸಿದ್ದಾರೆ.
ಅಗ್ನಿಶಾಮಕ ಠಾಣಾಧಿಕಾರಿ ಮಜರ್ ಹಾಸನ್ ನೇತೃತ್ವದಲ್ಲಿ
ಸಿಬ್ಬಂದಿಗಳಾದ ಶಂಭುಲಿಂಗ ಹೊಂಬಾಳ,
ಸುಧೀರ್ ಕುಮಾರ್ ,ಮುರುಳಿಧರ ಎಸ್ ಕೆ ,ಮಂಜುನಾಥ ಕುರಿ
ಸಚಿನ್ ಕುಮಾರ್ ನೀರಿಗೆ ಇಳಿದು ಮೃತ ದೇಹವನ್ನು ಹೊರಕ್ಕೆ ತಂದಿದ್ದಾರೆ
ಈ ಸಂಭಂಧವಾಗಿ ಸಿರುಗುಪ್ಪ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.