ಗಣೇಶೋತ್ಸವ ವಿಸರ್ಜನಾ ಮೆರವಣಿಗೆಯಲ್ಲಿ ವ್ಯಕ್ತಿಗಳಿಬ್ಬರ ಮೇಲೆ ಹಲ್ಲೆ ಪ್ರಕರಣ ದಾಖಲು

Vijayanagara Vani

ವಿಜಯನಗರ ವಾಣಿ ಸುದ್ದಿ
ಕೊಟ್ಟೂರು ಪಟ್ಟಣದಲ್ಲಿ ತಡರಾತ್ರಿ ಗಣೇಶೋತ್ಸವ ವಿಸರ್ಜನಾ ಮೆರವಣಿಗೆ ಸಾಗುವ ವೇಳೆ ವ್ಯಕ್ತಿಗಳಿಬ್ಬರ ಮೇಲೆ ಹಲ್ಲೆಯತ್ನ ನಡೆದ ಘಟನೆ ಜರುಗಿದೆ. ಹಲ್ಲೆ ಯತ್ನಕ್ಕೆ ಒಳಗಾದವರಾದ ಎನ್ ಬಸವರಾಜ್ ಹಾಗೂ ಉಲ್ಲಾಸ್ ನೀಡಿದ ದೂರಿನಲ್ಲಿ ಇಲ್ಲಿನ ಯುವ ಭಾರತಿ ವೇದಿಕೆಯಿಂದ ಪ್ರತಿಷ್ಠಾಪಿಸಲಾಗಿರುವ ಗಣೇಶ ಮೂರ್ತಿಯ ವಿಸರ್ಜನಾ ಮೆರವಣಿಗೆ ಸಾಗುವ ವೇಳೆಯಲ್ಲಿ ಭಾಷಾ ಎಂಬುವನು ಪಟ್ಟಣದ ಕಾರ್ಪೊರೇಷನ್ ಬ್ಯಾಂಕ್ ಹತ್ತಿರ ಅವಾಚ್ಯ ಶಬ್ದಗಳಿಂದ ನಮ್ಮನ್ನು ನಿಂದಿಸಿ ಏಕಾಏಕಿ ಬಂದು ತಲವಾರನ್ನು ತೆಗೆದು ಕುತ್ತಿಗೆಗೆ ಬೀಸಿದ್ದು ಅದೃಷ್ಟವಶಾತ್ ಪ್ರಾಣಪಾಯದಿಂದ ಪಾರಾಗಿದ್ದು, ನಮ್ಮನ್ನು ಹಳೇ ದ್ವೇಷದ ಹಿನ್ನೆಲೆ ಕೊಲೆ ಮಾಡುವ ಉದ್ದೇಶದಿಂದ ಹಲ್ಲೆ ನಡೆಸಿದ್ದಾನೆ ಎಂದು ದೂರು ದಾಖಲಿಸಿ ಕಾನೂನು ಪ್ರಕಾರ ಆರೋಪಿತನ ಮೇಲೆ ಕ್ರಮ ಜರುಗಿಸಲು ದೂರಿನಲ್ಲಿ ದಾಖಲಾಗಿದೆ. ಠಾಣಾ ಇನ್ಸಪೆಕ್ಟರ್ ಗೀತಾಂಜಲಿ ಶಿಂದೆ ಪ್ರಕರಣ ದಾಖಲಿಸಿ ಆರೋಪಿಯನ್ನು ವಶಕ್ಕೆ ಪಡೆದು ತನಿಖೆ ಕೈಗೊಂಡಿದ್ದಾರೆ.

- Advertisement -
Ad imageAd image
Share This Article
error: Content is protected !!
";