ಬಳ್ಳಾರಿ.ಜು 16: ಹೈದರಾಬಾದ್ ಕರ್ನಾಟಕ ಪ್ರದೇಶದಲ್ಲಿ ಅತ್ಯಂತ ಹಿಂದುಳಿದ ಪ್ರದೇಶವಾದ ರಾಯಚೂರು ಜಿಲ್ಲೆಯಲ್ಲಿ ಯಾವೊಂದು ಅತ್ಯಾಧುನಿಕವಾದ ಸೌಲಭ್ಯಗಳಿರುವುದಿಲ್ಲ ಇದನ್ನ ಅರಿತ ಅಲ್ಲಿನ ಹೋರಾಟಗಾರರು ರಾಯಚೂರಿನಲ್ಲಿ ಐಐಟಿ ಸ್ಥಾಪಿಸುವಂತೆ ಅಂದು ಹೋರಾಟ ಮಾಡಿದ್ದರು.
ಆಗ ಮುಖ್ಯಮಂತ್ರಿಗಳಾಗಿದ್ದ ಜಗದೀಶ್ ಶೆಟ್ಟರ್ ಅವರು 18 ಅಕ್ಟೋಬರ್ 2012 ರಲ್ಲಿ ರಾಯಚೂರಿನಲ್ಲಿ ಐಟಿಯನ್ನು ಸ್ಥಾಪಿಸಬೇಕೆಂದು ಕೇಂದ್ರ ಸರ್ಕಾರಕ್ಕೆ ಶಿಫಾರಸು ಪತ್ರ ಬರೆದು ಒತ್ತಾಯ ಮಾಡಿದ್ದರು. ಆದರೆ ನಂತರ ಬಂದ ಕಾಂಗ್ರೆಸ್ ಸರ್ಕಾರದ ಮುಖ್ಯಮಂತ್ರಿ ಆದ ಸಿದ್ದರಾಮಯ್ಯನವರು ಮರು ಪತ್ರವನ್ನು ಬರೆದು ರಾಜ್ಯದ ಧಾರವಾಡ ಮೈಸೂರು ಅಥವಾ ರಾಯಚೂರಿನಲ್ಲಿ ಐಐಟಿಯನ್ನು ಸ್ಥಾಪಿಸಿ ಎಂದು ಮೂರು ಜಿಲ್ಲೆಗಳ ಹೆಸರುಗಳನ್ನು ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಿದ್ದರು. ಇದರ ಸಂಪೂರ್ಣ ಲಾಭವನ್ನು ಪಡೆದ ಧಾರವಾಡದ ಕೇಂದ್ರ ರಾಜಕಾರಣಿಗಳು ಐಐಟಿಯನ್ನು ಧಾರವಾಡದಲ್ಲಿ ಸ್ಥಾಪಿಸುವಂತೆ ಲಾಬಿ ನಡೆಸಿ ಶಶಿಯಾದರು.
ನಂತರ 2020ರಲ್ಲಿ ಮತ್ತೆ ರಾಯಚೂರು ಜಿಲ್ಲೆ ಮುನ್ನೆಲೆಗೆ ಬಂದು ಅದೇ ಜಿಲ್ಲೆಯಲ್ಲಿ ಕೇಂದ್ರ ಸರ್ಕಾರ ಸ್ವಾಮ್ಯದ ಏಮ್ಸ್ (ಆಲ್ ಇಂಡಿಯನ್ ಮೆಡಿಕಲ್ ಸೈನ್ಸ್) ಆಸ್ಪತ್ರೆಯನ್ನು ರಾಯಚೂರಿನಲ್ಲಿ ಸ್ಥಾಪಿಸಬೇಕೆಂದು ಕೇಂದ್ರ ಸರ್ಕಾರ ನಿರ್ಧಾರ ಮಾಡಿತು. ಆದರೆ ಘೋಷಣೆ ಮಾಡಿ ಇಂದಿಗೆ ಮೂರು ನಾಲ್ಕು ವರ್ಷ ಕಳೆದರೂ ಏಮ್ಸ್ ಆಸ್ಪತ್ರೆಯನ್ನು ಆರಂಭಿಸಿರುವುದಿಲ್ಲ, ಏನ್ ಸ್ಥಾಪನೆಗಾಗಿ ಸತತವಾಗಿ ಕಳೆದ ಏಳುನೂರು ದಿನಗಳಿಂದ ಹೋರಾಟ ಮಾಡುತ್ತಿರುವ ಏಮ್ಸ್ ಹೋರಾಟ ಸಮಿತಿಯ ಆಶಯ ಇಂದಿಗೂ ಕೈಗೂಡಿರುವುದಿಲ್ಲ. ಕಾರಣ ಕೇಂದ್ರ ಸರ್ಕಾರವು ಯಾವುದೇ ಲಾಬಿಗೆ ಮಣಿಯದ
ಏಮ್ಸ್ ಆಸ್ಪತ್ರೆಯನ್ನು ರಾಯಚೂರು ಜಿಲ್ಲೆಯಲ್ಲಿ ಸ್ಥಾಪಿಸಬೇಕೆಂದು ಪ್ರಗತಿಪರ ಸಂಘಟನೆಯ ಒಕ್ಕೂಟದ ಎಸ್ ಪನ್ನರಾಜ ಪ್ರಧಾನಿಯನ್ನು ಒತ್ತಾಯಿಸಿ ಇಂದು ಜಿಲ್ಲಾಧಿಕಾರಿಗಳ ಮೂಲಕ ಮನವಿ ಪತ್ರವನ್ನು ಸಲ್ಲಿಸಿದರು.
ಕೇಂದ್ರ ಸರ್ಕಾರ ಪ್ರಾದೇಶಿಕವಾರು ಅಸಮಾನತೆಯನ್ನು ತೊಡೆದು ಹಾಕಲು ಮತ್ತು ಅತ್ಯಂತ ಹಿಂದುಳಿದ ಜಿಲ್ಲೆಯಾದ ರಾಯಚೂರಿನಲ್ಲಿ ಏಮ್ಸ್ ಆಸ್ಪತ್ರೆ ಸ್ಥಾಪಿಸಿದಲ್ಲಿ ಅಲ್ಲಿನ ಜನಗಳ ದಶಕಗಳ ಕನಸು ಈಡೇರಲಿದೆ ಮತ್ತು ಅತ್ಯಾಧುನಿಕ ಚಿಕಿತ್ಸಾ ಸೌಲಭ್ಯಗಳಿಗೆ ದೂರದ ಬೆಂಗಳೂರು ಮತ್ತು ಹೈದರಾಬಾದ್ ಗೆ ಹೋಗುವುದು ತಪ್ಪುತ್ತದೆ ಕಾರಣ ತಪ್ಪದೆ ಅತ್ಯಂತ ಶೀಘ್ರಗತಿಯಲ್ಲಿ ಆಸ್ಪತ್ರೆ ಸ್ಥಾಪಿಸಲು ಮುಂದಾಗಬೇಕೆಂದು ಪ್ರಧಾನಮಂತ್ರಿಯನ್ನು ಒತ್ತಾಯಿಸಿದರು.
ಅದೇ ರೀತಿಯಾಗಿ ಆರ್ಟಿಕಲ್ 371 ಜೆ ಬಗ್ಗೆ ಗೊಂದಲಗಳನ್ನು ಸೃಷ್ಟಿಸುತ್ತಿರುವ ಸಂಘಟನೆಗಳ ಬಗ್ಗೆ ಕ್ರಮ ಕೈಗೊಳ್ಳಬೇಕೆಂದು ಈ ಸಂದರ್ಭದಲ್ಲಿ ಅಧಿಕಾರಿಗಳಲ್ಲಿ ಅಗ್ರಹಿಸಿದರು
ಈ ಸಂದರ್ಭದಲ್ಲಿ ಕಲ್ಯಾಣ ಕರ್ನಾಟಕದ ಹೋರಾಟ ಸಮಿತಿಯ ಜಿಲ್ಲಾಧ್ಯಕ್ಷರಾದ ಸಿರಿಗೇರಿ ಪನ್ನರಾಜ್ ಸಂಗನಕಲ್ಲು ಹೇಮಂತ್ ರಾಜ್ , ವಿಜಯಕುಮಾರ್, ಆಮ್ ಆದ್ಮಿ ಪಕ್ಷದ ಜಿಲ್ಲಾಧ್ಯಕ್ಷರಾದ ಜೆ.ವಿ. ಮಂಜುನಾಥ್, ಮೀನಳ್ಳಿ ಚಂದ್ರಶೇಖರ್, ಪದ್ಮಾವತಿ, ಕಪ್ಪಗಲ್ ಓಂಕಾರಪ್ಪ, ಜೋಗಿನ್ ವಿಜಯ್, ದಿವಾಕರ್, ಮೆಡಿಕಲ್ ಸ್ಟೋರ್ ಪ್ರಕಾಶ್ ಶರಣಯ್ಯ ಸ್ವಾಮಿ, ಹೋರಾಟಗಾರರಾದ ಕರ್ನಾಟಕ ಯುವಕಸಂಘದ ಜಿ ಬಸವರಾಜ್, ಶಿವರಾಜ್, ಮಲ್ಲಿಕಾರ್ಜುನ್ ,ವೀರೇಶ್, ಲೆಕ್ಕಪರಿಶೋಧಕರಾದ, ವೆಂಕಟನಾರಾಯಣ ಬಳ್ಳಾರಿ ಶಾಖೆ ಅಧ್ಯಕ್ಷ, ವಿಶ್ವನಾಥ್ ಆಚಾರ್ಯ, ವೆಂಕಟೇಶ್ ಗುಂಡ, ಜಿತೇಂದ್ರ ಸುತಾರ್, ಕೆ ಆರ್ ಎಸ್ ಪಕ್ಷದ ಜಿಲ್ಲಾಧ್ಯಕ್ಷರಾದ ಅಲ್ಲಿಪುರ ಶ್ರೀನಿವಾಸ ರೆಡ್ಡಿ, ನಾಗೇಂದ್ರ, ಹಾಗೂ ಬಳ್ಳಾರಿಯ ಆರ್ ವೈ ಎಂ ಸಿ ಕಾಲೇಜು ವಿದ್ಯಾರ್ಥಿಗಳು, ಸರಳಾದೇವಿ ಕಾಲೇಜಿನ ವಿದ್ಯಾರ್ಥಿ ಗಳು, ಶ್ರೀ ಚೈತನ್ಯ ಕಾಲೇಜಿನ ಪದವಿಪೂರ್ವ ಮತ್ತು ಪದವಿ ವಿದ್ಯಾರ್ಥಿಗಳು, ಶ್ರೀ ಮೇಧ ಕಾಲೇಜಿನ ವಿದ್ಯಾರ್ಥಿಗಳು, ಹಾಗೂ 3,000ಕ್ಕೂ ಹೆಚ್ಚಿನ ವಿದ್ಯಾರ್ಥಿಗಳು ಮತ್ತು ಹೋರಾಟಗಾರರು ಪಾಲ್ಗೊಂಡಿದ್ದರು.