Ad image

ಸರ್ವಜನಾಂಗದ ಶಾಂತಿಯ ತೋಟ

Vijayanagara Vani
ಸರ್ವಜನಾಂಗದ ಶಾಂತಿಯ ತೋಟ

ಭಾರತ ಸರ್ವಜನಾಂಗದ ಶಾಂತಿಯ ತೋಟ
ಸರ್ವಧರ್ಮಗಳ ಸಮನ್ವಯದ ಸ್ನೇಹದ ಕೂಟ;
ಜಾತಿ ಧರ್ಮಗಳು ಹಲವಿದ್ದರೂ ಭಾವೈಕ್ಯತೆಯೊಂದೆ
ಭಾಷೆಗಳು ಬೇರೆಯಾದರು ನುಡಿವ ನಾಲಿಗೆಯೊಂದೆ..!!

ಹಿಂದೂ ಮುಸ್ಲಿಂ ಕ್ರೈಸ್ತ ಬೌದ್ದರೆಲ್ಲರೂ ಒಂದೇ
ರಾಮಾಯಣ ಮಹಾಭಾರತ ಕುರಾನ್ ಮಂತ್ರವೊಂದೆ;
ಹುತ್ತಿ ಬಿತ್ತುವ ಬೆಳೆಗೆ ಮಳೆಯ ಹನಿಯೊಂದೆ
ಹಗಲು ರಾತ್ರಿ ಬೆಳಕು ನೀಡೋ ಸೂರ್ಯಚಂದ್ರರೊಂದೆ…!!

ಉಸಿರಾಡುವ ಗಾಳಿ ತಿನ್ನುವ ಅನ್ನವೊಂದೆ
ಮಡಿಮೈಲಿಗೆಯಾದರೆ ಸ್ವಚ್ಛಗೊಳಿಸೋ ಗಂಗೆಯೊಂದೆ;
ಸ್ನೇಹ ಪ್ರೀತಿಯ ಬೆಸೆಯುವ ಮನದ ಭಾವವೊಂದೆ
ಕಷ್ಟಕಾಲದಿ ಸಹಾಯಹಸ್ತ ಚಾಚುವ ಭಾರತ ನಾಡೊಂದೆ…!!

ಸರ್ವ ಜನರಿಗೂ ನ್ಯಾಯ ನೀಡುವ ಸಂವಿಧಾನವೊಂದೆ
ಭಾರತಾಂಬೆಗೆ ಕೀರಿಟಪ್ರಾಯ ತ್ರಿವರ್ಣ ಧ್ವಜವೊಂದೆ;
ಸರ್ವಧರ್ಮಗಳು ಬೋಧಿಸುವ ನೀತಿಯ ಪಾಠವೊಂದೆ
ಎಲ್ಲರ ಸಂಪ್ರದಾಯಗಳಿಗೂ ಬೆಲೆನೀಡುವ ಪೂಣ್ಯಭೂಮಿಯೊಂದೆ….!!!

ಹಬ್ಬಗಳು ಬೇರೆಯಾದರು ಶುಭಕೋರುವ ಮನಗಳೊಂದೆ
ಅತಿಥಿ ಸತ್ಕಾರದ ಸಂಸ್ಕೃತಿ ಜಗತ್ತಿಗೆಲ್ಲ ಮಾದರಿಯೊಂದೆ;
ಸಾವುನೋವಿಗೆ ಮನಮೀಡಿವ ಹೃದಯಗಳ ನೋವೊಂದೆ
ಸತ್ಯಧರ್ಮವ ಪರಿಪಾಲಿಸುವ ಮೌಲ್ಯದ ಜನರೊಂದೆ….!!

ದೃಷ್ಟತನವ ಖಂಡಿಸುವ ದಿಟ್ಟತನದ ಮನಗಳೊಂದೆ
ತಾಯ್ನೆಲದ ವಿರೋಧಿಗಳ ಹುಟ್ಟಡಗಿಸುವ ಯೋಧರೊಂದೆ;
ಸಹಬಾಳ್ವೆಯ ಸಮನ್ವಯದ ಕ್ರಾಂತಿಮಾಡಿದ ಬಸವಣ್ಣನ ನಾಡೊಂದೆ;
ಸರ್ವರಿಗೂ ಸಮಾನತೆ ಸ್ವಾತಂತ್ರ್ಯ ನೀಡಿದ
ಭಾರತ ನೆಲವೊಂದೆ..!!!!

✍️ಕಾಡಜ್ಜಿ ಮಂಜುನಾಥ,

ಹರಪನಹಳ್ಳಿ ವಿಜಯನಗರ ಜಿಲ್ಲೆ

Share This Article
error: Content is protected !!
";