Ad image

107 ರ‍್ಷಗಳ ಇತಿಹಾಸ ಹೊಂದಿರುವ ನ್ಯಾಷನಲ್‌ ಎಜುಕೇಷನ್‌ ಸೊಸೈಟಿಯಿಂದ ನೂತನ ಇಂಜಿನಿಯಿರಿಂಗ್‌ ಕಾಲೇಜು ಪ್ರಾರಂಭ

Vijayanagara Vani
107 ರ‍್ಷಗಳ ಇತಿಹಾಸ ಹೊಂದಿರುವ ನ್ಯಾಷನಲ್‌ ಎಜುಕೇಷನ್‌ ಸೊಸೈಟಿಯಿಂದ ನೂತನ ಇಂಜಿನಿಯಿರಿಂಗ್‌ ಕಾಲೇಜು ಪ್ರಾರಂಭ

ಪ್ರಸಕ್ತ ರ‍್ಷದಿಂದ ಡಾ. ಎಚ್.ಎನ್. ನ್ಯಾಷನಲ್‌ ಕಾಲೇಜ್ ಆಫ್ ಇಂಜಿನಿಯರಿಂಗ್ ಗೆ ದಾಖಲಾತಿ ಪ್ರಾರಂಭ

ಬೆಂಗಳೂರು ಜೂನ್‌ 2೦: ರಾಜ್ಯದ ಶೈಕ್ಷಣಿಕ ಕ್ಷೇತ್ರದಲ್ಲಿ ತನ್ನದೇ ಆದ ವಿಶಿಷ್ಟ ಕೊಡುಗೆಯನ್ನು ನೀಡಿರುವ ನ್ಯಾಷನಲ್‌ ಎಜುಕೇಷನ್‌ ಸೊಸೈಟಿಯಿಂದ ಜಯನಗರದಲ್ಲಿ ಡಾ. ಎಚ್‌.ಎನ್‌ ನ್ಯಾಷನಲ್‌ ಕಾಲೇಜ್‌ ಆಫ್‌ ಇಂಜಿನಿಯರಿಂಗ್‌ ಪ್ರಾರಂಭಿಸಲಾಗಿದೆ. ಪ್ರಸಕ್ತ ರ‍್ಷದಿಂದ ಇಂಜಿನಿಯರಿಂಗ್‌, ಎಂಬಿಎ ಮತ್ತು ಎಂಸಿಎ ಗೆ ದಾಖಲಾತಿಯನ್ನು ಪ್ರಾರಂಭಿಸಲಾಗುವುದು ಎಂದು ನ್ಯಾಷನಲ್‌ ಎಜುಕೇಷನ್‌ ಸೊಸೈಟಿ ರ‍್ನಾಟಕದ ಅಧ್ಯಕ್ಷರಾದ ಡಾ. ಹೆಚ್‌ ಎನ್‌ ಸುಬ್ರಮಣ್ಯ ತಿಳಿಸಿದರು.

ಇಂದು ಜಯನಗರದಲ್ಲರುವ ಡಾ. ಎಚ್‌.ಎನ್‌ ನ್ಯಾಷನಲ್‌ ಕಾಲೇಜ್‌ ಆಫ್‌ ಇಂಜಿನಿಯರಿಂಗ್‌ ಕಾಲೇಜಿನಲ್ಲಿ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಡಾ. ಎಚ್‌ ನರಸಿಂಹಯ್ಯ ಅವರ ಆರ‍್ಶಗಳ ಮೇಲೆ ನಡೆಯುತ್ತಿರುವ ಶೈಕ್ಷಣಿಕ ಸಂಸ್ಥೆಗಳ ಮೂಲಕ ಮುಂದಿನ ಪೀಳಿಗೆಗೆ ಅನುಕೂಲವಾಗುವ ಶಿಕ್ಷಣ ನೀಡುವ ನಿಟ್ಟಿನಲ್ಲಿ ಇಂಜಿನೀಯರಿಂಗ್‌ ಕಾಲೇಜನ್ನು ಪ್ರಾರಂಭಿಸಿದ್ದೇವೆ ಎಂದರು.

1917ರಲ್ಲಿ ಪ್ರಾರಂಭವಾದ ಶಿಕ್ಷಣ ಸಂಸ್ಥೆಯೊಂದು ಹಲವು ಮಜಲುಗಳನ್ನು ದಾಟಿ ನ್ಯಾಷನಲ್ ಎಜುಕೇಷನ್ ಸೊಸೈಟಿ ಆಫ್ ರ‍್ನಾಟಕ ಎಂದು ನೋಂದಾಯಿತವಾಗಿದೆ. ಕೇವಲ ಪ್ರಾಢಶಾಲೆಯಿಂದ ಪ್ರಾರಂಭವಾದ ಸಂಸ್ಥೆ ಕಾಲಘಟದಲ್ಲಿ ಪ್ರಾಥಮಿಕ, ಪ್ರೌಢ, ಪದವಿ ಪರ‍್ವ ಮತ್ತು ಪದವಿ ಶಿಕ್ಷಣವನ್ನು ನೀಡುವ ಒಟ್ಟು 21 ಶಾಲಾ ಕಾಲೇಜುಗಳನ್ನು ಸ್ಥಾಪಿಸಿತು. ಬೆಂಗಳೂರಿನ ಬಸವನಗುಡಿ ನ್ಯಾಷನಲ್ ಶಾಲಾ-ಕಾಲೇಜುಗಳು ಮೂಲ ಸಂಸ್ಥೆಗಳಾದರೂ, ಅನೇಕ ಶಾಲಾ ಕಾಲೇಜುಗಳು ಗ್ರಾಮಾಂತರ ಪ್ರದೇಶದಲ್ಲಿ ಸ್ಥಾಪಿತವಾಗಿ ಸಮಾಜದ ಬಡ – ಕೆಳರ‍್ಗದ ಜನರಿಗೆ ಶಿಕ್ಷಣವನ್ನು ನೀಡುತ್ತಿರುವುದು ಈ ಸಂಸ್ಥೆಯ ಹೆಗ್ಗಳಿಕೆಯಾಗಿದೆ ಎಂದರು.

ನ್ಯಾಷನಲ್‌ ಎಜುಕೇಷನ್‌ ಸೊಸೈಟಿ ರ‍್ನಾಟಕದ ಗೌರವ ಕರ‍್ಯರ‍್ಶಿಗಳಾದ ವೆಂಕಟಶಿವಾರೆಡ್ಡಿ ಮಾತನಾಡಿ, ನ್ಯಾಷನಲ್ ಶಾಲಾ-ಕಾಲೇಜುಗಳು ಹಲವಾರು ಮುಖ್ಯೋಪಾಧ್ಯಾಯರು ಮತ್ತು ಪ್ರಾಂಶುಪಾಲರುಗಳನ್ನು ಕಂಡರೂ, ಡಾ. ಎಚ್.ಎನ್. ರ‍್ಥಾತ್ ಡಾ. ಎಚ್. ನರಸಿಂಹಯ್ಯವನರು ಈ ಕಾಲೇಜಿನ – ಸಂಸ್ಥೆಯ ಅಧ್ಯಾಪಕ – ಪ್ರಾಂಶುಪಾಲ – ಅಧ್ಯಕ್ಷರಾಗಿ ಕರ‍್ಯನರ‍್ವಹಿಸಿದ್ದು ಸಂಸ್ಥೆಯ ಸುರ‍್ಣಯುಗ ಎಂದೇ ಹೇಳಬಹುದು. ನ್ಯಾಷನಲ್ ಎಜುಕೇಷನ್ ಸೊಸೈಟಿ ಕಳೆದ 107 ರ‍್ಷಗಳಿಂದ ಸಾಂಪ್ರದಾಯಿಕವಾದ ಶಿಕ್ಷಣವನ್ನು ನೀಡುತ್ತಾ ಸಧೃಡ ಸಮಾಜವನ್ನು ಕಟ್ಟುವಲ್ಲಿ ತನ್ನೆಲ್ಲ ಶಕ್ತಿಯನ್ನು ವ್ಯಯಿಸಿದೆಯಾದರೂ, ಬದಲಾದ ಕಾಲಘಟ್ಟ ಮತ್ತು ಸನ್ನಿವೇಶಗಳು ಇಂಜಿನಿಯರಿಂಗ್ ಕಾಲೇಜಿನ ಅಗತ್ಯವನ್ನು ಸಂಸ್ಥೆಗೆ ಮನವರಿಕೆ ಮಾಡಿಕೊಟ್ಟಿದೆ ಎಂದರು.

Share This Article
error: Content is protected !!
";