ವಿಜ್ಞಾನಕ್ಕೂ ಮೀರಿದ ಶಕ್ತಿ ಆದ್ಯಾತ್ಮಿಕವಾದ ಮೌನಾನುಷ್ಟಾನಕ್ಕೆ ಶಕ್ತಿ ಇದೆ

Vijayanagara Vani
ವಿಜ್ಞಾನಕ್ಕೂ ಮೀರಿದ ಶಕ್ತಿ ಆದ್ಯಾತ್ಮಿಕವಾದ ಮೌನಾನುಷ್ಟಾನಕ್ಕೆ ಶಕ್ತಿ ಇದೆ

ಮರಿಯಮ್ಮನಹಳ್ಳಿ: ವಿಜ್ಞಾನಕ್ಕೂ ಮೀರಿದ ಶಕ್ತಿ ಆದ್ಯಾತ್ಮಿಕವಾದ ಮೌನಾನುಷ್ಟಾನಕ್ಕೆ ಶಕ್ತಿ ಇದೆ ಎನ್ನುವುದನ್ನು ಈ ಹಿಂದೆ ಅನೇಕ ಸ್ವಾಮೀಜಿಗಳು ತೋರಿಸಿ ಕೊಟ್ಟಿದ್ದಾರೆ. ಹಿಂದಿನ ಸ್ವಾಮಿಗಳ ಹಿರಿದಾಸೆ ಯಂತೆ ತಪಸಿನ ಶಕ್ತಿಯನ್ನು ಬೆಳಸಿ ಕೊಳ್ಳಲು ಮತ್ತು ಲೋಕ ಕಲ್ಯಾಣಕ್ಕಾಗಿ 48 ದಿನಗಳ ಮೌನಾನುಷ್ಟಾನ ವೃತ ಆಚರಣೆ ಸಂತೋಷದಿಂದ ನಡೆಸಲಾಗಿದೆ ಎಂದು ಗರಗ ನಾಗಲಾಪುರ ಶ್ರೀಗುರು ಒಪ್ಪತ್ತೇಶ್ವರ ಸ್ವಾಮಿ ವಿರಕ್ತಮಠದ ಪ ಶ್ರೀ ಮ.ನಿ.ಪ ನಿರಂಜನಪ್ರಭು ಮಹಾಸ್ವಾಮೀಜಿ ಗಳು ಹೇಳಿದರು.
ಗರಗನಾಗಲಾಪುರದ ಶ್ರೀಗುರು ಒಪತ್ತೇಶ್ವರ ಮಠದ ಆವರಣದಲ್ಲಿ ನಡೆದ ಶ್ರೀಮಠದ ಸ್ವಾಮಿಗಳಾದ ನಿರಂಜನಪ್ರಭು ಮಹಾಸ್ವಾಮಿಗಳು 48 ದಿನಗಳ ಮೌನಾನುಷ್ಟಾನ ಮಂಗಲ ಮಹೋತ್ಸವದಲ್ಲಿ ಸಮಾರಂಭದಲ್ಲಿ ಅವರು ಮಾತನಾಡಿದರು.
48 ದಿನಗಳ ಮೌನಾನುಷ್ಟಾನವನ್ನು ನಾನು ಸಂತೋಷದಿಂದ ಶ್ರದ್ದಾಭಕ್ತಿಯಿಂದ ಯಿಂದ ಆಚರಿಸಿದ್ದೇನೆ. ಈ ವರ್ಷ ಮಳೆ-ಬೆಳೆ ಚೆನ್ನಾಗಿ ಆಗಲಿ. ದೇಶದಲ್ಲಿ ಉತ್ತಮ ಮಳೆಯಾಗಿ ರೈತರಿಗೆ ಉತ್ತಮ ಬೆಳೆ ಬಂದು ಬೆಳದ ಬೆಳೆಗೆ ಉತ್ತಮ ಬೆಲೆ ಸಿಕ್ಕು ಸಮೃದ್ಧಿಯಾಗಿ ಜನತೆ ಸುಖ ಸಂತೋಷ, ನೆಮ್ಮದಿ ದೊರೆಯಲಿ, ನಾಡಿಗೆ ಒಳ್ಳೆಯದಾಗಲಿ ಎಂದು ಬೇಡಿಕೊಂಡಿದ್ದೇನೆ. ಭಕ್ತರು ಚೆನ್ನಾಗಿದ್ದರೆ ಸ್ವಾಮಿಗಳು ಚೆನ್ನಾಗಿರುತ್ತಾರೆ ಎಂದರು.
ಬರೀ ಪ್ರವಚನ ಹೇಳಿ ಭಕ್ತರಿಂದ ಚಪ್ಪಾಳೆ ಗಿಟಿಸಿ ಕೊಳ್ಳುವುದು ಬದಲಾಗಿ, ಭಕ್ತರ ಕಲ್ಯಾಣಕ್ಕಾಗಿ ಅನುಷ್ಠಾಶಕ್ತಿ ಪಡೆದು ಜನ ಕಲ್ಯಾಣಕ್ಕಾಗಿ ಮತ್ತು ಸಮಾಜದ ಉನ್ನತಿಗಾಗಿ ಜನರ ಕಷ್ಟ, ದುಃಖ ಪರಿಹಾರಕ್ಕೆ ಮುಂದಾಗಬೇಕು ಎನ್ನುವ ಆಲೋಚನೆಯಿಂದ 48 ದಿನಗಳ ಮೌನಾನುಷ್ಟಾನ ಗೊಳಿಸಲಾಗಿದೆ ಎಂದು ಹೇಳಿದರು.
ಹೊಸಪೇಟೆಯ ಕೊಟ್ಟೂರುಸ್ವಾಮಿ ಮಠದ ಕೊಟ್ಟೂರು ಬಸವಲಿಂಗ ಮಹಾಸ್ವಾಮಿಗಳು ಮಾತನಾಡಿ, ಜಪ, ತಪಗಳಿಂದ ಮನಸ್ಸು ಶಾಂತವಾಗಿರುತ್ತದೆ. ಅನುಷ್ಟಾನ ಬಲದಿಂದ ಗಳಿಸಿದ ಶಕ್ತಿಯನ್ನು ಭಕ್ತರ ಉದ್ದಾರಕ್ಕಾಗಿ ಬಳಸಿ, ಸಮಾಜ ಸುಧಾರಣೆಗಾಗಿ ಬಳಸಬೇಕು ಎನ್ನುವುದು ಗರಗ ನಾಗಲಾಪುರದ ಒಪ್ಪತ್ತೆಶ್ವಸ್ವಾಮಿ ಸಾಮಿ ಮಠದ ನಿರಂಜನಪ್ರಭು ಸ್ವಾಮೀಜಿಗಳ ಜೀವನದ ಪರಮ ಗುರಿಯಾಗಿದೆ ಎಂದು ಅವರು ಹೇಳಿದರು.
ಸರ್ವೇಜನ ಸುಖಿನೋಭವಂತೋ ಎಂಬಂತೆ ನಿರಂಜನ ಪ್ರಭುಸ್ವಾಮೀಜಿಗಳು ಜಾತಿ ಭೇಧವಿಲ್ಲದೇ ಎಲ್ಲರಲ್ಲೊಂದಾಗಿ ಅಪಾರ ಭಕ್ತ ಸಮೂಹ ರೂಪಿಸಿಕೊಂಡು ಸಮಾಜದ ಒಳತಿಗಾಗಿ ಶ್ರಮಿಸುತ್ತಿದ್ದಾರೆ. ಭಕ್ತರ ಕಲ್ಯಾಣಕ್ಕಾಗಿ ವೃತ ಆಚರಣೆ ನಡೆಸಿ ಭಕ್ತರಿಗೆ ಶಕ್ತಿ, ಭಕ್ತಿ ಕರಣಿಸಲು ಮುಂದಾಗಿದ್ದು ಶ್ಲಾಘನೀಯ ಎಂದರು.
ಮನಸ್ಸಿಗೆ ಉತ್ತಮ ಸಂಸ್ಕಾರ ನೀಡಬೇಕು. ಮನಸ್ಸಿಗೆ ಒಳ್ಳೆತವನ್ನೇ ನೀಡಬೇಕು. ನಮ್ಮ ನಡುವಳಿಕೆಗಳು ಉತ್ತಮವಾಗಿರಬೇಕು. ಆಗ ಮಾತ್ರ ನಾವು ಉತ್ತಮ ವ್ಯಕ್ತಿಗಳಾಗಲು ಸಾಧ್ಯ ಎ೦ದು ಪಟ್ಟಣದ ಗುರುಪಾದ ದೇವರ ಮಠದ ಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿಗಳು ಹೇಳಿದರು.
ಇದೇ ಸಂದರ್ಭದಲ್ಲಿ ನಿರಂಜನಪ್ರಭು ಮಹಾ ಸ್ವಾಮೀಜಿಗಳನ್ನು ಭಕ್ತರು ಸನ್ಮಾನಿ ಗೌರವಿಸಿದರು.
ಸಂಗೀತ ಶಿಕ್ಷಕರಾದ ವಿಜಯಕುಮಾರ್ ಬಡಿಗೇರ್ ಅವರಿಂದ ಸಂಗೀತ ಕಾರ್ಯಕ್ರಮ ನಡೆಯಿತು. ಮಲ್ಲಿಕಾರ್ಜುನ ಬಡಿಗೇರ್, ಪ್ರಕಾಶ್ ಬಡಿಗೇರ್ ತಬಲವಾದನ ನುಡಿಸಿದರು. ಕಲಾವಿದ ವಿರೂಪಾಕ್ಷಯ್ಯಸ್ವಾಮಿ ನಿರೂಪಿಸಿದರು.

WhatsApp Group Join Now
Telegram Group Join Now
Share This Article
error: Content is protected !!