ದೇಶದ ಅನೇಕ ಪಕ್ಷಗಳಿಗೆ ಮಾಲೀಕರುಗಳು ಇದ್ದಾರೆ. ಕುಟುಂಬ ರಾಜಕಾರಣದ ಮೂಲಕ ಅವರುಗಳೇ ಮತ್ತೆ ಮತ್ತೆ ಮಾಲೀಕ ರಾಗಿರುವುದನ್ನು ಮತ್ತು ಆಗುತ್ತಿರುವುದನ್ನು ಎಲ್ಲರೂ ನೋಡಿದ್ದೀರಿ ಆದರೆ ನಮ್ಮ ಬಿಜೆಪಿ ಪಕ್ಷಕ್ಕೆ ಯಾವುದೇ ಮಾಲೀಕರಿಲ್ಲ ನಮ್ಮಲ್ಲಿ ಪಕ್ಷದ ಕಾರ್ಯಕರ್ತರೇ ನಿಜವಾದ ಮಾಲೀಕರು ಎಂದು ರಾಜ್ಯದ ಮಾಜಿ ಮಂತ್ರಿ ಸಿ.ಟಿ ರವಿ ಹೇಳಿದರು
ನಗರದ ಹೊರವಲಯದ ವೈಷ್ಣವಿ ಹೋಟೆಲಿನ ಸಭಾಂಗಣದಲ್ಲಿ ಮಂಗಳವಾರ ನಡೆದ ಕಾರ್ಯಕರ್ತರ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡುತ್ತಿದ್ದರು.ಲೋಕಸಭಾ ಚುನಾವಣೆ ಹಿನ್ನೆಲೆಯಾಗಿ ಕಾರ್ಯಕರ್ತರಿಗೆ ಸ್ಪೂರ್ತಿ ತುಂಬುವ ಕಾರ್ಯಕ್ರಮ ಇದಾಗಿತ್ತು. ಪ್ರತಿಯೊಬ್ಬ ಕಾರ್ಯಕರ್ತರು ಪಕ್ಷವನ್ನು ತನ್ನ ಮನೆಯ ಎಂದು ಭಾವಿಸಿಕೊಂಡು ಭದ್ರ ಬುನಾದಿಯಿಂದ ಗಟ್ಟಿಮುಟ್ಟಾದ ಮನೆಯನ್ನು ಕಟ್ಟಬೇಕು. ಆದ್ದರಿಂದ ಪ್ರತಿಯೊಬ್ಬರೂ ಬೂತ್ ಮಟ್ಟದಲ್ಲಿ ಪಕ್ಷವನ್ನು ಗಟ್ಟಿಗೊಳಿಸಬೇಕು. ನಮ್ಮ ಪ್ರಧಾನಿಯವರು ನಾನು ಪ್ರಧಾನ ಸೇವಕ ಎಂದು ಹೇಳಿದ್ದಾರೆ. ದೇಶದ 140 ಕೋಟಿ ಜನ ನನ್ನ ಪರಿವಾರ ಎಂದು ಬಿಡುವಿಲ್ಲದ ಕೆಲಸ ಮಾಡುತ್ತಿದ್ದಾರೆ. ಕಳೆದು ಹತ್ತು ವರ್ಷಗಳ ಕಾಲ ಯಾವುದೇ ಒಂದು ಕಪ್ಪು ಚುಕ್ಕೆ ಇಲ್ಲದೆ ಭ್ರಷ್ಟಾಚಾರ ರಹಿತ ಸರ್ಕಾರ ನೀಡಿದ್ದು ವಿಶ್ವದ ಎಲ್ಲ ದೇಶಗಳು ಭಾರತವನ್ನು ತಿರುಗಿ ನೋಡುವಂತೆ ಮಾಡಿದ್ದಾರೆ.
ಈಗಾಗಲೇ ನಾವು ಅಭಿವೃದ್ಧಿಯತ್ತ ದಾಪುಗಾಲು ಇಡುತ್ತಿದ್ದೇವೆ. ಅನೇಕ ದೇಶಗಳ ನಾಯಕರು ಮೋದಿಜಿಯನ್ನು ಕೊಂಡಾಡುತ್ತಿದ್ದಾರೆ. ವಿಶ್ವದ ಜನಪ್ರಿಯ ನಾಯಕ ಎಂದು ಅಮೆರಿಕ ಹೇಳಿದೆ. ಪ್ರಪಂಚದಲ್ಲಿ 5ನೇ ದುರ್ಬಲ ರಾಷ್ಟ್ರವಾಗಿದ್ದ ಭಾರತವನ್ನು ಐದನೇ ಪ್ರಬಲ ರಾಷ್ಟ್ರ ಮಾಡಿದ ಕೀರ್ತಿ ಮೋದಿ ಅವರಿಗೆ ಸಲ್ಲುತ್ತದೆ. ಈಗಾಗಲೇ ನಮ್ಮನ್ನಾಳಿದ ಇಂಗ್ಲೆಂಡ್ ದೇಶವನ್ನು ಹಿಂದಕ್ಕೆ ಹಾಕಿದ್ದೇವೆ ಇನ್ನು ಕೆಲವೇ ವರ್ಷಗಳಲ್ಲಿ ಅನೇಕ ರಾಷ್ಟ್ರಗಳನ್ನು ಹಿಂದಕ್ಕೆ ಕೊನೆಗೆ ಚೀನಾ ಮತ್ತು ಅಮೆರಿಕವನ್ನು ಸಹ ದಾಟಿ ವಿಶ್ವ ಗುರು ಸ್ಥಾನಕ್ಕೆ ಏರಲಿದ್ದೇವೆಇಂತಹ ವಿಷಯಗಳು ಸಿದ್ದರಾಮಯ್ಯಗೆ ಕೇಳುವುದಿಲ್ಲವೇ ವಿದೇಶಗಳಲ್ಲಿ ರಾಹುಲ್ ಗಾಂಧಿಗೆ ಏನು ಅನ್ನುತ್ತಾರೆ ಎಲ್ಲರಿಗೂ ಗೊತ್ತಿರುವ ವಿಷಯವಾಗಿದೆ, ಕಂಡ ಕಂಡಲ್ಲಿ ಬಾಂಬು ಇಡುವ ಭಯೋತ್ಪಾದಕರನ್ನು ಬ್ರದರ್ಸ್ ಎಂದು ಕರೆಯುವ ಕಾಂಗ್ರೆಸ್ ಪಕ್ಷ ದೇಶಕ್ಕೆ ಮಾರಕ ಎಂದು ತಮ್ಮ ವಾಗ್ಜರಿ ಹರಿಸಿದರು.
ಸಿರುಗುಪ್ಪ ಮಾಜಿ ಶಾಸಕ ಎಂಎಸ್ ಸೋಮಲಿಂಗಪ್ಪ, ಮಾಜಿ ಸಂಸದ ಶಿವರಾಮೇಗೌಡ, ಬಿಜೆಪಿ ಮುಖಂಡ ದರಪ್ಪ ನಾಯಕ, ಸಿಂಧನೂರು ಬಿಜೆಪಿ ಮುಖಂಡ ಕರಿಯಪ್ಪ, ತಾಲೂಕು ಅಧ್ಯಕ್ಷ ಕುಂಟ್ನಾಳ ಮಲ್ಲಿಕಾರ್ಜುನ ಸ್ವಾಮಿ ಮಾತನಾಡಿದರು. ಸಭೆಯಲ್ಲಿ ಎ.ಪಿ.ಎಂ.ಸಿ ಮಾಜಿ ಅಧ್ಯಕ್ಷರಾದ ಕೆ.ನಾಗೇಶಪ್ಪ ಮತ್ತು ಮಲ್ಲನಗೌಡ, ಮುಖಂಡ ಚಾಗಿ ಸುಬ್ಬಯ್ಯ, ಮಹಿಳಾ ಮೋರ್ಚಾ ಅಧ್ಯಕ್ಷೆ ಸೀತಾರಾಮರಾಜು, ಬಿಜೆಪಿ ಜಿಲ್ಲಾ ಉಪಾಧ್ಯಕ್ಷೆ ಮಂಜುಳಾ, ಜಿಲ್ಲಾ ಎಸ್.ಸಿ ಮೋರ್ಚಾ ಅಧ್ಯಕ್ಷ ಮೇಕೇಲಿ ವೀರೇಶ ಪುರಸಭೆ ಮಾಜಿ ಅಧ್ಯಕ್ಷ ನಾಂಚಾರಯ್ಯ, ಬಿ.ಈರಣ್ಣ, ತೆಕ್ಕಲಕೋಟೆ ಪ.ಪಂ ಮಾಜಿ ಅಧ್ಯಕ್ಷಜಿ.ಸಿದ್ದಪ್ಪ,ನಗರಸಬವೆಸದಸ್ಯರಾದ ವಿಕ್ರಂ ಜೈನ್, ನಟರಾಜ, ರಾಮಕೃಷ್ಣ ಮೋಹನರೆಡ್ಡಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗಿತ್ತ ಹುಲಗಪ್ಪ, ಮಂಡಲ ಪ್ರ.ಕಾರ್ಯಗಳು ಬಿ. ಬಸವರಾಜ ಮತ್ತು ಪಕೀರಯ್ಯ ಸೇರಿದಂತೆ ಮಹಾಶಕ್ತಿ ಕೇಂದ್ರದ ಪ್ರಮುಖರು ಎಲ್ಲ ಮೋರ್ಚಾದ ಮುಖಂಡರು ಹಾಗೂ ಕಾರ್ಯಕರ್ತರು ಭಾಗಿಯಾಗಿದ್ದರು.