Ad image

ಮೂರನೇ ಭಾರಿಗೆ ಮೋದಿ ಪ್ರಧಾನಿ ಜೆ.ಡಿ.ಎಸ್ ನಿಂದ ಸಂಭ್ರಮಾಚರಣೆ ಕುಮಾರಸ್ವಾಮಿಗೆ ಜೈಕಾರ ಕೂಗಿದ ಕಾರ್ಯಕರ್ತರು

Vijayanagara Vani
ಮೂರನೇ ಭಾರಿಗೆ ಮೋದಿ ಪ್ರಧಾನಿ ಜೆ.ಡಿ.ಎಸ್ ನಿಂದ ಸಂಭ್ರಮಾಚರಣೆ ಕುಮಾರಸ್ವಾಮಿಗೆ ಜೈಕಾರ ಕೂಗಿದ ಕಾರ್ಯಕರ್ತರು
filter: 0; fileterIntensity: 0.0; filterMask: 0; captureOrientation: 0; brp_mask:0; brp_del_th:null; brp_del_sen:null; delta:null; module: photo;hw-remosaic: false;touch: (-1.0, -1.0);sceneMode: 8;cct_value: 0;AI_Scene: (-1, -1);aec_lux: 0.0;aec_lux_index: 0;albedo: ;confidence: ;motionLevel: -1;weatherinfo: null;temperature: 45;
ಬಳ್ಳಾರಿ.ಜೂ.10: ಸತತ ಮೂರನೇ ಬಾರಿಗೆ ದೇಶದ ಪ್ರಧಾನಮಂತ್ರಿಯಾಗಿ ನರೇಂದ್ರ ಮೋದಿಯವರು ಅಧಿಕಾರ ಸ್ವೀಕರಿಸಿದ್ದರಿಂದ ಜನತಾ ದಳ ಜಾತ್ಯತೀತ ಪಕ್ಷದ ನಾಯಕರು ಮತ್ತು ಕಾರ್ಯಕರ್ತರು ಹರ್ಷವ್ಯಕ್ತಪಡಿಸಿದರು.
ಇಂದು ನಗರದ ರಾಯಲ್ ಸರ್ಕಲ್‌ನಲ್ಲಿ ಪಟಾಕಿ ಸಿಡಿಸಿ ಸಿಹಿ ಹಂಚಿ ಸಂಭ್ರಮಿಸಿ ಮಾತನಾಡಿದ ಜೆ.ಡಿ.ಎಸ್ ಪಕ್ಷದ ಜಿಲ್ಲಾಧ್ಯಕ್ಷ ಮೀನಳ್ಳಿ ತಾಯಣ್ಣ, ಜವಹಾರ್ ಲಾಲ್ ನೆಹರು ನಂತರ ಯಾರೂ ಸಹ ಸತತ ಮೂರನೇ ಬಾರಿಗೆ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ್ದಿಲ್ಲ, ಮೋದಿ ವಿಕ್ರಮವನ್ನು ಸಾಧಿಸುವ ಮೂಲಕ ತನ್ನ ಹೆಸರಿಗೆ ದಾಖಲೆಯನ್ನು ವರ್ಗಾಯಿಸಿಕೊಂಡಿದ್ದಾರೆ, ಇದಕ್ಕೆ ನಮ್ಮ ಪಕ್ಷದ ರಾಜ್ಯ ಮತ್ತು ನಾಯಕರ ಶ್ರಮ ಕೂಡ ಇದೆ, ಅದೇ ರೀತಿ ನಮ್ಮ ಪಕ್ಷದ ರಾಜ್ಯಾಧ್ಯಕ್ಷರು ಹಾಗೂ ಸಂಸದರಾದ ಎಚ್.ಡಿ.ಕುಮಾರಸ್ವಾಮಿ ಕೇಂದ್ರ ಸರ್ಕಾರದಲ್ಲಿ ಮಂತ್ರಿಯಾಗಿ ಸ್ಥಾನವನ್ನು ಪಡೆದಿದ್ದಾರೆ, ಇದು ನಮಗೆಲ್ಲ ಖುಷಿ ತಂದಿದೆ ಎಂದರು.
ಈ ಸಂದರ್ಭದಲ್ಲಿ ಎಸ್.ಟಿ ಘಟಕದ ಅದ್ದಿಗೇರಿ ರಾಮಣ್ಣ,  ವಂಡ್ರಿ  ಕಿರಣ್  ಮಹಿಳಾ ಘಟಕದ ಅಧ್ಯಕ್ಷರು,  ಭವಾನಿ ಜಾಬಿಲ್ ರೇಣುಕಾ ಯಶೋದಾ ನೀಲಾ ರೂಮನ ನಾಗವೇಣಿ ಪದಾಧಿಕಾರಿಗಳು ಸೇರಿದಂತೆ ಹಲವು ಕಾರ್ಯಕರ್ತರಿದ್ದರು.
Share This Article
error: Content is protected !!
";