ಬೆಂಗಳೂರು, ಜೂನ್ 12: ಕನ್ನಡ ಚಿತ್ರರಂಗದ ನಟ ದರ್ಶನ್ ತಮ್ಮ ಅಭಿಮಾನಿಯೊಬ್ಬರ ಕೊಲೆ ಪ್ರಕರಣದಲ್ಲಿ ಬಂಧನವಾಗಿ ಜೈಲು ಸೇರಿದ್ದಾರೆ. ಸಾಲು ಸಾಲು ವಿವಾದಗಳು ನಟನ ಮೇಲಿವೆ. ಸದ್ಯದ ಕೊಲೆ ಪ್ರಕರಣ ರಾಜ್ಯವನ್ನು ಬೆಚ್ಚಿಬೀಳಿಸಿದೆ. ದರ್ಶನ್ ಬಂಧನದಿಂದ ಅವರ ಮುಂದಿನ ಪ್ರಾಜೆಕ್ಟ್‌ಗಳ ಕಥೆ ಏನು? ಮುಂಗಡ ಕೊಟ್ಟ ನಿರ್ದೇಶಕರ ಪಾಡೇನು? ಎಂಬುದೇ ಕುತೂಹಲ ಮೂಡಿಸಿದೆ.
ಇತ್ತೀಚೆಗೆ ದರ್ಶನ್ ನಟನೆಯ ‘ಕಾಟೇರ’ ಸಿನಿಮಾ ಬಿಡುಗಡೆ ಆಗಿ ಹಿಟ್ ಆಗಿತ್ತು. ಗಲ್ಲಾಪೆಟ್ಟಿಗೆಯಲ್ಲಿ ಸದ್ದು ಮಾಡಿತ್ತು. ಅದಾದ ಬಳಿಕ ಮತ್ತೆ ಚಿತ್ರರಂಗದಲ್ಲಿ ಮೈ ಕೊಡವಿದ್ದ ದರ್ಶನ್ ಗೆ ಬೇಡಿಕೆ ಹೆಚ್ಚಾಯಿತು. ಸಾಲು ಸಾಲು ಸಿನಿಮಾಗಳು ಅವರ ಮುಂದೆ ಬಂದವು. ಕೆಲವು ಸಿನಿಮಾಗಳಿಗೆ ದರ್ಶನ್ ಸಹಿ ಮಾಡಿದ್ದಾರೆ ಎನ್ನಲಾಗಿದೆ.
ಸದ್ಯ ‘ಡೇವಿಲ್’ ಸಿನಿಮಾ ಶೂಟಿಂಗ್ ಬಹುತೇಕ ಮುಗಿಸಿ ಕೊಟ್ಟಿರುವ ನಟ ದರ್ಶನ್ ಕೈಯಲ್ಲಿ ಹೈಬಜೆಟ್‌ನ ಸುಮಾರು ನಾಲ್ಕು ಸಿನಿಮಾಗಳು ಇವೆ. ಬಂಧನದಿಂದ ಈ ಸಿನಿಮಾಗಳ ಮೇಲೆ ದುಷ್ಪರಿಣಾಮ ಬೀರಿದೆ
ಈ ಪೈಕಿ ಕೆಲವರು ದರ್ಶನ್ ನಂಬಿ ಕತೆ ಮಾಡಿಕೊಂಡಿದ್ದು, ಅನೌನ್ಸ್ ಸಹ ಮಾಡಿದ್ದು, ಕೋಟ್ಯಾಂತರ ಬಂಡವಾಳ ಹೂಡಲು ನಿರ್ಧರಿಸಿದ್ದರು. ಈಗಾಗಲೇ ದರ್ಶನ್ ಮುಂದಿನ ಸಿನಿಮಾಗಳಿಗೆ ಹಲವರಿಂದ ಮುಂಗಾಡ ಸಹ ಪಡೆದಿದ್ದರು ಎಂದು ತಿಳಿದು ಬಂದಿದೆ. ಒಂದು ವೇಳೆ ದರ್ಶನ್ ಜೈಲಿನಿಂದ ಬದರದಿದ್ದರೆ, ಚಿತ್ರರಂಗದಿಂದ ಬ್ಯಾನ್ ಆದರೆ, ಇವರ ಪಾಡೇನು ಎಂಬುದಕ್ಕೆ ಉತ್ತರ ಸಿಗಬೇಕಿದೆ. ವರ್ಷಾಂತ್ಯಕ್ಕೆ ತೆರೆಗೆ ಬರಬೇಕಿದ್ದ ‘ಡೇವಿಲ್’ ಸಿದ್ಧವಾಗುತ್ತಿರುವ ‘ಡೇವಿಲ್’ ಸಿನಿಮಾ ನಟ ದರ್ಶನ್ 57ನೇ ಸಿನಿಮಾ ಆಗಿದ್ದು, ಇದನ್ನು ಮಿಲನ ಪ್ರಕಾಶ್ ಚಿತ್ರವನ್ನು ನಿರ್ಮಿಸಲಿದ್ದಾರೆ. ನಿರ್ದೇಶನವು ಅವರೇ ಮಾಡುತ್ತಿದ್ದಾರೆ. ಬಹುಪಾಲು ಸಿನಿಮಾದ ಚಿತ್ರೀಕರಣ ಪೂರ್ಣಗೊಂಡಿದೆ. ಈ ವರ್ಷಾಂತ್ಯಕ್ಕೆ ತೆರೆಗೆ ಬರಲು ಸಿದ್ಧತೆ ನಡೆಸಿಕೊಳ್ಳಲಾಗುತ್ತಿದೆ. ಈ ನಡುವೆ ಕೊಲೆ ಕೇಸಿನಲ್ಲಿ ‘ಡೇವಿಲ್’ ಹಿರೋ ದರ್ಶನ್ ಬಂಧನವಾಗಿದೆ.
ಪ್ಯಾನ್ ಇಂಡಿಯಾ ಸಿನಿಮಾಗೆ ನಡೆದಿತ್ತು ತಯಾರಿ ಇದರೊಂದಿಗೆ ನಿರ್ದೇಶಕ ಜೋಗಿ ‘ಪ್ರೇಮ್’ ಅವರು ದರ್ಶನ್ ಅವರ ಜೊತೆ ಈ ಹಿಂದೆ ‘ಕರಿಯಾ’ ಸಿನಿಮಾ ಮಾಡಿ ಚಿತ್ರರಂಗಕ್ಕೆ ಹಿಟ್ ಕೊಟ್ಟಿದ್ದರು. ಇದೀಗ ಮತ್ತೆ ಅವರೊಂದಿಗೆ 58ನೇ ಸಿನಿಮಾ ಮಾಡುವುದಾಗಿ ಇತ್ತೀಚೆಗೆ ಘೋಷಣೆ ಮಾಡಿದ್ದರು. ಇದು ಕೆವಿಎನ್ ನಿರ್ಮಾಣ ಸಂಸ್ಥೆಯು ನಿರ್ಮಿಸುತ್ತಿದೆ ಅಂತೆಲ್ಲ ಮಾಹಿತಿ ನೀಡಲಾಗಿತ್ತು. ನಿರ್ದೇಶಕ ಪ್ರೇಮ್ ಅವರು ದರ್ಶನ್ ಗಾಗಿ ಹೈಬಜೆಟ್ ಹಾಗೂ ಪ್ಯಾನ್ ಇಂಡಿಯಾ ಸಿನಿಮಾ ಮಾಡಲು ಮುಂದಾಗಿದ್ದರು. ಅದಕ್ಕಾಗಿ ಎಲ್ಲ ತಯಾರಿ ಮಾಡಿಕೊಳ್ಳುತ್ತಿದ್ದು, ಶಿರ್ಷಿಕೆ ಇನ್ನೂ ಫೈನಲ್ ಆಗಿರಲಿಲ್ಲ ಎನ್ನಲಾಗಿದೆ. ಈ ಸಿನಿಮಾ ದರ್ಶನ್ ಅವರಿ ಸಿನಿ ಕೆರಿಯರ್‌ನಲ್ಲಿನ ಅತೀ ದೊಡ್ಡ ಸಿನಿಮಾ ಆಗಲಿದೆ ಎಂದು ಸಹ ಹೇಳಲಾಗಿತ್ತು.
‘ಕಾಟೇರ’ ಜೋಡಿ ಮತ್ತೆ ಒಂದಾಗಬೇಕಿತ್ತು ‘ರಾಬರ್ಟ್’ ಹಾಗೂ ‘ಕಾಟೇರ’ ಸಿನಿಮಾ ನಿರ್ದೇಶಕ ತರುಣ್ ಸುಧೀರ್ ಅವರು ದರ್ಶನ್ ಗಾಗಿ ಮತ್ತೊಂದು ಸಿನಿಮಾ ನಿರ್ದೇಶಿಸಲು ಸಜ್ಜಾಗಿದ್ದಾರೆ. ‘ಕಾಟೇರ’ ಚಿತ್ರದ ಸಕ್ಸಸ್ ಬಳಿಕ ದರ್ಶನ್ 59ನೇ ಸಿನಿಮಾ ಮಾಡುವುದಾಗಿ ತಿಳಿಸಿದ್ದರು. ಹೀಗಾಗಿ ನಿರ್ದೇಕರಿಗೆ ದರ್ಶನ್ ಕಾಲ್‌ಶೀಟ್ ಕೊಟ್ಟಿದ್ದರು. ಇದನ್ನು ವಿ.ಹರಿಕೃಷ್ಣ್ ಹಾಗೂ ಬಿ.ಸುರೇಶ್ ನಿರ್ಮಾಣ ಸಂಸ್ಥೆಯಿಂದ ತಯಾರಿಸಲು ಪ್ಲಾನ್ ಮಾಡಿಕೊಳ್ಳಲಾಗಿದೆ. ನಿರ್ದೇಶಕರಿಂದ ಮುಂಗಡ ಪಡೆದಿದ್ದ ದರ್ಶನ್? ಈ ಮೇಲಿನ ಎಲ್ಲ ಪ್ರಾಜೆಕ್ಟ್‌ಗಳು (ಸಿನಿಮಾಗಳು) ಪೂರ್ಣಗೊಳ್ಳುತ್ತಿದ್ದಂತೆ ನಟ ದರ್ಶನ್ ನಿರ್ಮಾಪಕ ಸೂರಪ್ಪ ಬಾಬು ಸಹ ದರ್ಶನ್ 60ನೇ ಸಿನಿಮಾಗಾಗಿ ಕೈ ಜೋಡಿಸಿದ್ದರು. ದರ್ಶನ್‌ಗೆ ಸೂರಪ್ಪ ಬಾಬು ಅವರು ಸಹ ಮುಂಗಡ ಕೊಟ್ಟಿದ್ದಾರೆ ಎಂದು ಮೂಲಗಳು ಮಾಹಿತಿ ನೀಡಿವೆ. ಸದ್ಯ ಅವರು ಸಹ ದರ್ಶನ್ ಕಾಲ್‌ಶೀಟ್‌ಗಾಗಿ ಕಾಯುತ್ತಿದ್ದರು. ಭವಿಷ್ಯದಲ್ಲಿ ದರ್ಶನ್ ಸಿನಿಮಾ ನೋಡ್ತಾರಾ ಜನ? ಇದೆಲ್ಲ ಪ್ರಾಜೆಕ್ಟ್‌ಗಳಿಗೆ ತಯಾರಿ ಮಾಡಿಕೊಳ್ಳುತ್ತಿದ್ದ ನಿರ್ದೇಶಕರು, ನಿರ್ಮಾಪಕರು, ಚಿತ್ರತಂಡದವರಿಗೆ ದರ್ಶನ್ ಬಂಧನವು ಶಾಕ್ ನೀಡಿದೆ. ಚಿತ್ರೀಕರಣ ಆರಂಭವಾಗದ ಹೊಸ ಸಿನಿಮಾಗಳದ್ದು ಒಂದು ಕಥೆಯಾದರೆ, ಈಗಾಗಲೇ ಮುಂಗಾಡ ಕೊಟ್ಟವರು, ಚಿತ್ರೀಕರಣ ಶುರು ಮಾಡಿಕೊಂಡಿರುವ ಚಿತ್ರಗಳ ಕಥೆ ಏನು? ಒಂದು ವೇಳೆ ಭವಿಷ್ಯದಲ್ಲಿ ಆ ಸಿನಿಮಾಗಳು ಸಿದ್ಧವಾದರೂ ಲಾಭ ತಂದು ಕೊಡಲಿವೆಯಾ?, ಜನರು ನೋಡುತ್ತಾರಾ? ಎಂಬುದು ಮಾತ್ರ ಯಕ್ಷಪ್ರಶ್ನೆಯಾಗಿದೆ. ಇದಕ್ಕೆಲ್ಲ ಕಾಲವೇ ಉತ್ತರ ನೀಡಲಿದೆ. ಸಿನಿಮಾಗಳಿಗೆ ಅಡ್ಡಿ ಆಗಿದ್ದೇನು? ತನ್ನ ಪ್ರೇಯಸಿ ಪವಿತ್ರಾ ಗೌಡ ಅವರಿಗೆ ಅಶ್ಲೀಲ ವಿಡಿಯೋ, ಸಂದೇಶ ಕಳುಹಿಸಿದ್ದ ಎಂಬ ಕಾರಣಕ್ಕೆ ಚಿತ್ರದುರ್ಗ ಮೂಲದ 34 ವರ್ಷದ ರೇಣುಕಾಸ್ವಾಮಿಯನ್ನು ಕೊಲೆ ಮಾಡಿ ಮೋರೆಗೆ ಎಸೆಯಲಾಗಿದೆ. ಮೃತನ ಮೇಲೆ ಕೊಲೆಗಾರರ ಜೊತೆ ಖುದ್ದು ದರ್ಶನ್ ಸೇರಿ ಹಲ್ಲೆ ಮಾಡಿದ್ದು, ಈ ವೇಳೆ ಪವಿತ್ರಾಗೌಡ ಉಪಸ್ತಿತಿಯು ಇದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಹೀಗಾಗಿ ನಟ ದರ್ಶನ್, ಪವಿತ್ರಾ ಗೌಡ ಸೇರಿ 13 ಮಂದಿಯನ್ನು ಪೊಲೀಸರು ಬಂಧಿಸಿ ಜೈಲಿಗೆ ಸೇರಿದ್ದಾರೆ. ಈ ಘಟನೆ ದರ್ಶನ್ ಮುಂದಿನ ಸಿನಿಮಾಗಳ ಮೇಲೆ ದುಷ್ಪರಿಣಾಮ ಬೀರಿದಿದೆ