ತಳಕು ಮತ್ತು ಪರುಶುರಾಂಪುರ ಹೋಬಳಿಯಲ್ಲಿ ರೈತರಿಗೆ ಬಿಜೋಪಚಾರ ಮತ್ತು ಸುರಕ್ಷಿತ ಪೀಡೆನಾಶಕ ಬಳಕೆ ಕುರಿತು ಆಂದೋಲನಾ ಕಾರ್ಯಕ್ರಮ ಗುಣಮಟ್ಟದ ಬಿತ್ತನೆ ಬೀಜ ಬಳಸಲು ಸಲಹೆ

Vijayanagara Vani
ತಳಕು ಮತ್ತು ಪರುಶುರಾಂಪುರ ಹೋಬಳಿಯಲ್ಲಿ ರೈತರಿಗೆ ಬಿಜೋಪಚಾರ ಮತ್ತು ಸುರಕ್ಷಿತ ಪೀಡೆನಾಶಕ ಬಳಕೆ ಕುರಿತು ಆಂದೋಲನಾ ಕಾರ್ಯಕ್ರಮ ಗುಣಮಟ್ಟದ ಬಿತ್ತನೆ ಬೀಜ ಬಳಸಲು ಸಲಹೆ
ಚಿತ್ರದುರ್ಗಆ.05:
ಕೃಷಿಯಲ್ಲಿ ಗುಣಮಟ್ಟದ ಬಿತ್ತನೆ ಬೀಜದ ಮಹತ್ವವಾಗಿದ್ದು, ಗುಣಮಟ್ಟದ ಬಿತ್ತನೆ ಬೀಜ ಬಳಸಬೇಕು ಎಂದು ಬಬ್ಬೂರು ಫಾರಂನ ಜಿಲ್ಲಾ ಕೃಷಿ ತರಬೇತಿ ಕೇಂದ್ರದ ಸಹಾಯಕ ನಿರ್ದೇಶಕರು ಹಾಗೂ ಮುಖ್ಯಸ್ಥರಾದ ಆರ್.ರಜನೀಕಾಂತ ರೈತರಿಗೆ ಸಲಹೆ ನೀಡಿದರು.
ಚಳ್ಳಕೆರೆ ತಾಲ್ಲೂಕಿನ ತಳಕು ಮತ್ತು ಪರುಶುರಾಂಪುರ ಹೋಬಳಿಯ ನಾಗಗೊಂಡನಹಳ್ಳಿ ಗ್ರಾಮದಲ್ಲಿ ಬಬ್ಬೂರುಫಾರಂನ ಜಿಲ್ಲಾ ಕೃಷಿ ತರಬೇತಿ ಕೇಂದ್ರದ ವತಿಯಿಂದ ರೈತರಿಗೆ ಬಿಜೋಪಚಾರ ಮತ್ತು ಸುರಕ್ಷಿತ ಪೀಡೆನಾಶಕ ಬಳಕೆ ಕುರಿತು ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಶೇಂಗಾದ ಪ್ರಾರಂಭದ ಹಂತದಲ್ಲಿ ಬರುವ ಕೀಟ ಮತ್ತು ರೋಗಗಳ ನಿರ್ವಹಣೆಗೆ ಬೀಜೋಪಚಾರ ಅತ್ಯವಶ್ಯಕ ಎಂದು ಹೇಳಿದರು.
ಶೇಂಗಾ ಬೆಳೆಯಲ್ಲಿ ಬೇರು ಹುಳ, ಗೆದ್ದಲು ಭಾದೆ ನಿರ್ವಹಿಸಲು ಬಿತ್ತನೆಗೆ ಮೊದಲು ಕ್ಲೋರೋಪೈರಿಫಾಸ್ 15 ಮಿಲೀ/ಪ್ರತಿಕೆಜಿ ಬೀಜಕ್ಕೆ ಲೇಪಿಸಿ ಬಿತ್ತನೆ ಮಾಡಬಹುದು. ಶೇಂಗಾ ಬೆಳೆಯಲ್ಲಿ ಕತ್ತು ಕೊಳೆ ರೋಗದ ನಿರ್ವಹಣೆಗೆ ಕಾರ್ಬನ್ಡೆöÊಜಿಮ್ @ 2 ಗ್ರಾಂ/ಕೆಜಿ ಬೀಜಕ್ಕೆ ಅಥವಾ ಟ್ರೆöಕೋಡರ್ಮಾ @ 4-10 ಗ್ರಾಂ/ಪ್ರತಿಕೆಜಿ ಬೀಜಕ್ಕೆ ಹಾಕಿ ಬೀಜೋಪಚಾರ ಮಾಡಬೇಕು ಎಂದು ಹೇಳಿದರು.
ಸೂಕ್ಷಾö್ಮಣು ಜೀವಿಗಳನ್ನು ಬಳಸಿ ಬೆಳೆಗಳಲ್ಲಿ ಇಳುವರಿ ಹೆಚ್ಚಿಸಲು ಸಾರಜನಕ ಸ್ಥಿರೀಕರಿಸುವ ಜೀವಾಣುಗಳಾದ ಅಜೋಸ್ಪಿರಿಲಂ, ಅಜೊಟೊಬ್ಯಾಕ್ಟರ್‌ರನ್ನು ಏಕದಳ ಧಾನ್ಯಗಳಾದ ಭತ್ತ, ರಾಗಿ, ಗೋಧಿ, ಮುಸುಕಿನ ಜೋಳ ಹಾಗೂ ರೈಜೋಬಿಯಂವನ್ನು ಬೇಳೆಕಾಳು ಬೆಳೆಗಳಾದ ತೊಗರಿ, ಅಲಸಂದೆ, ಕಡಲೆ ಮುಂತಾದ ಬೆಳೆಗಳಲ್ಲಿ ಬೀಜೋಪಚಾರಕ್ಕೆ ಬಳಸಬಹುದು. ರಂಜಕ ಕರಗಿಸುವ ಜೀವಾಣುಗಳು ಎಲ್ಲಾ ಬೆಳೆಗಳಿಗೂ ಬಳಸಬಹುದು. ರಂಜಕ ದೊರಕಿಸಿಕೊಡುವ ಜೀವಾಣುಗಳು ಭತ್ತ, ರಾಗಿ, ಶೇಂಗಾ, ಮುಸುಕಿನ ಜೋಳ, ಈರುಳ್ಳಿ ಹಾಗೂ ಮುಂತಾದ ಬೆಳೆಗಳಿಗೆ ಉಪಯೋಗಿಸಬಹುದು ಎಂದರು.
ಕೀಟನಾಶಕಗಳನ್ನು ಮಕ್ಕಳ ಕೈಗೆ ಸಿಗದಂತೆ ಪ್ರತ್ಯೇಕ ಸ್ಥಳದಲ್ಲಿಟ್ಟು ಬೀಗ ಹಾಕಬೇಕು. ಯಾವುದೇ ಕೀಟನಾಶಕ ಬಳಸುವುದಕ್ಕೆ ಮುಂಚೆ ಜೊತೆಯಲ್ಲಿ ಕೊಟ್ಟಿರುವ ಚೀಟಿ ಓದಬೇಕು. ಸಿಂಪರಣಾ ದ್ರಾವಣದಿಂದ ರಕ್ಷಿಸಿಕೊಳ್ಳಲು ಯಾವಾಗಲೂ ಸರಿಯಾದ ಬಟ್ಟೆಗಳನ್ನು ಧರಿಸಬೇಕು. ಸೋರುವ ಅಥವಾ ಹಾನಿಯಾಗಿರುವ ಸಿಂಪರಣಾ ಯಂತ್ರ ಉಪಯೋಗಿಸಬಾರದು. ಆಲಿಕೆಯನ್ನು ಉಪಯೋಗಿಸಿ ಕೀಟನಾಶಕವನ್ನು ತುಂಬುವಾಗ ಅದು ಹೊರ ಚೆಲ್ಲದಂತೆ ನೋಡಿಕೊಳ್ಳಬೇಕು. ಕೀಟನಾಶಕ ಸಿಂಪಡಿಸಲು ತಯಾರಿಸಲಾಗಿರುವ ದ್ರಾವಣ ಮೈಗೆ ತಾಕದಂತೆ ನೋಡಿಕೊಳ್ಳಬೇಕು ಹಾಗೂ ಗಾಳಿ ಬೀಸುತ್ತಿರುವ ದಿಕ್ಕಿನಿಂದಲೇ ಕೀಟನಾಶಕ ದ್ರಾವಣ ಸಿಂಪಡಿಸಬೇಕು ಮತ್ತು ಗಾಳಿಗೆ ವಿರುದ್ಧವಾದ ದಿಕ್ಕಿನಲ್ಲಿ ಸಿಂಪಡಿಸಬಾರದು. ಕೀಟನಾಶಕ ಉಸಿರಿನೊಡನೆ ಒಳಗೆ ಹೋಗುವುದನ್ನು ತಡೆಯಲು ಯಾವಾಗಲೂ ಸೊಂಟದಿoದ ಕೆಳಮಟ್ಟದಲ್ಲಿ ಸಿಂಪಡಿಸಬೇಕು ಎಂದು ಸಲಹೆ ನೀಡಿದರು.
ಸಿಂಪರಣೆಯ ನಂತರ ಸಾಬೂನಿನಿಂದ ಸ್ನಾನ ಮಾಡಿ ಬಟ್ಟೆ ಬದಲಾಯಿಸಬೇಕು. ಆನಂತರ ಆಹಾರ ಮತ್ತು ನೀರು ಸೇವಿಸಬೇಕು. ಹಾಗೂ ಸಿಂಪರಣಾ ಸಮಯದಲ್ಲಿ ಉಪಯೋಗಿಸಿದ ಬಟ್ಟೆ ಸ್ವಚ್ಛಗೊಳಿಸಬೇಕು. ಸಿಂಪರಣಾ ಸಮಯದಲ್ಲಿ ಎಲೆ-ಅಡಿಕೆ ಜಗಿಯಬಾರದು ಮತ್ತು ಧೂಮಪಾನ ಮಾಡಬಾರದು ಮತ್ತು ತೊಂದರೆ ಉಂಟಾದಲ್ಲಿ ಸಿಂಪಡಿಸುವುದನ್ನು ನಿಲ್ಲಿಸಿ ವೈದ್ಯರ ಸಲಹೆ ಪಡೆಯಬೇಕು. ತೆರೆದ ಅಥವಾ ಅರ್ಧದಷ್ಟು ಬಳಸಿದ ಕೀಟನಾಶಕದ ಡಬ್ಬಗಳನ್ನು ಸಂಗ್ರಹಿಸಿಡಬಾರದು. ಈ ಖಾಲಿಯಾದ ಕೀಟನಾಶಕದ ಡಬ್ಬಗಳನ್ನು ಪುನಃ ಉಪಯೋಗಿಸಬಾರದು. ಖಾಲಿಯಾದ ಡಬ್ಬವನ್ನು ನಾಶಪಡಿಸಿ ಮತ್ತು ನೆಲದೊಳಗೆ ಅದನ್ನು ಹೂತು ಹಾಕಬೇಕು ಎಂದು ಹೇಳಿದರು.
ತರಬೇತಿ ನಂತರ ಶೇಂಗಾ ಬೆಳೆಯಲ್ಲಿ ಬೀಜೋಪಚಾರ ಮಾಡುವ ವಿಧಾನವನ್ನು ಪ್ರಾತ್ಯಕ್ಷಿಕೆಯ ಮೂಲಕ ತೋರಿಸಿ ಕೊಡಲಾಯಿತು.
ತಳಕು ರೈತ ಸಂಪರ್ಕ ಕೇಂದ್ರದ ಕೃಷಿ ಆಧಿಕಾರಿ ಮಂಜುನಾಥ್, ಮತ್ತು ಪರುಶುರಾಂಪುರ ಕೃಷಿ ಅಧಿಕಾರಿಯಾದ ಜೀವನ್ ಅವರು ರೈತರಿಗೆ ಪಿಎಂ ಕಿಸಾನ್ ಯೋಜನೆಯ ನೋಂದಣಿ ಮತ್ತು ಇಕೆವೈಸಿ ಕುರಿತು ಮಾಹಿತಿ ಹಾಗೂ ರೈತರ ಬೆಳೆ ಸಮೀಕ್ಷೆ ಆಪ್ ಕುರಿತು ಮಾಹಿತಿ ನೀಡಿದರು.
ಕೃಷಿ ವಿಜ್ಞಾನಕೇಂದ್ರದ ವಿಜ್ಞಾನಿ ಡಾ. ಟಿ.ರುದ್ರಮುನಿ ಅವರು ಶೇಂಗಾ, ತೊಗರಿ, ಮೆಣಸಿನಕಾಯಿ, ತೆಂಗು ಮತ್ತು ಅಡಿಕೆ ಬೆಳೆಯ ಪ್ರಮುಖ ರೋಗ ಮತ್ತು ಕೀಟಗಳ ನಿರ್ವಹಣೆ ಕುರಿತು ಮಾಹಿತಿ ನೀಡಿದರು.
ತರಬೇತಿ ಕಾರ್ಯಕ್ರಮದಲ್ಲಿ ಉಪಕೃಷಿ ನಿರ್ದೇಶಕ ಡಾ. ಪ್ರಭಾಕರ್, ಚಳ್ಳಕೆರೆ ತಾಲ್ಲೂಕಿನ ಸಹಾಯಕ ಕೃಷಿ ನಿರ್ದೇಶಕ ಅಶೋಕ್, ಕೆವಿಕೆ ಕೀಟಶಾಸ್ತçಜ್ಞ ಡಾ. ಟಿ.ರುದ್ರಮುನಿ, ತಳಕು ಕೃಷಿ ಆಧಿಕಾರಿ ಮಂಜುನಾಥ್, ಪರುಶುರಾಂಪುರ ಕೃಷಿ ಅಧಿಕಾರಿ ಜೀವನ್, ಆತ್ಮಯೋಜನೆ ಮತ್ತು ಕೃಷಿ ಸಂಜೀವಿನಿ ಸಿಬ್ಬಂದಿಯವರು ಇದ್ದರು.
WhatsApp Group Join Now
Telegram Group Join Now
Share This Article
error: Content is protected !!