Ad image

ಅಗ್ನಿವಿರ ಸೇನಾ ನೇಮಕಾತಿ; ಆನ್‌ಲೈನ್ ನೋಂದಣಿ ಆರಂಭ

Vijayanagara Vani
ಬೆಳಗಾವಿ, ಮಾ.22: ಸೇನಾ ನೇಮಕಾತಿ ಕಚೇರಿ ಬೆಂಗಳೂರು ಹಾಗೂ ಬೆಳಗಾವಿ ವಲಯದಿಂದ ಅಗ್ನಿವೀರ ಭೂಸೇನೆಯಲ್ಲಿ ನೇಮಕಾತಿಗೆ ಆನ್‌ಲೈನ್ ನೋಂದಣಿ ಆರಂಭಗೊಂಡಿದೆ.
ಬೆಳಗಾವಿ, ಬೀದ‌ರ್, ಕಲುಬುರಗಿ, ಕೊಪ್ಪಳ, ರಾಯಚೂರು ಹಾಗೂ ಯಾದಗಿರಿ ಜಿಲ್ಲೆಗಳ ಅಭ್ಯರ್ಥಿಗಳು ನೋಂದಣಿ ಮಾಡಿಸಬಹುದು. ಅಗ್ನಿರ್ವೀ ಜನರಲ್ ಡ್ಯೂಟಿ, ಅಗ್ನಿರ್ವೀ ಟೆಕ್ನಿಕಲ್, ಅಗ್ನಿವೀರ್, ಟ್ರೇಡ್‌ಮನ್ ಹುದ್ದೆಗಳಿಗೆ 10ನೇ ತರಗತಿಯಲ್ಲಿ ಉತ್ತೀರ್ಣರಾಗಿರಬೇಕು.
ಅಗ್ನಿವೀರ್, ಟ್ರೇಡ್‌ಮನ್ ಹುದ್ದೆಗೆ 8ನೇ ತರಗತಿ ಪಾಸ್ ಆಗಿರಬೇಕು. ಅಗ್ನಿವೀರ್ ಕ್ಲರ್ಕ್, ಸ್ಟೋರ್‌ಕೀಪ‌ರ್ ಟೆಕ್ನಿಕಲ್ ವಿಭಾಗಗಳಿಗೆ ನೇಮಕಾತಿ ನಡೆಯಲಿದೆ. ವಯೋಮಿತಿ, ಶೈಕ್ಷಣಿಕ ಅರ್ಹತೆ ಮತ್ತು ಇತರೆ ಮಾಹಿತಿಗಾಗಿ ವೆಬ್‌ಸೈಟ್ ಅಧಿಕೃತ ವೆಬ್ ಸೈಟ್ ವೀಕ್ಷಿಸಬಹುದು.
ಸೇವೆಗೆ ಸೇರಲು ಬಯಸುವವರು ಏಪ್ರಿಲ್ 10ರೊಳಗೆ ಭಾರತೀಯ ಸೇನೆಗೆ www.joinindianarmy.nic.in ವೆಬ್‌ಸೈಟಿನಲ್ಲಿ ನೋಂದಣಿ ಮಾಡಿಸಿಕೊಳ್ಳಬಹುದು ಎಂದು ನೇಮಕಾತಿ ವಿಭಾಗದ ಕರ್ನಲ್ ಎ.ಕೆ. ಉಪಾಧ್ಯಾಯ ತಿಳಿಸಿದ್ದಾರೆ.

Share This Article
error: Content is protected !!
";