Ad image

ಕೃಷಿ ಇಲಾಖೆ; ಬೆಳೆ ವಿಮೆ ನೋಂದಣಿಗೆ ಆಹ್ವಾನ

Vijayanagara Vani
ಕೃಷಿ ಇಲಾಖೆ; ಬೆಳೆ ವಿಮೆ ನೋಂದಣಿಗೆ ಆಹ್ವಾನ
ಬಳ್ಳಾರಿ,ಡಿ.12
ಪ್ರಸ್ತಕ ಸಾಲಿನ ಹಿಂಗಾರು ಹಾಗೂ ಬೇಸಿಗೆ ಹಂಗಾಮಿಗೆ ಕರ್ನಾಟಕ ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲ್ ಬಿಮಾ (ವಿಮಾ) ಯೋಜನೆಯಡಿ ರೈತರು ತಮ್ಮ ಕೃಷಿ ಬೆಳೆಗಳಿಗೆ ವಿಮೆ ನೋಂದಣಿ ಮಾಡಿಕೊಳ್ಳಬೇಕು.
ರೈತರಿಗೆ ನೈಸರ್ಗಿಕ ಪ್ರಕೃತಿ ವಿಕೋಪಗಳಿಂದಾಗಿ ಬೆಳೆ ಹಾನಿಯಾದರೆ ವಿಮಾ ಯೋಜನೆಯಿಂದ ರೈತರಿಗೆ ಬಹಳಷ್ಟು ಅನುಕೂಲವಾಗಲಿದೆ ಎಂದು ಜಂಟಿ ಕೃಷಿ ನಿರ್ದೇಶಕ ಸೋಮಸುಂದರ್ ಅವರು ತಿಳಿಸಿದ್ದಾರೆ.
ನೋಂದಣಿ: ಜೋಳ, ಮುಸುಕಿನ ಜೋಳ, ಸೂರ್ಯಕಾಂತಿ, ಕುಸುಮೆ, ಬೆಳೆಗಳಿಗೆ ಡಿ.16 ಕೊನೆಯ ದಿನ. ಕಡಲೆ ಬೆಳೆಗೆ ಡಿ.31 ಕೊನೆಯ ದಿನವಾಗಿದೆ.
ಬೇಸಿಗೆ ಬೆಳೆಗಳಾದ ಭತ್ತ, ನೆಲಗಡಲೆ, ಸೂರ್ಯಕಾಂತಿ, ಈರುಳ್ಳಿ ಬೆಳೆಗಳಿಗೆ 2025ರ ಫೆ.28 ಕೊನೆಯ ದಿನವಾಗಿದೆ.
ಬೆಳೆಗಳ ವಿಮೆ ನೋಂದಣಿಗೆ ತಾಲ್ಲೂಕು, ಹೋಬಳಿ, ಗ್ರಾಮ ಪಂಚಾಯತಿಗಳಿಗೆ ನಿಗದಿಪಡಿಸಿದ್ದು, ನಿಗದಿತ ಘಟಕದಲ್ಲಿ ಬೆಳೆ ನೋಂದಣಿ ಮಾಡಲಾಗುವುದು. ಬೆಳೆ ವಿಮೆ ನೋಂದಣಿಗಾಗಿ ಹತ್ತಿರದ ಸಾಮಾನ್ಯ ಸೇವಾ ಕೇಂದ್ರ, ಗ್ರಾಮ ಓನ್ ಕೇಂದ್ರ, ರೈತರು ತಮ್ಮ ವ್ಯವಹಾರದ ಬ್ಯಾಂಕ್‌ಗಳಿಗೆ ಸಂಪರ್ಕಿಸಬಹುದು.
ಹೆಚ್ಚಿನ ಮಾಹಿತಿಗಾಗಿ ಹತ್ತಿರದ ರೈತ ಸಂಪರ್ಕ ಕೇಂದ್ರ ಅಥವಾ ಸಹಾಯಕ ಕೃಷಿ ನಿರ್ದೇಶಕರ ಕಚೇರಿ ಹಾಗೂ ಜಂಟಿ ಕೃಷಿ ನಿರ್ದೇಶಕರ ಕಚೇರಿಗೆ ಸಂಪರ್ಕಿಸಬಹುದು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Share This Article
error: Content is protected !!
";