Ad imageAd image

;- ಈ ದೇಶ ಕಟ್ಟುವವರು ರಾಜಕಾರಣಿಗಳಲ್ಲ, ಅಧಿಕಾರಿಗಳಲ್ಲ, ಮಠಾಧೀಶರಲ್ಲ, ಬದಲಾಗಿ ದೇಶ ಕಟ್ಟುವವರು ಕಾರ್ಮಿಕರು ಎಂದು ಎ.ಐ.ಟಿ.ಯು.ಸಿ ಕಾರ್ಯದರ್ಶಿ ಕಾಂ.ಗುಡಿಹಳ್ಳಿ ಹಾಲೇಶ್ ಹೇಳಿದರು.

Vijayanagara Vani

ಪಟ್ಟಣದ ಸರಕಾರಿ ನೌಕರರ ಸಭಾಂಗಣದಲ್ಲಿ ಬುದುವಾರ 138 ನೇ ವಿಶ್ವ ಕಾರ್ಮಿಕ ದಿನಾಚರಣೆಯ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿ, ಮಾಜಿ ಶಾಸಕರಾದ ಕಾಂ.ಪಂಪಾಪತಿಯವರು ವಿಧಾನಸೌಧದ ಅಧಿವೇಶನದಲ್ಲಿ ಕಾರ್ಮಿಕರ ದಿನಾಚರಣೆಯೆಂದು ರಜಾದಿನ ಮಾಡಿಸಿದ ಕೀರ್ತಿ ಪಂಪಾಪತಿಗೆ ಸಲ್ಲುತ್ತದೆ. ದೇಶದ ರಾಜಕಾರಣಿಗಳು ಮಠಾದೀಶರು, ದಾರಿತಪ್ಪಿದರೆ, ದೇಶಕ್ಕೇನು ನಷ್ಟವಿಲ್ಲ, ಆದರೆ ಪ್ರಜಾಪ್ರಭುತ್ವದಲ್ಲಿ ಪ್ರಜೆಗಳು ಮತದಾನ ಮಾಡುವ ಸಂದರ್ಭದಲ್ಲಿ ಯಾರ ಹತ್ತಿರ ಕೈ ಚಾಚಬಾರದು ಕೈ ಚಾಚಿದರೆ ದೇಶದ ಪ್ರಜಾಪ್ರಭುತ್ವಕ್ಕೆ ಭವಿಷ್ಯವಿಲ್ಲ.  ಹಾಗಾಗಿ ಜಾಗೃತಿಯಿಂದ ಶ್ರೇಷ್ಟವಾದ ಮತದಾನವನ್ನು ಮಾಡಬೇಕೆಂದು ಕರೆ ನೀಡಿದರು.

- Advertisement -
Ad imageAd image

ಎ.ಐ.ಕೆ.ಎಸ್ ಕಾರ್ಯದರ್ಶಿ ಕಾಂ.ಜನಾರ್ಧನ ಮಾತನಾಡಿ, ಇತಿಹಾಸವನ್ನು ಓದಿದವನು ಇತಿಹಾಸವನ್ನು ಸೃಷ್ಟಿಸಲಾರ ಕಾರ್ಮಿಕರಿಗೆ 8 ಘಂಟೆ ಕೆಲಸ ಮಾಡಬೇಕೇ ಎಂದು ಕಾರ್ಮಿಕರ ಬಂಡವಾಳ ಶಾಹಿಗಳ ವಿರುದ್ಧ ಹೋರಾಟ ಮಾಡಿದ್ದರ ಫಲವಾಗಿ 8 ತಾಸು ಕೆಲಸ ಮಾಡುವಂತಾಯಿತು. ಈ ದೇಶದಲ್ಲಿ ಕಾರ್ಮಿಕರು ೮ ಗಂಟೆಗಳ ಕಾಲ ಕೆಲಸ ಮಾಡಬೇಕೆಂದು ಹೋರಾಟ ಮಾಡಿದ್ದು, ಕಾರ್ಮಿಕರಿಗೂ ಕಾರ್ಮಿಕ ಹಕ್ಕು ಸಿಗಬೇಕೆಂದು ಮತ್ತು ಅನುದಾನಗಳ ಕಾರ್ಮಿಕರಿಗೆ ಸಿಗಬೇಕೆಂದು ಮೊಟ್ಟ ಮೊದಲನೆದಾಗಿ ಹೋರಾಟ ಮಾಡಿದ್ದು, ಎ.ಐ.ಟಿ.ಯು.ಸಿ ಸಂಘಟನೆಯಾಗಿದೆ ಎಂದು ಕಾಂ.ಜನಾರ್ಧನ್‌ರವರು ಹೇಳಿದರು.

ಎಐಎಸ್‌ಎಫ್ ತಾಲ್ಲೂಕು ಅಧ್ಯಕ್ಷ ಕಾಂ.ಹರ್ಷ ಮಾತನಾಡಿ, ಕಾರ್ಮಿಕರು ಮೊದಲು 24 ತಾಸುಗಳಲ್ಲಿ 16-17 ತಾಸುಗಳು ಬೆವರು ಸುರಿಸಬೇಕಿತ್ತು. ಆದರೆ ಸ್ವಾತಂತ್ರ್ಯ ದ ನಂತರ 8 ತಾಸಿಗೆ ಕಾನೂನು ತರಲಾಗಿತ್ತು.  ಇಂದಿನ ಸರಕಾರ 12 ತಾಸು ಕೆಲಸ ಮಾಡುವಂತೆ ಮಾಡಿದೆ. ಅಂಬೇಡ್ಕರ್‌ರವರು ಹೇಳಿದಂತೆ ಬಡವರಾಗಿ ಹುಟ್ಟುವುದು ತಪ್ಪಲ್ಲ, ಬಡವರಾಗಿ ಸಾಯುವುದು ತಪ್ಪು ಎಂದು ತಿಳಿಸಿದ್ದಾರೆ ಎಂದರು.

ಕೆ.ಎಸ್.ಆರ್.ಟಿ.ಸಿ ಸ್ಟಾಫ್ ಅಂಡ್ ವಕರ‍್ಸ್ ಮುಖಂಡ ಜೆ.ಕೊಟ್ರೇಶ್, ಸ್ಲಂಬೋರ್ಡ್ ಯೋಜನೆಯ ವ್ಯವಸ್ಥಾಪಕರು ತರುಣ್ ಇಕ್ಬಾಲ್‌ಸಿಂಗ್ ಮಾತನಾಡಿದರು.

ಈ ವೇಳೆ ಹೆಚ್.ಎಂ.ಸಂತೋಷ್, ರಮೇಶನಾಯ್ಕ, ಹಲಗಿ ಸುರೇಶ್, ಟಿ.ಬಸಮ್ಮ, ರೂಪ, ಹಗರಿಗುಡಿಹಳ್ಳಿ ಶಿವರಾಮ್, ಕೋಟ್ಯಪ್ಪ, ರಂಗಪ್ಪ, ಸುಮಂಗಲತಾಯಿ, ಬಳಿಗನೂರು ಕೊಟ್ರೇಶ್, ಬಾಷಾಸಾಬ್, ಹರ್ಷ, ಅರುಣ, ದೊಡ್ಡಬಸವರಾಜ, ದಾದಪೀರ್, ಇಂಜಿನಿಯರ್ ಮಾರುತಿ ಎಂ.ಎನ್. ಮತ್ತಿತರರು ಭಾಗವಹಿಸಿದ್ದರು.

WhatsApp Group Join Now
Telegram Group Join Now
Share This Article
error: Content is protected !!