ಚಿತ್ರದುರ್ಗಆಗಸ್ಟ್.09:
ಪ್ರವಾಸೋದ್ಯಮವನ್ನು ಇನ್ನಷ್ಟು ಮೇಲ್ದರ್ಜೆಗೇರಿಸಲು ಪ್ರಮುಖ ಪ್ರವಾಸಿ ತಾಣಗಳನ್ನು ಸಾರ್ವಜನಿಕರೇ ಗುರುತಿಸಿ, ವಿಶ್ವದರ್ಜೆಯಲ್ಲಿ ಅಭಿವೃದ್ಧಿಪಡಿಸಲು ಕೇಂದ್ರ ಪ್ರವಾಸೋದ್ಯಮ ಸಚಿವಾಲಯದಿಂದ “ದೇಕೋ ಅಪ್ನ ದೇಶ್, ಪೀಪಲ್ಸ್ ಚಾಯ್ಸ್-2024” ಎಂಬ ಕಾರ್ಯಕ್ರಮ ಪ್ರಾರಂಭಿಸಲಾಗಿದೆ.
ಈ ಕಾರ್ಯಕ್ರಮದ ಭಾಗವಾಗಿ ನಾಗರಿಕರು, ಪ್ರವಾಸಿಗರು ಆದ್ಯತೆಯ ಪ್ರವಾಸಿ ತಾಣಗಳನ್ನು ಆಯ್ಕೆ ಮಾಡಲು ಮೈ ಗೌ ವೇದಿಕೆಯಡಿ ಆನ್‌ಲೈನ್‌ನಲ್ಲಿ ಅವಕಾಶ ಕಲ್ಪಿಸಿದ್ದು, ನಾಗರಿಕರು, ಪ್ರವಾಸಿಗರು ಆದ್ಯತೆಯ ಪ್ರವಾಸಿ ತಾಣಗಳನ್ನು ಆಯ್ಕೆ ಮಾಡಲು 2024ರ ಸೆಪ್ಟೆಂಬರ್ 15 ರವರೆಗೆ ವೋಟ್ ಮಾಡುವ ಅವಕಾಶ ನೀಡಲಾಗಿದೆ.
ಪ್ರವಾಸೋದ್ಯಮ ಮೇಲ್ದರ್ಜೆಗೇರಿಸಲು ಹಾಗೂ ಎಲ್ಲ ವರ್ಗಗಳು ಅಂದರೆ, ಧಾರ್ಮಿಕ, ಸಾಂಸ್ಕೃತಿಕ, ಪಾರಂಪಾರಿಕ, ನೈಸರ್ಗಿಕ ಹಾಗೂ ವನ್ಯಜೀವಿ ಮತ್ತು ಸಾಹಸ ಚಟುವಟಿಕೆಗಳು ಹಾಗೂ ಇತರೆ ಪ್ರವಾಸಿ ತಾಣಗಳಲ್ಲಿ ಪ್ರವಾಸಿಗರ ದೃಷ್ಠಿಕೋನದಲ್ಲಿ ಗುರುತಿಸಿ ವಿಶ್ವದರ್ಜೆಯಲ್ಲಿ ಅಭಿವೃದ್ಧಿ ಪಡಿಸಲು ಕಾರ್ಯಕ್ರಮ ಪ್ರಾರಂಭಿಸಲಾಗಿದ್ದು, ಚಿತ್ರದುರ್ಗ ಜಿಲ್ಲೆಯ ಚಿತ್ರದುರ್ಗ ಕೋಟೆ, ಹುಚ್ಚಂಗಿ ಯಲ್ಲಮ್ಮ ದೇವಸ್ಥಾನ, ಚಂದ್ರವಳ್ಳಿ ಗುಹೆ, ಆಡುಮಲ್ಲೇಶ್ವರ, ಜೋಗಿಮಟ್ಟಿ, ವಾಣಿವಿಲಾಸ ಸಾಗರ, ಹಾಲುರಾಮೇಶ್ವರ, ಜಾನಕಲ್, ದೊಡ್ಡಹೊಟ್ಟೆ ರಂಗನಾಥಸ್ವಾಮಿ ದೇಗುಲ ಸೇರಿದಂತೆ ಇತ್ಯಾದಿ ಚಿತ್ರದುರ್ಗ ಜಿಲ್ಲೆಯ ಪ್ರವಾಸಿ ತಾಣಗಳು ಈ ಕ್ಯಾಂಪೇನ್‌ನಲ್ಲಿ ಆಯ್ಕೆಗೊಳ್ಳುವಂತೆ ವ್ಯಾಪಕ ಪ್ರಚಾರಗೊಳಿಸಲು ಕ್ಯಾಂಪೇನ್ ಲಿಂಕ್ https://innovateindia.mygov.in/dekho-apna-desh/ ನಲ್ಲಿ ಲಾಗಿನ್ ಮಾಡಿ ವೋಟಿಂಗ್ ಮಾಡುವಂತೆ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ಟಿ.ವೆಂಕಟೇಶ್ ಅವರು ಮನವಿ ಮಾಡಿದ್ದಾರೆ.