Ad image

ಕೃಷಿ ವಿವಿಯಲ್ಲಿ ಅಂಬೇಡ್ಕರ್ ಮತ್ತು ಬಸವಣ್ಣನವರ ಜಯಂತಿ ಕಾರ್ಯಕ್ರಮಕ್ಕೆ ಚಾಲನೆ, ವಿವಿಯ ವಿದ್ಯಾರ್ಥಿಗಳು, ಸಿಬ್ಬಂದಿಗಳು ಭಾಗಿ ವಿವಿಗಳು ಘನತೆ ಮತ್ತು ಸ್ವಾಭಿಮಾನ ಕಟ್ಟಿಕೊಡುವ ಕೇಂದ್ರಗಳಲ್ಲಿ: ಶ್ರೀಜ್ಞಾನ ಪ್ರಕಾಶ ಸ್ವಾಮೀಜಿ

Vijayanagara Vani
ಕೃಷಿ ವಿವಿಯಲ್ಲಿ ಅಂಬೇಡ್ಕರ್ ಮತ್ತು ಬಸವಣ್ಣನವರ ಜಯಂತಿ ಕಾರ್ಯಕ್ರಮಕ್ಕೆ ಚಾಲನೆ, ವಿವಿಯ ವಿದ್ಯಾರ್ಥಿಗಳು, ಸಿಬ್ಬಂದಿಗಳು ಭಾಗಿ   ವಿವಿಗಳು ಘನತೆ ಮತ್ತು ಸ್ವಾಭಿಮಾನ ಕಟ್ಟಿಕೊಡುವ ಕೇಂದ್ರಗಳಲ್ಲಿ: ಶ್ರೀಜ್ಞಾನ ಪ್ರಕಾಶ ಸ್ವಾಮೀಜಿ
ರಾಯಚೂರು,ಜು.0 2ವಿಶ್ವವಿದ್ಯಾಲಯಗಳು ವಿದ್ಯಾರ್ಥಿಗಳಿಗೆ ಘನತೆ ಮತ್ತು ಸ್ವಾಭಿಮಾನ ಕಟ್ಟಿಕೊಡುವ ಕೇಂದ್ರಗಳಾಗಬೇಕೆ ಹೊರತು ಜಾತಿಯತೆಯನ್ನು ಬಿತ್ತುವಂತಾಗಬಾರದು, ರಾಯಚೂರು ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯವು ಜಯಂತ್ಯೋತ್ಸವನ್ನು ಅರ್ಥಪೂರ್ಣವಾಗಿ ಆಚರಿಸುತ್ತಿರುವುದು ಸಂತಸದ ವಿಷಯವಾಗಿದೆಂದು ಮೈಸೂರಿನ ಶ್ರೀ ಉರಿಲಿಂಗಪೆದ್ದಿ ಶಾಖಾ ಮಠದ ಪರಮ ಪೂಜ್ಯ ಶ್ರೀ ಜ್ಞಾನ ಪ್ರಕಾಶ ಸ್ವಾಮೀಜಿ ಅವರು ಹೇಳಿದರು.
ಅವರು ಜು.02ರ ಮಂಗಳವಾರ ದಂದು ನಗರದ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ನಿರ್ದೇಶನಾಲಯ, ಕೃ.ವಿ.ವಿ. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ನೌಕರರ ಸಂಘ, ಕೃ.ವಿ.ವಿ. ಡಾ. ಬಿ.ಆರ್. ಅಂಬೇಡ್ಕರ್ ವಿದ್ಯಾರ್ಥಿ ಸಂಘದವರ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಮತ್ತು ಜಗಜ್ಯೋತಿ ಬಸವಣ್ಣ ಅವರ ಜಯಂತ್ಯೋತ್ಸವದ ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಮಾತನಾಡಿದರು.
ನಮ್ಮ ದೇಶದಲ್ಲಿ ಬುದ್ಧ, ಬಸವ ಮತ್ತು ಅಂಬೇಡ್ಕರ್ ಅವರುಗಳು ಕ್ರಮವಾಗಿ ಶಾಂತಿಯದೀಪ, ಕ್ರಾಂತಿಯದೀಪ ಮತ್ತು ಜ್ಞಾನದೀಪಗಳಾಗಿ ಹೋದರು. ಅವರೆಲ್ಲರ ಆದರ್ಶ ಗುಣಗಳನ್ನು ನಾವುಗಳು ಪಾಲಿಸಿ, ಅನುಸರಿಸಿ ಭವ್ಯ ಭಾರತದ ಆಶಯವಾದ ‘ಸಂಪತ್ತಿನ ಸಮಾನ ಧಾನ’ವನ್ನು ಈಡೇರಿಸುವತ್ತ ಮುನ್ನಡೆಯಬೇಕಾಗಿದೆ. ಅಂಬೇಡ್ಕರ್ ರವರನ್ನು ಪುತ್ಥಳಿಯಲ್ಲಿ ನೋಡದೇ ಪೆನ್ನುಗಳಲ್ಲಿ ನೋಡಬೇಕು, ಮೆರವಣಿಗೆಯಲ್ಲಿ ಆಚರಿಸದೇ ಬರವಣಿಗೆಯಲ್ಲಿ ಆಚರಿಸಬೇಕೆಂದು ನೆರದಿದ್ದ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಜಗತ್ತಿನ ಮೊಟ್ಟ ಮೊದಲಿನ ಸಂವಿಧಾನವನ್ನು ‘ಅನುಭವ ಮಂಟಪ’ದ ಮೂಲಕ ಬಸವಣ್ಣನವರು ಪರಿಚಯಿಸಿ ಸಮಾನತೆಯ ಹಕ್ಕನ್ನು ಮಂಡಿಸಿದವರಲ್ಲಿ ಪ್ರಥಮರು. ಹೀಗೆ ಸಮಾನತೆಯ ಇತಿಹಾಸವುಳ್ಳ ಭವ್ಯ ಭಾರತವನ್ನು ಇಂದಿನ ಪೀಳಿಗೆಯು ಅರ್ಥೈಸಿಕೊಂಡು ಸನ್ಮಾರ್ಗದಲ್ಲಿ ಸಾಗಿ ಒಳ್ಳೆಯ ಸಮಾಜವನ್ನು ನಿರ್ಮಿಸಬೇಕಾಗಿದೆ. ಈ ನಿಟ್ಟಿನಲ್ಲಿ ಕೃಷಿಯನ್ನು ಅಭ್ಯಸಿಸುವ ವಿದ್ಯಾರ್ಥಿಗಳು ಶಿಕ್ಷಣ ಮತ್ತು ಸಂಶೋಧನೆಯನ್ನು ಕೈಗೊಂಡು ಸಮಾನತೆಯ ಸಮಾಜವನ್ನು ನಿರ್ಮಿಸಲು ತಮ್ಮನ್ನು ತೊಡಗಿಸಿಕೊಳ್ಳಬೇಕೆಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಿಶ್ವವಿದ್ಯಾಲಯದ ಕುಲಪತಿಗಳಾದ ಡಾ.ಎಂ.ಹನುಮAತಪ್ಪ ಅವರು ವಹಿಸಿ, ಮಾತನಾಡಿ, ಬಸವಣ್ಣ ಮತ್ತು ಅಂಬೇಡ್ಕರ್ ಅವರ ಜೀವನ, ಬದುಕು ನಮಗೆಲ್ಲ ಪಾಠವಾಗಬೇಕು. ಪುಸ್ತಕ ಮತ್ತು ಲೇಖನಿ ನಮಗೆ ಬದುಕನ್ನು ಕಟ್ಟಿಕೊಡಬೇಕು. ನಮ್ಮ ಸಂವಿಧಾನ ಶ್ರೇಷ್ಠ ಸಂವಿಧಾನವಾಗಿದ್ದು, ಎಲ್ಲರಿಗೂ ಸಮಾನ ಅವಕಾಶವನ್ನು ನೀಡಿದೆ. ಬಸವಣ್ಣನವರ ವಿಚಾರಧಾರೆಗಳೂ ಸಹ ಸಮಾನತೆಯ ಸಾರವನ್ನೇ ಹೇಳಿವೆ. ಶಿಕ್ಷಣವನ್ನು ಹಂಚಿಕೊಳ್ಳುವ ಮತ್ತು ಅದನ್ನು ಪಸರಿಸುವ ಕೆಲಸವಾಗಬೇಕು. ವಿದ್ಯಾರ್ಥಿಗಳು ಸದ್ಯದ ಪರಿಸ್ಥಿತಿಯಲ್ಲಿ ನಿಷ್ಠೆಯಿಂದ ಓದಿ ಸಮಾನತೆಯ ಸಮಾಜವನ್ನು ನಿರ್ಮಿಸಲು ಬದ್ಧರಾಗಬೇಕೆಂದು ಕಿವಿಮಾತು ಹೇಳಿದರು.
ಇದೇ ಸಂದರ್ಭದಲ್ಲಿ ವಿಶ್ವವಿದ್ಯಾಲಯದ ಆಡಳಿತ ಮಂಡಳಿಯ ಸದಸ್ಯರುಗಳಾದ ಮಲ್ಲಿಕಾರ್ಜುನ ಡಿ, ಮಲ್ಲೇಶ ಕೊಲಿಮಿ ಅವರು ಮಾತನಾಡಿ ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಯರು ಹಾಗೂ ಇಡೀ ವಿಶ್ವವಿದ್ಯಾಲಯದ ಸಿಬ್ಬಂದಿಯೂ ಸೇರಿದಂತೆ ಉತ್ತಮ ಹಾಗೂ ಸಮಾನತೆವುಳ್ಳ ಸಮಾಜವನ್ನು ನಿರ್ಮಿಸಲು ಮುಂದಾಗಬೇಕೆAದು ತಿಳಿಸಿದರು.
ಡಾ. ಜಾಗೃತಿ ದೇಶಮಾನ್ಯ ಅವರು ಪ್ರಸ್ತಾವಿಕ ನುಡಿಯನ್ನು ಮಂಡಿಸಿದರು. ಡಾ. ಮಹಾದೇವಸ್ವಾಮಿ ಅವರು ಸ್ವಾಗತಿಸಿದರು. ವಿದ್ಯಾರ್ಥಿ ಮುಖಂಡ ಅಜಿತ್ ಅವರು ವಂದಿಸಿದರು. ವಿಶ್ವವಿದ್ಯಾಲಯದ ಎಲ್ಲ ಅಧಿಕಾರಿವೃಂದ, ಶಿಕ್ಷಕ ಮತ್ತು ಶಿಕ್ಷಕೇತರ ಸಂಘ, ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಯರು, ಕೃಷಿ ಕಾರ್ಮಿಕ ವರ್ಗ ಮುಂತಾದವರು ಜಯಂತ್ಯೋತ್ಸವದ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
Share This Article
error: Content is protected !!
";