Ad image

ಸಚಿವ ಶಿವರಾಜ್ ತಂಗಡಗಿ ಯಿಂದ ಮಹತ್ವಾಕಾಂಕ್ಷಿ ಯೋಜನೆ ಇಂದಿರಾ ಕ್ಯಾಂಟೀನ್‌ ನಿರ್ಮಾಣಕ್ಕೆ ಭೂಮಿ ಪೂಜೆ * ಹಾಗೂ ಅಭಯಸ್ತ ಕಾರ್ಯಕ್ರಮ, ಗ್ರಾಮಗಳ ಸಾರ್ವಜನಿಕರ ಅಹವಾಲು ಸ್ವೀಕಾರ

Vijayanagara Vani
ಸಚಿವ ಶಿವರಾಜ್ ತಂಗಡಗಿ ಯಿಂದ ಮಹತ್ವಾಕಾಂಕ್ಷಿ ಯೋಜನೆ ಇಂದಿರಾ ಕ್ಯಾಂಟೀನ್‌ ನಿರ್ಮಾಣಕ್ಕೆ ಭೂಮಿ ಪೂಜೆ * ಹಾಗೂ ಅಭಯಸ್ತ ಕಾರ್ಯಕ್ರಮ, ಗ್ರಾಮಗಳ ಸಾರ್ವಜನಿಕರ ಅಹವಾಲು ಸ್ವೀಕಾರ
ಕಾರಟಗಿ ಜು 12 ಶುಕ್ರವಾರ : ಕಾಂಗ್ರೇಸ್ ಪಕ್ಷದ ಮಹತ್ವಾಕಾಂಕ್ಷಿ ಯೋಜನೆಯಾದ.ಇಂದಿರಾ ಕ್ಯಾಂಟೀನ್‌ ನಿರ್ಮಾಣಕ್ಕೆ ಭೂಮಿ ಪೂಜೆಯನ್ನು ನೆರವೇರಿಸಿ ಮಾತನಾಡಿದ ಹಿಂದುಳಿದ ವರ್ಗಗಳ ಕಲ್ಯಾಣ  ಕನ್ನಡ ಮತ್ತು ಸಂಸ್ಕೃತಿ ಇಲಾಖೆ  ಸಚಿವ ಶಿವರಾಜ ತಂಗಡಗಿ ರಾಜ್ಯದಲ್ಲಿ ಎಂಎಸ್ ಎಕ್ಸೆಲ್ ಕಂಪನಿಯಿಂದ 165 ಪಟ್ಟಣ ಪಂಚಾಯತಿ,ಪುರಸಭೆ, ಹಾಗೂ 20 ಮಹಾನಗರ ಪಾಲಿಕೆ ಗೆ ಟೆಂಡರ್ ಆಗಿದೆ ನಮ್ಮ ರಾಜ್ಯದಲ್ಲಿ ನಮ್ಮ ಕೊಪ್ಪಳ ಜಿಲ್ಲೆಯಲ್ಲಿ ಕಾರಟಗಿ, ಕುಕನೂರು, ಭಾಗ್ಯನಗರ, ಕನಕಗಿರಿ ಈ ಐದು ತಾಲೂಕುಗಳಲ್ಲಿ ಶೀಘ್ರದಲ್ಲಿ  ನಿರ್ಮಿಸಲಾಗುವದು. 
ಈ ಇಂದಿರಾ ಕ್ಯಾಂಟೀನ್ ಮಾಡುವ ಉದ್ದೇಶ ಗ್ರಾಮೀಣ ಪ್ರದೇಶದಿಂದ  ನಮ್ಮ ತಾಲೂಕ ಕೇಂದ್ರಕ್ಕೆ ಆಗಮಿಸುವಂತಹ  ಸಾಮಾನ್ಯರಿಗೆ,ಬಡವರಿಗೆ, ರೈತರಿಗೆ, ಕೂಲಿ ಕಾರ್ಮಿಕರಿಗೆ,ಮಹಿಳೆಯರಿಗೆ. ವಿದ್ಯಾರ್ಥಿ ವಿದ್ಯಾರ್ಥಿನಿಯರಿಗೆ ಯುವ ಜನರಿಗೆ ಅತ್ಯಂತ ಕಡಿಮೆ ದರದಲ್ಲಿ ಊಟ ಉಪಹಾರ ಕಲ್ಪಿಸಬೇಕು ಎನ್ನುವ ಉದ್ದೇಶದಿಂದ ಮತ್ತು ನಮ್ಮ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕನಸಾಗಿದೆ, ಹೋಟೆಲ್ ತಿಂಡಿ ತಿನಿಸುಗಳು ಬಹಳ ದುಬಾರಿಯದ ಕಾರಣ. ಆದಕಾರಣ ಈ ಇಂದಿರಾ ಕ್ಯಾಂಟೀನ್ ಯೋಜನೆಯನ್ನು ರಾಜ್ಯಾದ್ಯಂತ ನಿರ್ಮಿಸಲಾಗಿದೆ, ಒಂದು ಇಂದಿರಾ ಕ್ಯಾಂಟೀನ್ ನಿರ್ಮಾಣಕ್ಕೆ 87 ಲಕ್ಷ ವೆಚ್ಚವಾಗಲಿದ್ದು ಎಂಎಸ್ ಎಕ್ಸೆಲ್ ಕಂಪನಿಯು ಇದರ ವೆಚ್ಚವನ್ನು ಬರಿಸಲಿದೆ. ಈ ಒಂದು ಇಂದಿರಾ ಕ್ಯಾಂಟೀನ್ ನಿರ್ಮಾಣವನ್ನು ಮೂರು ತಿಂಗಳೊಳಗೆ ಪೂರ್ಣಗೊಳಿಸಲಾಗುವುದು.
 ಇದೇ ಸಂದರ್ಭದಲ್ಲಿ ಪತ್ರಕರ್ತರ ಪ್ರಶ್ನೆಗಳಿಗೆ ಉತ್ತರಿಸಿದ ಸಚಿವರು ಘನ ತ್ಯಾಜ್ಯ ವಿಲೇವಾರಿ  ಘಟಕವನ್ನು ಆದಷ್ಟು ಶೀಘ್ರದಲ್ಲಿಯೇ ಎರಡು ಖಾಸಗಿ ಜಮೀನನ್ನು ಒಂದು ಸರ್ಕಾರಿ ಜಮೀನಿನನ್ನು ಪಡೆದು  ತಾಲೂಕಿನಲ್ಲಿ ನಿವೇಶನ ಇಲ್ಲದ ಬಡ ಕುಟುಂಬಗಳಿಗೆ  ನಿವೇಶನ ಹಾಗೂ ವಸತಿ ಶಾಲೆಗಳನ್ನು ನೀಡಲಾಗುವುದು. ಮೂರು ತಿಂಗಳ ಒಳಗೆ  ಇಂದಿರಾ ಕ್ಯಾಂಟೀನ್ ನಿರ್ಮಾಣಕ್ಕೆ ಅಧಿಕಾರಿಗಳಿಗೆ ಸೂಚಿಸುತ್ತೇನೆ ಎಂದು  ತಿಳಿಸಿದರು. 
ಪೂಜೆಯ ಬಳಿಕ “ಅಭಯಹಸ್ತ” ನಿಮ್ಮ ಬಳಿಗೆ ನಾವು ಅಭಿಯಾನದಡಿ ಕ್ಷೇತ್ರದ ಹುಳ್ಳಿಹಾಳ, ಹುಳ್ಳಿಹಾಳ ಕ್ಯಾಂಪ್‌ಗೆ ಬೆ.  ಭೇಟಿ ನೀಡಿ ಸಾರ್ವಜನಿಕರಿಂದ ಅಹವಾಲು ಸ್ವೀಕಾರಿಸಿದರು    ತೊಂಡಿಹಾಳ ಗ್ರಾಮ. ಹಾಗೂ (28 & 29ನೇಕಾಲುವೆ. ದುಂಡಗಿ).  ಹಗೇದಾಳ ಗ್ರಾಮಕ್ಕೆ ಬೇಟಿ ಎಲ್ಲ ಗ್ರಾಮಗಳಿಗೆ ಭೇಟಿ ನೀಡಿ ಸಾರ್ವಜನಿಕರ ಅಹವಾಲನ್ನು ಸ್ವೀಕರಿಸಿದರು.
 ಈ ಸಂದರ್ಭದಲ್ಲಿ ರೈತ ಮುಖಂಡ ಮರಿಯಪ್ಪ ಸಾಲೋಣಿ ಪುರಸಭೆ ಸದಸ್ಯರಾದ , ಹಿರೇಬಸಪ್ಪ ಸಜ್ಜನ್‌,ಎಚ್.ಈಶಪ್ಪ..ಸೋಮಶೇಖರ ಭೇರ್ಗಿ, ದೊಡ್ಡಬಸವ ಬೂದಿ,ರಾಮಣ್ಣ ಮಂಜುನಾಥ ಮೇಗೂರು, , ನಾಮನಿರ್ದೇಶಿತ ಸದಸ್ಯ ಬಿ.ಸಿದ್ದಪ್ಪ,ಹನುಮಂತರೆಡ್ಡಿ ವೀರೇಶ ಗದ್ದಿ ಮುದುಗಲ್. ಮುಖ್ಯಾಧಿಕಾರಿ ಸುರೇಶ್‌ಶೆಟ್ಟಿ.ತಾಪಂ ಇಒ ಲಕ್ಷ್ಮೀದೇವಿ,
ತಹಸೀಲ್ದಾರ್‌ ಎಂ.ಕುಮಾರಸ್ವಾಮಿ, ಕಂದಾಯ ನಿರೀಕ್ಷಕಿ ಸಂಗಮ್ಮ ಹಿರೇಮಠ, ಜಗದೀಶ್ ಎಂ ಸೇರಿದಂತೆ ಮತ್ತಿತರರು ಇದ್ದರು

Share This Article
error: Content is protected !!
";