Ad image

ತೋಟಗಾರಿಕೆ ಇಲಾಖೆಯಿಂದ ಅರ್ಜಿ ಆಹ್ವಾನ

Vijayanagara Vani
ತೋಟಗಾರಿಕೆ ಇಲಾಖೆಯಿಂದ ಅರ್ಜಿ ಆಹ್ವಾನ
ರಾಯಚೂರು ಜೂನ್ 19  2025-26ನೇ ಸಾಲಿನ ತೋಟಗಾರಿಕೆ ಇಲಾಖೆ (ಜಿ.ಪಂ) ದೇವದುರ್ಗ ತಾಲ್ಲೂಕ ವತಿಯಿಂದ ವಿವಿಧ ಯೋಜನೆಗಳಡಿ ಸಹಾಯಧನ ಪಡೆಯಲು ಆಸಕ್ತ ರೈತರಿಂದ ಅರ್ಜಿ ಆಹ್ವಾನಿಸಲಾಗಿದೆ ಎಂದು ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರಾದ ನವೀನಕುಮಾರ ತಿಳಿಸಿದ್ದಾರೆ.
ರಾಷ್ಟ್ರೀಯ ತೋಟಗಾರಿಕೆ ಮಿಷನ್ ಯೋಜನೆಯಡಿ ವಿವಿಧ ಘಟಕಗಳಾದ ಹೊಸ ಪ್ರದೇಶ ವಿಸ್ತರಣೆಯಲ್ಲಿ ಬಾಳೆ, ದಾಳಿಂಬೆ, ಹೂವು ಮತ್ತು ಹೈಬ್ರಿಡ್ ತರಕಾರಿ ಹಾಗೂ ವೈಯಕ್ತಿಕ ಕೃಷಿಹೊಂಡ, ನೀರು ಸಂಗ್ರಹಣ ಘಟಕ (4500,6000.ಘ.ಮೀ ಸಾಮರ್ಥ್ಯ) ಪ್ಲಾಸ್ಟಿಕ್ ಹೊದಿಕೆ, ವೀಡ್ ಮ್ಯಾಟ್. ಯಾಂತ್ರೀಕರಣ ಮಿನಿ ಟ್ರ‍್ಯಾಕ್ಟರ್- 20 ಹೆಚ್.ಪಿ, ಪ್ಯಾಕಹೌಸ್, ಶೀಥಲ ಗೃಹ, ಸಮಗ್ರ ಕೀಟ /ಪೋಷಕಾಂಶ ನಿರ್ವಾಹಣೆ, ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆಯಡಿ ಹನಿ ನೀರಾವರಿ ಪದ್ಧತಿ ಅಳವಡಿಸಲು ಹಾಗೂ ತಾಳೆ ಬೆಳೆ ಪ್ರದೇಶ ವಿಸ್ತರಣೆಗೆ ಸಹಾಯಧನ ಪಡೆಯಲು ಅರ್ಜಿ ಸಲ್ಲಿಸಬಹುದು.
ರೈತರು ಸಂಬAಧಪಟ್ಟ ಹೋಬಳಿ ಅಧಿಕಾರಿಗಳು ಅಥವಾ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು (ಜಿ.ಪಂ) ದೇವದುರ್ಗ ಕಚೇರಿಗೆ ಭೇಟಿ ನೀಡಿ ಜೂನ್ 30ರೊಳಗೆ ಅಗತ್ಯ ದಾಖಲೆಗಳಾದ ಪಹಣಿ, ಭಾವಚಿತ್ರ, ಆಧಾರ್ ಕಾರ್ಡ್, ಬ್ಯಾಂಕ್ ಪಾಸಬುಕ್ ಜೆರಾಕ್ಸ್, ಜಾತಿ ಪ್ರಮಾಣ ಪತ್ರ, ಗಣಕೀಕೃತ ಬೆಳೆ ಧೃಢೀಕರಣ, ಚೆಕ್‌ಬಂದಿ ಇತ್ಯಾದಿಗಳನ್ನು ಅರ್ಜಿಯೊಂದಿಗೆ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗಾಗಿ ಸಹಾಯಕ ತೋಟಗಾರಿಕೆ ಅಧಿಕಾರಿ ದೇವದುರ್ಗಾ -9686246128, ಅರಕೇರಾ-9535121367, ಗಬ್ಬೂರು -9901251996, ಜಾಲಹಳ್ಳಿ -7996717257, ರೈತ ಸಂಪರ್ಕ ಕೇಂದ್ರಗಳಿಗೆ ಸಂಪರ್ಕಿಸಬಹುದು ಎಂದು ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Share This Article
error: Content is protected !!
";