2ನೇ ದಿನಕ್ಕೆ ಕಾಲಿಟ್ಟ ಅಂಗನವಾಡಿ ನೌಕರರ ಪ್ರತಿಭಟನೆ:

Vijayanagara Vani
2ನೇ ದಿನಕ್ಕೆ ಕಾಲಿಟ್ಟ ಅಂಗನವಾಡಿ ನೌಕರರ ಪ್ರತಿಭಟನೆ:

ಕಲಬುರ್ಗಿ ವಿಭಾಗದ ಶಾಲಾ ಶಿಕ್ಷಣ ಇಲಾಖೆ ಹೊರಡಿಸಿರುವ ಸುತ್ತೋಲೆಯನ್ನು ಕೂಡಲೆ ಹಿಂಪಡೆಯಬೇಕು, ಐ.ಸಿ.ಡಿ.ಎಸ್. ಕೆಲಸವನ್ನು ಖಾಯಂ ಆಗಿ ಮುಚ್ಚಿಸುವ ಕೆಲಸವನ್ನು ಶಿಕ್ಷಣ ಇಲಾಖೆ ತಕ್ಷಣ ನಿಲ್ಲಿಸಲು ಒತ್ತಾಯಿಸಿ ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘ (ಸಿಐಟಿಯು) ತಾಲೂಕು ಘಟಕದ ಪದಾಧಿಕಾರಿಗಳು ನಗರದ ಹಳೇ ತಾಲೂಕು ಕಚೇರಿ ಆವರಣದಲ್ಲಿ ೨ನೇ ದಿನದ ಪ್ರತಿಭಟನೆ ಬುಧವಾರ ನಡೆಸಿದರು.
ತಾ.ಅಧ್ಯಕ್ಷೆ ಉಮಾದೇವಿ, ಕಾರ್ಯದರ್ಶಿ ಶಕುಂತಲ, ಪದಾಧಿಕಾರಿಗಳಾದ ಕೆ.ನೀಲಾವತಿ, ಈರಮ್ಮ, ನೀಲಮ್ಮ, ದ್ರಾಕ್ಷಾಯಿಣ, ಗಂಗಮ್ಮ, ಹೆಚ್.ಕೆ.ಯಲ್ಲಮ್ಮ, ಬೇಬಬಾಯಿ, ಕೆ.ದುರ್ಗಾ ಭವಾನಿ ಮತ್ತು ವಿವಿಧ ಗ್ರಾಮಗಳ ಅಂಗನವಾಡಿ ಕಾರ್ಯಕರ್ತೆಯರು ಇದ್ದರು.

WhatsApp Group Join Now
Telegram Group Join Now
Share This Article
error: Content is protected !!