ಸಿರುಗುಪ್ಪ : ಸೆ.22 ರಿಂದ ಹಿಂದುಳಿದ ವರ್ಗಗಳ ಆಯೋಗ ಶೈಕ್ಷಣಿಕ ಆರ್ಥಿಕ ಮತ್ತು ಸಾಮಾಜಿಕ ಜಾತಿಗಣತಿ ನಡೆಸುತ್ತಿದ್ದು, ಗಣತಿದಾರರು ನಮ್ಮ ಸಮಾಜದ ಪ್ರತಿ ಮನೆ ಮನೆಗೆ ಬಂದು ಮಾಹಿತಿ ಕೇಳಿದಾಗ ಎಲ್ಲರೂ ಕಡ್ಡಾಯವಾಗಿ ಧರ್ಮದ ಕಾಲಂ ನಲ್ಲಿ ಹಿಂದೂ ಜಾತಿ ಗಣಿತಿ ಕ್ರಮ ಸಂಖ್ಯೆ A- 0903 ಜಾತಿ ಮಡಿವಾಳ ಎಂದೇ ನಮೂದಿಸಬೇಕು ಎಂದು ತೆಕ್ಕಲಕೋಟೆ ಮಡಿವಾಳರ ಯುವಕರ ಸಂಘದ. ಅಧ್ಯಕ್ಷ ಶರಣು ಮಡಿವಾಳ ತಿಳಿಸಿದ್ದರು, ಮಡಿವಾಳ ಸಮುದಾಯವು ಅಗಸ, ಪರೀಟ, ಚಾಕಲಿ, ಧೋಬಿ, ರಜಕ, ಎಂಬ ಹೆಸರುಗಳಿಂದ ಗುರುತಿಸಿಕೊಂಡಿದ್ದು, ನಾಳೆಯಿಂದ ನಡೆಯಲಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯಲ್ಲಿ ಮಡಿವಾಳ ಎಂದೇ ನಮೂದಿಸಬೇಕು ಎಂದು ಮನವಿ ಮಾಡಿದ್ದಾರೆ