ಬಳ್ಳಾರಿ,ಜು.24
ಸಿರುಗುಪ್ಪದ ಕ್ಷೇತ್ರ ಸಂಪನ್ಮೂಲ ಕೇಂದ್ರದಲ್ಲಿ ರಾಜ್ಯ ಯೋಜನಾ ಕಚೇರಿ ವತಿಯಿಂದ ಸಮನ್ವಯ ಶಿಕ್ಷಣ ಕಾರ್ಯತಂತ್ರದಡಿ 2025-26ನೇ ಸಾಲಿಗೆ ಸಿರುಗುಪ್ಪದ ಎಸ್‌ಆರ್‌ಪಿ ಕೇಂದ್ರದಲ್ಲಿ ಖಾಲಿ ಇರುವ ಫಿಜಿಯೋಥೆರಪಿಸ್ಟ್ ಮತ್ತು ಸಹಾಯಕರ ಹುದ್ದೆಗಳ ನೇಮಕಕ್ಕೆ ಅರ್ಜಿ ಆಹ್ವಾನಿಸಲಾಗಿದೆ.
ವಿದ್ಯಾರ್ಹತೆ: ಫಿಜಿಯೋಥೆರಪಿಸ್ಟ್ ಹುದ್ದೆಗೆ ಬಿಪಿಟಿ/ಡಿಪಿಟಿ ಮತ್ತು ಸಹಾಯಕರ ಹುದ್ದೆಗೆ 7ನೇ ತರಗತಿ ಉತ್ತೀರ್ಣರಾಗಿರಬೇಕು.
ಅರ್ಜಿಯನ್ನು ಜು.26 ರೊಳಗಾಗಿ ಸಿರುಗುಪ್ಪ ಕ್ಷೇತ್ರ ಸಂಪನ್ಮೂಲ ಕೇಂದ್ರ ಕಚೇರಿಯಲ್ಲಿ ಸಲ್ಲಿಸಬೇಕು ಎಂದು ಸಿರುಗುಪ್ಪ ಕ್ಷೇತ್ರ ಸಮನ್ವಯಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.