ಐಟಿಐ ಪ್ರವೇಶಕ್ಕಾಗಿ ಅರ್ಜಿ ಆಹ್ವಾನ

Vijayanagara Vani
ಐಟಿಐ ಪ್ರವೇಶಕ್ಕಾಗಿ ಅರ್ಜಿ ಆಹ್ವಾನ

ಹೊಸಪೇಟೆ (ವಿಜಯನಗರ) ಮೇ 18 (ಕ.ವಾ): ಹೊಸಪೇಟೆಯ ಜಂಬುನಾಥ ಹಳ್ಳಿ ರಸ್ತೆಯಲ್ಲಿರುವ ಸರಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ 2024-25ನೇ ಸಾಲಿನ ಐ.ಟಿ.ಐ ಪ್ರವೇಶಕ್ಕಾಗಿ ಆನ್‌ಲೈನ್‌ನ ಮೂಲಕ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಮೇ 20ರಿಂದ ಜೂನ್ 03ರವರೆಗೆ ಇಲಾಖೆಯ ವೆಬ್‌ಸೈಟ್  www.cite.karnataka.gov.in  ಮೂಲಕ ಸ್ವತಃ ಅಥವಾ ಹೊಸಪೇಟೆಯ ಜಂಬುನಾಥ ಹಳ್ಳಿ ರಸ್ತೆಯಲ್ಲಿರುವ ಸರಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯ ಹೆಲ್ಪ್ ಡೆಸ್ಕ್ ಮುಖಾಂತರ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ.

ಹೆಚ್ಚಿನ ವಿವರಗಳಿಗೆ ಸಂಬಂಧಿಸಿದ ಹತ್ತಿರದ ಕೈಗಾರಿಕಾ ತರಬೇತಿ ಸಂಸ್ಥೆಗಳ ಪ್ರಾಚಾರ್ಯರು ಹಾಗೂ ಮೊಬೈಲ್ ಸಂಖ್ಯೆ: 9480729485, 7892993643, 9845137178 ಗಳಿಗೆ ಸಂಪರ್ಕಿಸಲು ಸಂಸ್ಥೆಯ ಪ್ರಾಚಾರ್ಯರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

 

WhatsApp Group Join Now
Telegram Group Join Now
Share This Article
error: Content is protected !!