Ad image

ಜವಾಹರ ನವೋದಯ ವಿದ್ಯಾಲಯ 6 ನೇ ತರಗತಿ ಪ್ರವೇಶಕ್ಕೆ ಅರ್ಜಿ ಆಹ್ವಾನ

Vijayanagara Vani
ಜವಾಹರ ನವೋದಯ ವಿದ್ಯಾಲಯ 6 ನೇ ತರಗತಿ ಪ್ರವೇಶಕ್ಕೆ ಅರ್ಜಿ ಆಹ್ವಾನ
ಮಡಿಕೇರಿ ಜು.22-ಮಾನವ ಸಂಪನ್ಮೂಲ ಇಲಾಖೆಯಡಿಯಲ್ಲಿ ನಡೆಯುವ ಜವಾಹರ ನವೋದಯ ವಿದ್ಯಾಲಯದಲ್ಲಿ 2025-26 ನೇ ಸಾಲಿಗೆ 6 ನೇ ತರಗತಿಗೆ ಪ್ರವೇಶ ಪಡೆಯಲು ಬಯಸುವ ವಿದ್ಯಾರ್ಥಿಗಳಿಂದ ಆನ್ಲೈನ್ ಅರ್ಜಿ ಈಗಾಗಲೇ ಆಹ್ವಾನಿಸಿದ್ದು, ಅರ್ಜಿಯನ್ನು 2024ರ ಸೆಪ್ಟೆಂಬರ್, 16 ರೊಳಗೆ ಅರ್ಹ ಮತ್ತು ಆಸಕ್ತ ವಿದ್ಯಾರ್ಥಿಗಳು ಉಚಿತವಾಗಿ ಸಲ್ಲಿಸಬಹುದು.
ಅರ್ಜಿ ಸಲ್ಲಿಸಲು ಕೊಡಗು ಜಿಲ್ಲೆಯ ಸರ್ಕಾರಿ, ಅರೆ ಸರ್ಕಾರಿ, ಅನುದಾನಿತ, ಸರ್ಕಾರದಿಂದ ಮಾನ್ಯತೆ ಪಡೆದ ಯಾವುದೇ ಪ್ರಾಥಮಿಕ ಶಾಲೆಯಲ್ಲಿ ಐದನೆಯ ತರಗತಿಯಲ್ಲಿ ಓದುತ್ತಿರುವ ವಿದ್ಯಾರ್ಥಿ ವಿದ್ಯಾರ್ಥಿನಿಯರು ಈ ಪರೀಕ್ಷೆ ಬರೆಯಲು ಅರ್ಹರಾಗಿರುತ್ತಾರೆ.
ವಿದ್ಯಾರ್ಥಿಯ ಪಾಲಕರು ಕೊಡಗು ಜಿಲ್ಲೆಯ ನಿವಾಸಿಯಾಗಿದ್ದು, ವಿದ್ಯಾರ್ಥಿಯೂ ಕೂಡಾ ಕೊಡಗು ಜಿಲ್ಲೆಯಲ್ಲೇ ಓದುತ್ತಿರಬೇಕು. ಅಭ್ಯರ್ಥಿ 2013 ರ ಮೇ, 01 ರಿಂದ 2015 ರ ಜುಲೈ, 31 ರೊಳಗೆ ಜನಿಸಿದವರಾಗಿರಬೇಕು. ಅರ್ಜಿ ಸಲ್ಲಿಸಲು ಸೆಪ್ಟೆಂಬರ್, 16 ಕೊನೆಯ ದಿನವಾಗಿದೆ. 2025 ರ ಜನವರಿ, 18 ರಂದು ಪರೀಕ್ಷೆ ನಡೆಯಲಿದೆ. ವಿದ್ಯಾರ್ಥಿಗಳು https://navodaya.gov.in ಗಳಲ್ಲಿ ಸೂಕ್ತ ವಿವರ ಮತ್ತು ದಾಖಲೆಗಳನ್ನು ಅಪ್ಲೋಡ್ ಮಾಡಬಹುದು ಎಂದು ಗಾಳಿಬೀಡು ಜವಾಹರ ನವೋದಯ ವಿದ್ಯಾಲಯದ ಪ್ರಾಚಾರ್ಯರಾದ ಪಂಕಜಾಕ್ಷನ್ ಅವರು ತಿಳಿಸಿದ್ದಾರೆ.

Share This Article
error: Content is protected !!
";