ವಿದ್ಯಾರ್ಥಿ ವೇತನ, ಶುಲ್ಕ ಮರುಪಾವತಿ ಹಾಗೂ ವಿದ್ಯಾಸಿರಿ ಸೌಲಭ್ಯಕ್ಕೆ ಅರ್ಜಿ ಆಹ್ವಾನ

Vijayanagara Vani
ವಿದ್ಯಾರ್ಥಿ ವೇತನ, ಶುಲ್ಕ ಮರುಪಾವತಿ ಹಾಗೂ ವಿದ್ಯಾಸಿರಿ ಸೌಲಭ್ಯಕ್ಕೆ ಅರ್ಜಿ ಆಹ್ವಾನ
ಚಿತ್ರದುರ್ಗ 
ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ವತಿಯಿಂದ 2024-25ನೇ ಸಾಲಿಗೆ ಮಟ್ರಿಕ್ ನಂತರದ ವಿದ್ಯಾರ್ಥಿವೇತನ, ಶುಲ್ಕ ಮರುಪಾವತಿ ಮತ್ತು ವಿದ್ಯಾಸಿರಿ ಸೌಲಭ್ಯಕ್ಕೆ ಅರ್ಜಿ ಆಹ್ವಾನಿಸಲಾಗಿದೆ. ಪಿಯುಸಿ ಮತ್ತು ಪಿಯು ಸಮನಾಂತರ, ಸಾಮಾನ್ಯ ಪದವಿ ಮತ್ತು ಸಂಯೋಜಿತ ಉಭಯ ಪದವಿ ಕೋರ್ಸುಗಳಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ, ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳು ಹಾಗೂ ಪ್ರವರ್ಗ-1ರಲ್ಲಿ ಬರುವ ಅಲೆಮಾರಿ-ಅರೆಅಲೆಮಾರಿ ವಿದ್ಯಾರ್ಥಿಗಳು https://ssp.postmetric.karnataka.gov.in/ ನಲ್ಲಿ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸಲು ಸೆಪ್ಟೆಂಬರ್ 15 ಕಡೆಯ ದಿನವಾಗಿದೆ. ವಿದ್ಯಾರ್ಹತೆ, ಸಲ್ಲಿಸಬೇಕಾದ ದಾಖಲೆಗಳು ಹಾಗೂ ವಿದ್ಯಾರ್ಥಿವೇತನಕ್ಕೆ ಸಂಬAಧಿಸಿದ ಸರ್ಕಾರಿ ಆದೇಶಗಳ ಮಾಹಿತಿಗಾಗಿ ವೆಬ್‌ಸೈಟ್ https://bcwd.karntaka.gov.in ಗೆ ಭೇಟಿ ನೀಡಬಹುದು. ಹೆಚ್ಚಿನ ಮಾಹಿತಿಗಾಗಿ ಇಲಾಖೆಯ ಸಹಾಯವಾಣಿ ಸಂಖ್ಯೆ 8050770005, ಇ-ಮೇಲ್ [email protected] ಮತ್ತು ರಾಜ್ಯ ವಿದ್ಯಾರ್ಥಿವೇತನ ಸಹಾಯವಾಣಿ ಇಮೇಲ್ [email protected] ಹಾಗೂ ದೂರವಾಣಿ ಸಂಖ್ಯೆ 1902 ಗೆ ಸಂಪರ್ಕಿಸಬಹುದು.
WhatsApp Group Join Now
Telegram Group Join Now
Share This Article
error: Content is protected !!