Ad image

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ವಿವಿಧ ಕಾರ್ಯಕ್ರಮ ಆಯೋಜನೆ: ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ

Vijayanagara Vani

ರಾಯಚೂರು ಜುಲೈ 01 : ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ 2025 ನೇ ಸಾಲಿನ ಕ್ರಿಯಾಯೋಜನೆಯಂತೆ ಸಾಂಸ್ಕೃತಿಕ ಸೌರಭ, ಯುವ ಸೌರಭ ಮತ್ತು ಚಿಗುರು ಕಾರ್ಯಕ್ರಮಗಳನ್ನು ಜಿಲ್ಲಾ ಮಟ್ಟದಲ್ಲಿ ಆಯೋಜಿಸಲಾಗಿದ್ದು, ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕರು ತಿಳಿಸಿದ್ದಾರೆ.
ಇಲಾಖೆಯಿಂದ ಸಾಂಸ್ಕೃತಿಕ ಸೌರಭ ಕಾರ್ಯಕ್ರಮವು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ 2025-26ನೇ ಸಾಲಿನಲ್ಲಿ ಸಾಂಸ್ಕೃತಿಕ ಸೌರಭ ಕಾರ್ಯಕ್ರಮವನ್ನು ಜಿಲ್ಲಾ ಮಟ್ಟದಲ್ಲಿ ಏರ್ಪಡಿಸಲಾಗುತ್ತಿದ್ದು, ಈ ಕಾರ್ಯಕ್ರಮದಲ್ಲಿ ಭಾಗವಹಿಸುವವರು ಆಕಾಶವಾಣಿಯ ಬಿ, ‘ಬಿ-ಹೈ’ ಮತ್ತು ‘ಎ’ ಗ್ರೇಡ್ ಕಲಾವಿದರು ಹಾಗೂ ಸರ್ಕಾರದಿಂದ ಕೊಡಮಾಡುವ ಪ್ರಶಸ್ತಿ ಪುರಸ್ಕೃತ ಕಲಾವಿದರಾಗಿರಬೇಕು. ಹಾಗೂ ಕಾರ್ಯಕ್ರಮದಲ್ಲಿ ಭಾಗವಹಿಸುವ ಶಾಸ್ತ್ರೀಯ ಸಂಗೀತ / ಕರ್ನಾಟಕ | ಹಿಂದೂಸ್ಥಾನಿ / ಗಾಯನ ವಾದ್ಯ ಸಂಗೀತ / ಸುಗಮ ಸಂಗೀತ / ವಚನ ಸಂಗೀತ / ಜನಪದ ಗೀತೆಗಳು /ಸಮೂಹ ನೃತ್ಯ / ನೃತ್ಯ ರೂಪಕ / ಜನಪದ ಮೂಡಲಪಾಯ/ ಬಯಲಾಟ/ ಗೊಂಬೆಮೇಳ ಮಾಡುವ ಕಲಾವಿದರು ಸ್ವ-ವಿವರ ಹಾಗೂ ತಂಡದ ವಿವರಗಳನ್ನು ಪಾಸ್ ಪೋರ್ಟ್ ಸೈಜ್ ಭಾವ ಚಿತ್ರದೊಂದಿಗೆ ಜುಲೈ-06 ರೊಳಗೆ ಸಹಾಯಕ ನಿರ್ದೇಶಕರ ಕಚೇರಿ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ರಾಯಚೂರು ಇವರಿಗೆ ತಮ್ಮ ಸ್ವ-ವಿವರವನ್ನು ಸಲ್ಲಿಸಬಹುದಾಗಿದೆ.
ಯುವಸೌರಭ ಕಾರ್ಯಕ್ರಮ: ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ 2025-26ನೇ ಸಾಲಿನಲ್ಲಿ ಯುವಸೌರಭ ಕಾರ್ಯಕ್ರಮವನ್ನು ಜಿಲ್ಲಾ ಮಟ್ಟದಲ್ಲಿ ಏರ್ಪಡಿಸಲಾಗುತ್ತಿದ್ದು, ಈ ಕಾರ್ಯಕ್ರಮದಲ್ಲಿ ಭಾಗವಹಿಸುವವರು ಸುಗಮ ಸಂಗೀತ/ ವಚನ ಸಂಗೀತ/ ಜನಪದ ಗೀತೆಗಳು/ ಸಮೂಹ ನೃತ್ಯ/ ನೃತ್ಯ ರೂಪಕ/ ಜನಪದ ಪ್ರದರ್ಶನ ಕಲಾತಂಡ/ ನಾಟಕ/ ಯಕ್ಷಗಾನ/ ಮೂಡಲಪಾಯ/ ಬಯಲಾಟ/ ಗೊಂಬೆಮೇಳ ಮಾಡುವ ಕಲಾವಿದರು ಸ್ವ-ವಿವರ ಹಾಗೂ ತಂಡದ ಡಮವರಗಳನ್ನು ಪಾಸ್ ಪೋರ್ಟ್ ಸೈಜ್ ಭಾವ ಚಿತ್ರದೊಂದಿಗೆ 15 ರಿಂದ 30 ವರ್ಷದ ವಯೋಮಾನದ ಪ್ರತಿಭಾವಂತ ಯುವ ಕಾಲೇಜು ವಿದ್ಯಾರ್ಥಿಗಳು ಭಾಗವಹಿಸಬಹುದಾಗಿದ್ದು, ವಯಸ್ಸಿನ ದೃಢೀಕರಣದೊಂದಗಿ ಜುಲೈ 6 ರೊಳಗೆ ಸಹಾಯಕ ನಿರ್ದೇಶಕರ ಕಚೇರಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ರಾಯಚೂರು ಇವರಿಗೆ ತಮ್ಮ ಸ್ವ-ವಿವರವನ್ನು ಸಲ್ಲಿಸಬಹುದಾಗಿದೆ.
ಚಿಗುರು ಕಾರ್ಯಕ್ರಮ: ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ 2025-26ನೇ ಸಾಲಿನಲ್ಲಿ ಚಿಗುರು ಕಾರ್ಯಕ್ರಮವನ್ನು ಜಿಲ್ಲಾ ಮಟ್ಟದಲ್ಲಿ ಏರ್ಪಡಿಸಲಾಗುತ್ತಿದೆ. ಕಾರ್ಯಕ್ರಮದಲ್ಲಿ ಭಾಗವಹಿಸುವ ಶಾಸ್ತ್ರೀಯ ಸಂಗೀತ/ ಕರ್ನಾಟಕ/ ಹಿಂದೂಸ್ಥಾನಿ/ ಗಾಯನ ವಾದ್ಯ ಸಂಗೀತ/ ಸುಗಮ ಸಂಗೀತ/ ವಚನ ಸಂಗೀತ/ ಜನಪದ ಗೀತೆಗಳು/ ಸಮೂಹನೃತ್ಯ/ ನೃತ್ಯರೂಪಕ/ ನಾಟಕ/ ಯಕ್ಷಗಾನ/ ಮೂಡಲಪಾಯ/ ಬಯಲಾಟ/ ಗೊಂದೆವೇಳೆ ಹಾಗೂ ಏಕ ಪಾತ್ರಾಭಿನಯ ಮಾಡುವ ಕಲಾವಿದರು 8 ರಿಂದ 14 ವರ್ಷದ ವಯೋಮಾನದ ಪ್ರತಿಭಾವಂತ ಮಕ್ಕಳು ಭಾಗವಹಿಸಬಹುದಾಗಿದ್ದು, ವಯಸ್ಸಿನ ದೃಢೀಕರಣ ಪತ್ರ ಹಾಗೂ ಪ್ರದರ್ಶಿಸಲಿರುವ ಕಲೆಯ ವಿವರವನ್ನು ಪಾಸ್ ಪೋರ್ಟ್ ಸೈಜ್ ಭಾವ ಚಿತ್ರದೊಂದಿಗೆ ಶಾಲಾ ಮುಖ್ಯಸ್ಥರಿಂದ ದೃಢೀಕರಿಸಿ ಜುಲೈ 06ರೊಳಗೆ ಸಹಾಯಕ ನಿರ್ದೇಶಕರ ಕಚೇರಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ರಾಯಚೂರು ಇವರಿಗೆ ತಮ್ಮ ಸ್ವ-ವಿವರವನ್ನು ಸಲ್ಲಿಸಬಹುದಾಗಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Share This Article
error: Content is protected !!
";