Ad image

ಶ್ರೀ ಕನಕದುರ್ಗಮ್ಮ ದೇವಸ್ಥಾನಕ್ಕೆ ಆಡಳಿತಾಧಿಕಾರಿಯಾಗಿ ಸಹಾಯಕ ಆಯುಕ್ತ ಪ್ರಮೋದ್ ನೇಮಕ

Vijayanagara Vani
ಬಳ್ಳಾರಿ,ಜೂ.10:
ನಗರದ ಶ್ರೀ ಕನಕದುರ್ಗಮ್ಮ ದೇವಸ್ಥಾನದ ಆಡಳಿತಾಧಿಕಾರಿಯಾಗಿ ಸಹಾಯಕ ಆಯುಕ್ತರಾದ ಪಿ.ಪ್ರಮೋದ್ ಅವರನ್ನು ನೇಮಿಸಿ ಬೆಂಗಳೂರಿನ ಧಾರ್ಮಿಕ ದತ್ತಿಗಳ ಇಲಾಖೆಯ ಆಯುಕ್ತರು ಆದೇಶಿಸಿದ್ದಾರೆ.
ಶ್ರೀ ಕನಕದುರ್ಗಮ್ಮ ದೇವಸ್ಥಾನವು ಧಾರ್ಮಿಕ ದತ್ತಿ ಇಲಾಖೆಯ ಪ್ರವರ್ಗ ಎ ಅಧಿಸೂಚಿತ ದೇವಸ್ಥಾನವಾಗಿರುವ ದೇವಾಲಯಕ್ಕೆ ನಾಲ್ಕು ವಂಶಪಾರAಪರ್ಯ ಧರ್ಮಕರ್ತರು, ವಾರಸುದಾರರನ್ನು ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮದಾಯ ದತ್ತಿಗಳ ಅಧಿನಿಯಮ 1997 ಕಲಂ 25(ಎ)(3) ರನ್ವಯ ನೇಮಕಾತಿ ಮಾಡುವವರೆಗೆ ಆಡಳಿತಾಧಿಕಾರಿಯಾಗಿ ಸಹಾಯಕ ಆಯುಕ್ತರಾದ ಪಿ.ಪ್ರಮೋದ್ ಅವರು ಪ್ರಭಾರೆ ವಹಿಸಿಕೊಂಡಿರುತ್ತಾರೆ ಎಂದು ಪ್ರಕಟಣೆ ತಿಳಿಸಿದೆ.

Share This Article
error: Content is protected !!
";