ಸರಗಳ್ಳತನ ಮಾಡಿದ ಇಬ್ಬರು ಆರೋಪಿತರನ್ನು ಬಂಧಿಸುವ ಮೂಲಕ ಅವರಿಂದ 238 ಗ್ರಾಂ ಬಂಗಾರದ ಆಭರಣಗಳನ್ನು ವಶಪಡಿಸಿಕೊಂಡಿದ್ದೇವೆ ಎಂದು ರಂಜಿತ್ ಕುಮಾರ್ ಬಂಡಾರು, ಐಪಿಎಸ್, ಜಿಲ್ಲಾ ಪೋಲಿಸ್ ಅಧೀಕ್ಷಕರು ಬಳ್ಳಾರಿ ಇವರು ತಿಳಿಸಿದರು.
ಪಟ್ಟಣದ ಸಂಡೂರು ಠಾಣೆಯಲ್ಲಿ ಅಭರಣಗಳನ್ನು ಪ್ರಸ್ತುತ ಪಡಿಸಿ ಈ ಸಂದರ್ಭದಲ್ಲಿ ಮಾತನಾಡಿ ಬಳ್ಳಾರಿ ಜಿಲ್ಲೆಯಲ್ಲಿ ಇತ್ತೀಚಿಗೆ ಬಸ್ಸುಗಳಲ್ಲಿ, ಜಾತ್ರೆಗಳಲ್ಲಿ, ಸರಗಳ್ಳತನ ಪ್ರಕರಣಗಳು ವರದಿಯಾಗುತ್ತಿದ್ದರಿಂದ ಸದರಿ ಪ್ರಕರಣಗಳಲ್ಲಿ ಕಳೆದುಕೊಂಡ ಮಾಲು ಮತ್ತು ಆರೋಪಿತರ ಪತ್ತೆ ಕುರಿತು ರಂಜಿತ್ ಕುಮಾರ್ ಬಂಡಾರು, ಐಪಿಎಸ್,(ಎಸ್ಪಿ) ಕೆ.ಪಿ.ರವಿಕುಮಾರ್. ಹೆಚ್ಚುವರಿ ಪೊಲೀಸ್ ಅಧೀಕ್ಷಕರು-1, ಬಳ್ಳಾರಿ. ನವೀನ್ ಕುಮಾರ್, ಹೆಚ್ಚುವರಿ ಪೊಲೀಸ್ ಅಧೀಕ್ಷಕರು-2, ಬಳ್ಳಾರಿ, ಶ್ರೀ.ಪ್ರಸಾದ್ ಗೋಕಲೆ, ಉಪಾಧೀಕ್ಷರು, ತೋರಣಗಲ್ಲು ಉಪ-ವಿಭಾಗ, ರವರ ಮಾರ್ಗದರ್ಶನದಲ್ಲಿ ದಾಳಿಯನ್ನು ಮಾಡಿ ವಶಪಡಿಸಿಕೊಳ್ಳಲಾಗಿದೆ ಎಂದರು.
ವಿಶೇಷ ತಂಡದಲ್ಲಿ ಸಂಡೂರು ವೃತ್ತ ನಿರೀಕ್ಷಕ ಮಹೇಶ್ ಗೌಡ, ಸಂಡೂರು, ವೃತ್ಯ ಮತ್ತು ವಿಶ್ವನಾಥ ಹಿರೇಗೌಡರ್ ವೃತ್ತ- ನಿರೀಕ್ಷಕರು, ಕುರುಗೋಡು ವೃತ್ತ ರವರ ನೇತೃತ್ವದಲ್ಲಿ ಸಂಡೂರು ಪೊಲೀಸ್ ಠಾಣೆ ಪಿ.ಎಸ್.ಐ (ಕಾ&ಸು) ವೀರೇಶ ಡಿ. ಮಾಳಶೆಟ್ಟಿ ಹಾಗೂ ಪಿ.ಎಸ್.ಐ (ತನಿಖೆ) ನಾಗರತ್ನ ಕೆ ಮತ್ತು ಚೋರನೂರು ಪೊಲೀಸ್ ಠಾಣೆಯ ಪಿ.ಎಸ್.ಐ(ಕಾ&ಸು) ರೇವಣಸಿದ್ದಪ್ಪ, ಸಂಡೂರು ಪೊಲೀಸ್ ಠಾಣೆಯ ಸಿಬ್ಬಂದಿಗಳಾದ ಅಲ್ಲೂರಯ್ಯ ಸಿ.ಹೆಚ್.ಸಿ.-375. ರುದ್ರಪ್ಪ ಸಿ.ಹೆಚ್.ಸಿ.-464, ವಸೂರಪ್ಪ ಸಿ.ಹೆಚ್.ಸಿ-216. ನಾಸೀರ್ ಕೆ ಸಿ.ಹೆಚ್.ಸಿ.-197. ನಾಗೇಶ ರೆಡ್ಡಿ ಸಿ.ಪಿ.ಸಿ-642, ನಾಗರಾಜು 22-854 ತಿಪ್ಪೇಸ್ವಾಮಿ 2.2.2-118 ಮತ್ತು ಬಿ.ವಿಜಯಕುಮಾರ -124 ರವರನ್ನೊಳಗೊಂಡ ಒಂದು ವಿಶೇಷ ತಂಡವನ್ನು ರಚನೆ ಮಾಡಿದ್ದು. ಅದರಂತೆ ದಿನಾಂಕ: 15-06-2024. ರಂದು ಬೆಳಿಗ್ಗೆ ಸಂಡೂರು ಪೊಲೀಸ್ ಠಾಣೆ-03. ಚೋರನೂರು ಪೊಲೀಸ್ ಠಾಣೆಯ-02 ಕುಡುತಿನ ಪೊಲೀಸ್ ಠಾಣೆಯ-01, ಒಟ್ಟು 06 ಸರಗಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಆರೋಪಿತರಾದ ಚನ್ನವ್ವ ಗಂಡ ಚಂದ್ರು, ವ: 25ವರ್ಷ, ಅಕ್ಕಿ-ಪಿಕ್ಕಿ ಜನಾಂಗ, ಬಲ್ಯೂನ್ [ಪೀಪಿ] ಮಾರಾಟ ಕೆಲ ಸ್ವಗ್ರಾಮ ಸಜ್ಜಿಹೊಲ ಕೊಪ್ಪಳ, ಹಾಲಿವಾಸ: ಕಾರಿಗನೂರು ಕ್ಯಾಂಪ್, ಹೊಸಪೇಟೆ ತಾ, ವಿಜಯನಗರ ಜಿ 2) .ಹನಮವ್ವ ಗಂಡ ಗಣೇಶ, ವ: 21ವರ್ಷ, ಹಕ್ಕಿ-ಪಿಕ್ಕಿ ಜನಾಂಗ, ಬಲ್ಯೂನ್ [ಪೀಪಿ] ಮಾರಾ ಕೆಲಸ, ಸ್ವಗ್ರಾಮ ಸಜ್ಜಿಹೊಲ ಕೊಪ್ಪಳ, ಹಾಲಿವಾಸ: ಕಾರಿಗನೂರು ಕ್ಯಾಂಪ್, ಹೊಸಪೇಟೆ ತಾ, ವಿಜಯನ ಜಿಲ್ಲೆ. ವಶಕ್ಕೆ ಪಡೆದು. ಆರೋಪಿತರಿಂದ ಅಂದಾಜು 11 ಲಕ್ಷದ 19 ಸಾವಿರ ರೂ ಮೌಲ್ಯದ 238 ಬಂಗಾರದ ಆಭರಣಗಳು, ಜಪ್ತು ಪಡಿಸಿಕೊಂಡು ತನಿಖೆ ಮುಂದುವರೆಸಿರುತ್ತಾರೆ.
ಮಾನ್ಯ ರಂಜಿತ್ ಕುಮಾರ್ ಬಂಡಾರು, ಐಪಿಎಸ್, ಜಿಲ್ಲಾ ಪೊಲೀಸ್ ಅಧೀಕ್ಷಕರು, ಬಳ್ಳಾರಿ ಜಿಲ್ಲೆ. ಸರಗಳ್ಳತನ ಪ್ರಕರಣಗಳ ಆರೋಪಿತರನ್ನು ಪತ್ತೆ ಮಾಡಿ ಬಂಗಾರದ ಆಭರಣಗಳನ್ನು ವಶಪಡಿಸಿಕೊಂಡ ಮೇಲ್ಕಂಡ ವಿಶೇಷ ತಂಡದ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಯವರ ಕಾರ್ಯವೈಖರಿಗೆ ಪ್ರಶಂಸೆ ವ್ಯಕ್ತಪಡಿಸಿದರು