Ad imageAd image

ದಿನಕಳೆದಂತೆ ರಾಜ್ಯದಲ್ಲಿ ತಾಪಮಾನ ಏರಿಕೆಯಾಗುತ್ತಲೇ ಇದ್ದು ಇದರ ಜೊತೆಗೆ ವಿದ್ಯುತ್ ಬಳಕೆ ಗಣನೀಯವಾಗಿ ಏರಿಕೆಯಾಗಿದೆ

Vijayanagara Vani

ಏಪ್ರಿಲ್ 2023 ರಲ್ಲಿ, ಗರಿಷ್ಠ ವಿದ್ಯುತ್ ಬೇಡಿಕೆ 16,110 MW ಆಗಿತ್ತು. ಆದರೆ, ಈ ವರ್ಷ, ಏಪ್ರಿಲ್ 5 ರ ವೇಳೆಗೆ ಗರಿಷ್ಠ ಬೇಡಿಕೆ 16,985 MW ತಲುಪಿದೆ.ಏಪ್ರಿಲ್ 2023 ರ ಗರಿಷ್ಠ ಲೋಡ್ ಮತ್ತು ಬಳಕೆಯು 7,800 ಒಘ ಆಗಿತ್ತು, 2024 ರ ಏಪ್ರಿಲ್‌ನಲ್ಲಿ 8,381 MW ಗೆ ಏರಿಕೆಯಾಗಿದೆ. ಅದು ಕೂಡ ಕೇವಲ BESCOM ವ್ಯಾಪ್ತಿಯಲ್ಲಿ ಮಾತ್ರ, ಅದೇ ರೀತಿ, ಏಪ್ರಿಲ್ 2023 ರಲ್ಲಿ ಗರಿಷ್ಠ ಬಳಕೆಯು 4,137.9 ಒಘ ಆಗಿತ್ತು, 2024 ರ ಏಪ್ರಿಲ್‌ ವೇಳೆಗೆ  4,402.26 MW ಗೆ ಏರಿಕೆಯಾಗಿದೆ.

- Advertisement -
Ad imageAd image

ಇಂಧನ ಇಲಾಖೆಯ ಮಾಹಿತಿಯ ಪ್ರಕಾರ “ತಾಪಮಾನ ಏರಿಕೆ ವಿದ್ಯುತ್ ಬೇಡಿಕೆ ಹೆಚ್ಚಳಕ್ಕೆ ಕಾರಣವಾಗಿದೆ. ವಿಶೇಷವಾಗಿ ರಾತ್ರಿಯಲ್ಲಿ ಜನರು ಹವಾನಿಯಂತ್ರಣಗಳನ್ನು ಹೆಚ್ಚಾಗಿ ಬಳಕೆ ಮಾಡುತ್ತಿದ್ದಾರೆ. ಹೆಚ್ಚಿದ ಬೇಡಿಕೆಯನ್ನು ಪೂರೈಸಲು ಎಲ್ಲಾ ರೀತಿಯ ವಿದ್ಯುತ್ ಮೂಲಗಳನ್ನು ಗರಿಷ್ಠ ಸಾಮರ್ಥ್ಯಕ್ಕೆ ಬಳಸಿಕೊಳ್ಳಲಾಗುತ್ತಿದೆ.ರಾಯಚೂರು  ಶಾಖೋತ್ಪನ್ನ ವಿದ್ಯುತ್ ಕೇಂದ್ರದ (ಆರ್‌ಟಿಪಿಎಸ್) ಒಂದು ಘಟಕವನ್ನು ಹೊರತುಪಡಿಸಿ ಎಲ್ಲಾ ಶಾಖೋತ್ಪನ್ನ ಕೇಂದ್ರಗಳುಕಾರ್ಯನಿರ್ವಹಿಸುತ್ತಿವೆ ಎಂದು ಹೇಳಿದ್ದಾರೆ. ಸೌರ ವಿದ್ಯುತ್ ಉತ್ಪಾದನೆ ಉತ್ತಮ ಸ್ಥಿತಿಯಲ್ಲಿದೆ. ಹಗಲಿನಲ್ಲಿ ಸಂಪೂರ್ಣವಾಗಿ ಬಳಕೆ ಮಾಡಲಾಗುತ್ತಿದೆ. ಈ ಆರ್‌ಟಿಪಿಎಸ್‌ನ ಏಳು ಘಟಕಗಳು ಕಾರ್ಯನಿರ್ವಹಿಸುತ್ತಿವೆ, ಸ್ಥಾಪಿತ ಸಾಮರ್ಥ್ಯದ 1110 ಮೆಗಾವ್ಯಾಟ್ ಉತ್ಪಾದಿಸುತ್ತಿದೆ. ಬಳ್ಳಾರಿ ಶಾಖೋತ್ಪನ್ನ ವಿದ್ಯುತ್ ಕೇಂದ್ರದ (ಬಿಟಿಪಿಎಸ್) ಮೂರು ಘಟಕಗಳು 1,720 .1.700 1.133 ಮೆಗಾವ್ಯಾಟ್ ವಿದ್ಯುತ್ ಉತ್ಪಾದಿಸುತ್ತಿವೆ. ಯರಮರಸ್ ಥರ್ಮಲ್ ಪವರ್ ಸ್ಟೇಷನ್ (YTPS)ನ ಮೂರು ಘಟಕಗಳು ಕಾರ್ಯನಿರ್ವಹಿಸುತ್ತಿವೆ ಎಂದು ಮಾಹಿತಿ ನೀಡಿದ್ದಾರೆ.ದಾಖಲೆಗಳ ಪ್ರಕಾರ ಏಪ್ರಿಲ್ 29, 2024ರಂದು ಗರಿಷ್ಠ ಸೌರ ಮತ್ತು ಪವನ ವಿದ್ಯುತ್ ಉತ್ಪಾದನೆಯು 6.562 ಒಘ ಆಗಿದ್ದು, ಶರಶಕ್ತಿಯಿಂದ 6236.ಒಘ  ವಿದ್ಯುತ್ ಉತ್ಪಾದನೆಯಾಗಿದೆ ಎಂದು ತಿಳಿದುಬಂದಿದೆ.ಕರ್ನಾಟಕ ಪವರ್ ಕಾರ್ಪೊರೇಷನ್ ಲಿಮಿಟೆಡ್‌ ನ ವ್ಯವಸ್ಥಾಪಕ ನಿರ್ದೇಶಕ ಪಂಕಜ್ ಕುಮಾರ್ ಪಾಂಡೆ ಮಾತನಾಡಿ, ಪೀಕ್ ಅವರ್‌ನಲ್ಲಿ ವಿದ್ಯುತ್ ಬೇಡಿಕೆಯನ್ನು ವಿಂಗಡಿಸಲಾಗಿದೆ. ನೀರಾವರಿ ಸೆಟ್‌ಗಳಿಂದ (ಐಪಿ ಸೆಟ್) 1,550 ಮೆಗಾವ್ಯಾಟ್ ವಿದ್ಯುತ್ ಬೇಡಿಕೆಯನ್ನು ರಾತ್ರಿಯಿಂದ ಹಗಲಿಗೆ ವರ್ಗಾಯಿಸಲಾಗಿದೆ. ಈ ವಿದ್ಯುತ್ ನ್ನು ಸೌರಶಕ್ತಿಯಿಂದ ಪೂರೈಸಲಾಗುತ್ತಿದೆ ಎಂದು ಹೇಳಿದ್ದಾರೆ. ಪಂಪ್ ವಿದ್ಯುತ್ ಬಳಕೆ ಹೆಚ್ಚುತ್ತಿರುವ ಕಾರಣ, ಗೃಹ ಜ್ಯೋತಿ ಯೋಜನೆ (200 ಯೂನಿಟ್‌ಗಿಂತ ಕಡಿಮೆ ವಿದ್ಯುತ್ ಬಳಕೆಯಾಗಿದ್ದರೆ ಶೂನ್ಯ ಬಿಲ್ ಉತ್ಪತ್ತಿಯಾಗುತ್ತದೆ) ಅಡಿಯಲ್ಲಿ ಪ್ರಯೋಜನ ಪಡೆಯುತ್ತಿದ್ದ ಅನೇಕ ಗ್ರಾಹಕರು ಈಗ ಬಿಲ್‌ಗಳನ್ನು ಪಡೆಯುತ್ತಿದ್ದಾರೆಂದು ತಿಳಿದು ಬಂದಿದೆ .

WhatsApp Group Join Now
Telegram Group Join Now
Share This Article
error: Content is protected !!