ನಗರದ ಹೃದಯಭಾಗದಲ್ಲಿನ ರಾಯಲ್ ಸರ್ಕಲ್‌ನಲ್ಲಿ  ಚರಂಡಿ ನೀರು ರಸ್ತೆಗೆ ಕಣ್ಣು ಮುಚ್ಚಿ ಕುಳಿತ ಪಾಲಿಕೆ ಅಧಿಕಾರಿಗಳು

Vijayanagara Vani
ನಗರದ ಹೃದಯಭಾಗದಲ್ಲಿನ ರಾಯಲ್ ಸರ್ಕಲ್‌ನಲ್ಲಿ  ಚರಂಡಿ ನೀರು ರಸ್ತೆಗೆ ಕಣ್ಣು ಮುಚ್ಚಿ ಕುಳಿತ ಪಾಲಿಕೆ ಅಧಿಕಾರಿಗಳು

ಬಳ್ಳಾರಿ : ಮೇ 27  ನಗರದ ಹೃದಯಭಾಗದಲ್ಲಿರುವ ಗಡಿಗಿ ಚೆನ್ನಪ್ಪ ವೃತ್ತದಲ್ಲಿ ಕಳೆದು ಎರಡು ದಿನಗಳಿಂದ ಚರಂಡಿ ನೀರು ರಸ್ತೆಯ ಮೇಲೆ ಹರಿಯುತ್ತಿದ್ದು ಇದರಿಂದ ಪಾದಚಾರಿಗಳು ಓಡುತ್ತಾ ಎಗರುತ್ತಾ ಓಡಾಡಬೇಕಾದ ಪರಿಸ್ಥಿತಿ ಎದುರಾಗಿದೆ. ಹೌದು ರಾಯಲ್ ಸರ್ಕಲ್ನಲ್ಲಿ ರಸ್ತೆ ಅಗಲೀಕರಣದ ಮಾಡಲು ಮಹಾನಗರ ಪಾಲಿಕೆಯ ಮುಂದೆ ಇದ್ದ ವಾಣಿಜ್ಯ ಕಟ್ಟಡವನ್ನು ತೆರವುಗೊಳಿಸಲಾಗುತ್ತಿದೆ, ಕಾಮಗಾರಿ ನಡೆಯುವ ವೇಳೆ ಒಳಚರಂಡಿ ಡ್ಯಾಮೇಜ್ ಆಗಿ ಅದರಿಂದ ಕೊಚ್ಚೆ ನೀರು ಸರ್ಕಲ್ ನಲ್ಲಿರುವ ರಸ್ತೆಯ ಮೇಲೆಲ್ಲಾ ಹರಿಯುತ್ತಿದೆ, ಇದರಿಂದ ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರು ಗಟಾರ್ ನೀರಿನ ದುರ್ನಾತದಿಂದ ಮೂಗು ಮುಚ್ಚಿಕೊಂಡು ಪಾಲಿಕೆ ಅಧಿಕಾರಿಗಳಿಗೆ ಹಿಡಿಶಾಪ ಹಾಕುತ್ತಾ ಓಡಾಡುತ್ತಿದ್ದಾರೆ

ಕೂಗಳತೆಯಲ್ಲೇ ಪಾಲಿಕೆ ಕಛೇರಿಯಿದ್ದು ಅದರ ಅಧಿಕಾರಿಗಳು ಸಹ ಇದೇ ಕೊಚ್ಚೆ ನೀರಿನಲ್ಲಿ ತಮ್ಮ ದ್ವಿಚಕ್ರ ವಾಹನ ಮತ್ತು ಕಾರಿನಲ್ಲಿ ನೋಡುತ್ತಲೇ ಕಣ್ಣಿದ್ದು ಕುರುಡರಂತೆ, ಮೂಗಿದ್ದು ಮೂಗಿಲ್ಲದಂತೆ ಓಡಾಡುತ್ತಿದ್ದಾರೆ ವಿನಃ ದುರಸ್ಥಿಗೆ ಮುಂದಾಗುತ್ತಿಲ್ಲ. ಸಂಬಂಧಿಸಿದ ಅಧಿಕಾರಿಗಳು ತಕ್ಷಣ ಓಪನ್ ಡೆಂಜನೇಜ್ನ್ನು ರಿಪೇರಿ ಮಾಡಿಸಿ ರಸ್ತೆಗೆ ಚರಂಡಿ ನೀರು ಹರಿಯುವುದನ್ನು ನಿಲ್ಲಸಬೇಕೆಂದು ಸಾರ್ವಜನಿಕರುದ ಪಾಲಿಕೆ ಅಧಿಕಾರಿಗಳನ್ನು ಒತ್ತಾಯಿಸಿದ್ದಾರೆ.

.
WhatsApp Group Join Now
Telegram Group Join Now
Share This Article
error: Content is protected !!