ಹೆಚ್ಚು ಅಂಕಪಡೆದ ವಿದ್ಯಾರ್ಥಿಗೆ ಸನ್ಮಾನ:

Vijayanagara Vani
ಹೆಚ್ಚು ಅಂಕಪಡೆದ ವಿದ್ಯಾರ್ಥಿಗೆ ಸನ್ಮಾನ:

ಸಿರುಗುಪ್ಪ.ಜೂ.07:- ಎಸ್.ಎಸ್.ಎಲ್.ಸಿ. ಪರೀಕ್ಷೆಯು ವಿದ್ಯಾರ್ಥಿಗಳ ಜೀವನದ ಪ್ರಮುಖ ಘಟ್ಟವಾಗಿದೆ, ಈ ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸಿದರೆ ದ್ವಿತಿಯ ಪಿ.ಯು.ಸಿ. ಪರೀಕ್ಷೆಯನ್ನು ಸುಗಮವಾಗಿ ಎದುರಿಸಲು ಅನುಕೂಲವಾಗುತ್ತದೆ ಎಂದು ಬಿ.ಇ.ಒ. ಹೆಚ್.ಗುರಪ್ಪ ತಿಳಿಸಿದರು.
ನಗರದ ವಿಜಯಮೇರಿ ಕನ್ನಡ ಮತ್ತು ಆಂಗ್ಲ ಮಾಧ್ಯಮ ಪ್ರೌಢ ಶಾಲೆಯಲ್ಲಿ ನಡೆದ 2023-24ನೇ ಸಾಲಿನಲ್ಲಿ ತಾಲ್ಲೂಕಿಗೆ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿ ಕೆ.ಎಂ.ನ0ದೀಶ್‌ಗೆ ಏರ್ಪಡಿಸಿದ್ದ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ವಿದ್ಯಾರ್ಥಿಗಳು ನಿರ್ಧಿಷ್ಟವಾದ ಜ್ಞಾನವನ್ನು ಗಳಿಸುವ ಗುರಿಯನ್ನು ಹೊಂದುವ ಮನೋಭಾವ ಬೆಳೆಸಿಕೊಳ್ಳಬೇಕು, ಉತ್ತಮ ನಾಗರಿಕರಾಗಿ ಉನ್ನತ ಹುದ್ದೆಯನ್ನು ಪಡೆದು ಜೀವನದಲ್ಲಿ ಯಶಸ್ವಿಯಾಗಬೇಕು.
2023-24ನೇ ಸಾಲಿನ ಪ್ರಥಮ ಫಲಿತಾಂಶದಲ್ಲಿ ಕೆ.ಎಂ.ನ0ದೀಶ ಅವರಿಗೆ 625ಕ್ಕೆ 604 ಅಂಕಗಳನ್ನು ಲಭಿಸಿದ್ದವು, ನಂತರ ಮರು ಮೌಲ್ಯ ಮಾಪನ ಮಾಡಿಸಿದಾಗ 625ಕ್ಕೆ 619 ಅಂಕಗಳು ಪಡೆದು ತಾಲ್ಲೂಕಿಗೆ ಪ್ರಥಮ ಮತ್ತು ಜಿಲ್ಲೆಗೆ ದ್ವಿತಿಯ ಸ್ಥಾನ ಹಾಗೂ ರಾಜ್ಯಕ್ಕೆ 7ನೇ ಸ್ಥಾನ ಪಡೆದಿದ್ದಾನೆ ಎಂದು ಹೇಳಿದರು.
ಶಾಲಾ ಆಡಳಿತ ಮಂಡಳಿಯ ಕಾರ್ಯದರ್ಶಿ ಸಿಸ್ಟರ್ ಲೂರ್ದ ಮೇರಿ, ಮುಖ್ಯಗುರು ಸಿಸ್ಟರ್ ಸಂತೋಷ ಮೇರಿ ಹಾಗೂ ಬಿ.ಆರ್.ಸಿ ತಮ್ಮನಗೌಡ ಪಾಟೀಲ್, ಸಿ.ಆರ್.ಪಿ.ಮಾರುತಿ, ದೈಹಿಕ ಶಿಕ್ಷಕ ಉಪೇಂದ್ರ ಹಾಗೂ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಇದ್ದರು.
ಸಿರುಗುಪ್ಪ: ನಗರದ ವಿಜಯಮೇರಿ ಕನ್ನಡ ಮತ್ತು ಆಂಗ್ಲ ಮಾಧ್ಯಮ ಪ್ರೌಢ ಶಾಲೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಎಸ್.ಎಸ್.ಎಲ್.ಸಿ.ಪರೀಕ್ಷೆಯಲ್ಲಿ ತಾಲ್ಲೂಕಿಗೆ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿ ಕೆ.ಎಂ.ನoದೀಶ್‌ಗೆ ಸನ್ಮಾನಿಸಲಾಯಿತು.

WhatsApp Group Join Now
Telegram Group Join Now
Share This Article
error: Content is protected !!